Breaking: ಅ.3ರಿಂದ ಮೈಸೂರು ದಸರಾ ಮಹೋತ್ಸವ 2024 ಆರಂಭ; 21 ದಿನ ದೀಪಾಲಂಕಾರ

By Sathish Kumar KH  |  First Published Aug 12, 2024, 6:35 PM IST

ವಿಶ್ವವಿಖ್ಯಾತ ದಸರಾ ಮಹೋತ್ಸವ 2024 ಅಕ್ಟೋಬರ್ 3ರಿಂದ ಅ.12ರವರೆಗೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.


ಬೆಂಗಳೂರು (ಆ.12): ವಿಶ್ವವಿಖ್ಯಾತ ದಸರಾ ಮಹೋತ್ಸವ 2024 ಅಕ್ಟೋಬರ್ 3ರಿಂದ ಅ.12ರವರೆಗೆ ನಡೆಯಲಿದೆ. ಒಟ್ಟು 21 ದಿನಗಳ ಕಾಲ ದೀಪಾಲಂಕಾರ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಈ ಕುರಿತು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 3 ರಿಂದ 12 ನೇ ತಾರೀಕಿನವರೆಗೆ ದಸರಾ ಮಹೋತ್ಸವ ನಡೆಯಲಿದೆ. ಅ.3ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅ.12ನೇ ತಾರೀಕು ಜಂಬೂ ಸವಾರಿ ನಡೆಯಲಿದೆ. ಇನ್ನು ಯಾರು ಉದ್ಘಾಟನೆ ಮಾಡಬೇಕು ಎಂಬುದರ ತೀರ್ಮಾನ ಮಾಡಲು ಸಬೆಯಲ್ಲಿ ಸರ್ವಾನುಮತದಿಂದ ನನಗೆ ಅಧಿಕಾರ ಕೊಟ್ಟಿದ್ದಾರೆ. ಕಾರ್ಯಕಾರಿ ಸಮಿತಿ ಮಾಡಿ ಅಲ್ಲಿ ಕೆಲ ನಿರ್ಣಯ ಮಾಡ್ತಾರೆ. ಈ ಬಾರಿ ಅದ್ಧೂರಿ, ಆಕರ್ಷಣೆ ಯಾಗಿ ದಸರಾ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.

Tap to resize

Latest Videos

undefined

ಕೆಆರ್‌ಎಸ್‌ ಅಣೆಕಟ್ಟೆಗೆ ಸ್ಟಾಪ್‌ಲಾಕ್ ಗೇಟ್ ಅಳವಡಿಕೆ ಅಗತ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಈ ಬಾರಿ ಒಳ್ಳೇ ಮಳೆಯಾಗಿದೆ, ಜಲಾಶಯ ತುಂಬಿವೆ. ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಕಳೆದ ಬಾರಿ ಬರಗಾಲ ಇದ್ದುದ್ದರಿಂದ ಅದ್ದೂರಿಯಾಗಿ ದಸರಾ ಮಾಡಲು ಆಗಿರಲಿಲ್ಲ. ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡುತ್ತೇವೆ. ದಸರಾ ಉದ್ಘಾಟನೆ ದಿನದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಉಳಿದ ಕಾರ್ಯಕ್ರಮಗಳು ಉದ್ಘಾಟನೆ ಆಗುತ್ತವೆ. ದಸರಾ ಉದ್ಘಾಟನೆ ದಿನವೇ ವಸ್ತು ಪ್ರದರ್ಶನ ಉದ್ಘಾಟನೆ ಆಗಲಿದೆ. ಅವತ್ತೆ ಎಲ್ಲಾ ಮಳಿಗೆಗಳು ಭರ್ತಿ ಆಗಿರಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

21 ದಿನಗಳೂ ದೀಪಾಲಂಕಾರ: ಇನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ದೀಪಾಲಂಕಾರ 21 ದಿನಗಳ ಕಾಲ ಇರಲಿದೆ. ಜಂಬೂ ಸವಾರಿ ಮುಗಿದ ಮೇಲೂ 11 ದಿನ ದೀಪಾಲಂಕಾರ ಇರುತ್ತದೆ. ಈ ಬಾರಿ ಅದ್ಧೂರಿ ಹಾಗೂ ಆಕರ್ಷಣೀಯವಾಗಿ ದೀಪಾಲಂಕಾರ ಇರಬೇಕು ಅಂತ ಹೇಳಿದ್ದೇನೆ. ಪ್ರವಾಸಿಗರು ಬಂದಾಗ ಸರಿಯಾದ ಮಾರ್ಗದರ್ಶನ ಮಾಡುವುದು, ಟ್ರಾಫಿಕ್ ಮ್ಯಾನೇಜ್ ಮಾಡಬೇಕು. ಪ್ರವಾಸಿಗರಿಗೆ ಭದ್ರತೆ ಸರಿಯಾಗಿ ಒದಗಿಸಬೇಕು ಅಂತ ಸೂಚನೆ ಕೊಟ್ಟಿದ್ದೇವೆ. ಇನ್ನು ಗೋಲ್ಡ್ ಕಾರ್ಡ್ ಮಾಡುವ ವಾಡಿಕೆ ಇದ್ದು, ಅದನ್ನ ಮಾಡುತ್ತೇವೆ. ದಸರಾ ಜನರ ಉತ್ಸವ ಆಗಬೇಕು. ಇದು ನಾಡ ಹಬ್ಬ, ಹಾಗಾಗಿ ಜನರ ಉತ್ಸವವಾಗುವಂತೆ ಮಾಡಲಾಗುವುದು ಎಂದರು.

ಕಳೆದ ವರ್ಷ ದಸರಾ ಮಹೋತ್ಸವಕ್ಕೆ 30 ಕೋಟಿ  ರೂ. ಖರ್ಚು ಮಾಡಿದ್ದೆವು. ಈ ಬಾರಿ ವಿಜೃಂಭಣೆಯಿಂದ ಮಾಡೋಕೆ ಎಷ್ಟು ಖರ್ಚಾಗುತ್ತೋ ಅಷ್ಟು ಅನುದಾನ ಒದಗಿಸುತ್ತೇವೆ. ಇನ್ನು ಗೋಲ್ಡ್ ಕಾರ್ಡ್ ದುರ್ಬಳಕೆ ಆಗದೇ ಇರೋ ರೀತಿ ಸಚಿವ ಮಹದೇವಪ್ಪ ಕ್ರಮ ತಗೆದುಕೊಳ್ತಾರೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ‌ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ. ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು. ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾರ್ಥಕ‌ ಕೆಲಸಗಳ ಪ್ರದರ್ಶನ ಮತ್ತು ತಿಳಿವಳಿಕೆ ಮೂಡಿಸಬೇಕು.ಟ್ಯಾಬ್ಲೋಗಳಲ್ಲಿ ಹೊಸತನ ಇರಲಿ ಎಂದು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ಗೋವಾ ನಡುವಿನ ಎಲ್ಲ ರೈಲುಗಳ ಸಂಚಾರ ಸ್ಥಗಿತ

ದಸರಾ ಮಹೋತ್ಸವದ ಬಗ್ಗೆ ಅಧಿಕಾರಿಗಳಿಗೆ ನೀಡಲಾದ ಸೂಚನೆಗಳು:
* ದೀಪಾಲಂಕಾರ ಈ ಬಾರಿ 21 ದಿನ ಇರಲಿ.
* ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ. 
* ಗೋಲ್ಡ್ ಕಾರ್ಡ್ ಗಳನ್ನು ಮುಂಚಿತವಾಗಿ ಮಾಡಿ.
* ಪಾರ್ಕಿಂಗ್, ಟ್ರಾಫಿಕ್, ಬಂದೋಬಸ್ತ್ ಕಡೆಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಕೊಡಬೇಕು.
* ಕರ್ನಾಟಕ ಸಂಭ್ರಮ 50 ನವೆಂಬರ್ ವರೆಗೂ ನಡೆಯಲ. ದಸರಾದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಿ.
* ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿ ಸಭೆ ನಿರ್ಧರಿಸಿತು. 
* ಏರ್ ಶೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ನಡೆಸಲೂ ವಿನಂತಿಸಲಾಗುವುದು.
* ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು.
* ಮಾಮೂಲು ಹಳೆ ಪದ್ಧತಿಗಳಲ್ಲೇ ಮಾಡುವುದಕ್ಕಿಂತ ಅಪ್‌ಗ್ರೇಡ್ (ಉನ್ನತೀಕರಿಸಿ) ಮಾಡಿ.

click me!