ಟ್ರ್ಯಾಕ್ಟರ್‌ಗಳನ್ನೇ ಮೀರಿಸುವಂತೆ ಉಳುಮೆ ಮಾಡಿದ ವಿಜಯಪುರದ ಜೋಡೆತ್ತುಗಳು!

By Suvarna News  |  First Published Aug 12, 2024, 4:19 PM IST

ರೈತನ ನಿಜವಾದ ಮಿತ್ರ ಎಂದರೆ ಅದು ಎತ್ತುಗಳು. ಹಿಡಿ ಹುಲ್ಲಿಗಾಗಿ ಇಡೀ ಜೀವನವನ್ನೆ ಅನ್ನದಾತನಿಗೆ ಸಮರ್ಪಿಸುವ ನಿಜವಾದ ಜೀವಂತ ದೇವರುಗಳೇ ಈ ಎತ್ತುಗಳು. ವಿಜಯಪುರದಲ್ಲಿ ಜೋಡೆತ್ತುಗಳು ಮಾಡಿದ ಸಾಧನೆಯನ್ನ ಕೇಳಿದ್ರೆ ನೀವು ನಿಜಕ್ಕು ನಿಬ್ಬೆರಗಾಗುತ್ತೀರಿ. ಕೇವಲ 6 ಗಂಟೆಯಲ್ಲಿ 28 ಎಕರೆ ಭೂಮಿಯಲ್ಲಿ ಉಳುಮೆ ಮಾಡುವ ಮೂಲಕ ಟ್ರಾಕ್ಟರ್‌ಗಳನ್ನೆ ಮೀರಿಸಿ ಸಾಧನೆ ಮಾಡಿವೆ..


- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ಆ.12) : ರೈತನ ನಿಜವಾದ ಮಿತ್ರ ಎಂದರೆ ಅದು ಎತ್ತುಗಳು. ಹಿಡಿ ಹುಲ್ಲಿಗಾಗಿ ಇಡೀ ಜೀವನವನ್ನೆ ಅನ್ನದಾತನಿಗೆ ಸಮರ್ಪಿಸುವ ನಿಜವಾದ ಜೀವಂತ ದೇವರುಗಳೇ ಈ ಎತ್ತುಗಳು. ವಿಜಯಪುರದಲ್ಲಿ ಜೋಡೆತ್ತುಗಳು ಮಾಡಿದ ಸಾಧನೆಯನ್ನ ಕೇಳಿದ್ರೆ ನೀವು ನಿಜಕ್ಕು ನಿಬ್ಬೆರಗಾಗುತ್ತೀರಿ. ಕೇವಲ 6 ಗಂಟೆಯಲ್ಲಿ 28 ಎಕರೆ ಭೂಮಿಯಲ್ಲಿ ಉಳುಮೆ ಮಾಡುವ ಮೂಲಕ ಟ್ರಾಕ್ಟರ್‌ಗಳನ್ನೆ ಮೀರಿಸಿ ಸಾಧನೆ ಮಾಡಿವೆ..

Tap to resize

Latest Videos

undefined

ಗುಮ್ಮಟನಗರಿಯಲ್ಲಿ ಜೋಡೆತ್ತುಗಳ ಸಾಧನೆ!

ಜಿಲ್ಲೆಯಲ್ಲಿ ಜೋಡೆತ್ತುಗಳು ವಿಶೇಷ ಸಾಧನೆ ಮಾಡಿ ಜನರನ್ನ ನಿಬ್ಬೆರಾಗುವ ಹಾಗೆ ಮಾಡಿವೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಹೊಲದಲ್ಲಿ ಉಳುವೆ, ಕುಂಟೆ, ಹರಗುವ ಕಾರ್ಯ ಮಾಡಿ ಯುವ ರೈತರ ಜೊತೆಗೆ ಎತ್ತುಗಳು ಸಾಧನೆ ಮಾಡಿ ಭೇಷ್‌ ಎನಿಸಿಕೊಂಡಿವೆ. ಅಂದಹಾಗೇ ಅಪರೂಪದ ಸಾಧನೆ ಮಾಡಿರೋದು ವಿಜಯಪುರ ತಾಲೂಕಿನ ಗುಗದಡ್ಡಿ ಗ್ರಾಮದ ಭೀರಪ್ಪ ರೇಬಿನಾಳ ಎನ್ನುವ ಯುವ ರೈತನ ಮನೆಯ ಜೋಡೆತ್ತುಗಳು. ಕೇವಲ 6 ಗಂಟೆಯಲ್ಲಿ 28 ಏಕರೆ ಕೃಷಿ ಭೂಮಿಯಲ್ಲಿ ಕುಂಟೆ ಹೊಡೆದು ಜೋಡೆತ್ತುಗಳು ಸಾಧನೆ ಮಾಡಿವೆ. ವಿಜಯಪುರ ತಾಲೂಕಿನ ಗುಗದಡ್ಡಿ ಗ್ರಾಮದ ಭೀರಪ್ಪ ರೆಬಿನಾಳ ಎಂಬುವರ ಜೋಡೆತ್ತುಗಳೂ ಈ ಸಾಧನೆಯನ್ನ ಮಾಡಿ ಬಲೇ ರೆ ಬಸವ ಎನಿಸಿಕೊಂಡಿವೆ.

ವಿಜಯಪುರ ಪಾಲಿಕೆಯಲ್ಲಿ ಸದ್ದು ಮಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ: ಸಭೆಯಲ್ಲಿ ಶಾಕಿಂಗ್ ವರದಿ ಬಿಚ್ಚಿಟ್ಟ ಆರೋಗ್ಯಾಧಿಕಾರಿ!

ಸಿಂದಗಿಯಲ್ಲು ಬಸವಗಳ ಸಾಧನೆ!

ರೈತರ ಭೀರಪ್ಪರ ಎತ್ತುಗಳು ಕೇವಲ 6 ಗಂಟೆಯಲ್ಲಿ 28 ಎಕರೆಯ ತೊಗರಿ ಬೆಳೆಯಲ್ಲಿ ಕುಂಟೆ ಹೊಡೆದು ಸಾಧನೆ ಮಾಡಿದ್ರೆ, ಇತ್ತ ಸಿಂದಗಿ ತಾಲೂಕಿನಲ್ಲು ಜೋಡೆತ್ತುಗಳ ಸಾಧನೆ ಗಮನ ಸೆಳೆಯುತ್ತಿದೆ. ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ರೈತ ಮಲ್ಲಿಕಾರ್ಜುನ್‌ ತಳವಾರ ಎಂಬುವರ ಎತ್ತುಗಳು 10 ಗಂಟೆಗಳಲ್ಲಿ 20 ಎಕರೆಯಲ್ಲಿ ಹರಗಿ ಸಾಧನೆ ಮಾಡಿವೆ.. ಹತ್ತಿ ಬೆಳೆಯಲ್ಲಿ ಸತತ 10 ಗಂಟೆ ಹರಗಿ 20 ಎಕರೆ ಪೂರ್ಣಗೊಳಿಸಿರೋದು ಗಮನಾರ್ಹವಾಗಿದೆ. ಎತ್ತುಗಳ ಸಾಧನೆಗೆ ಸ್ಥಳೀಯರು ಭೇಷ್‌ ಎಂದಿದ್ದಾರೆ.

ಅಷ್ಟಕ್ಕು ಇದು ಸಾಧನೆ ಹೇಗೆ?!

ಎತ್ತುಗಳ ಸಾಮರ್ಥ್ಯ, ರಂಟೆ, ಕುಂಟೆ ಹೊಡೆಯುವ ರೈತರ ಸಾಮರ್ಥ್ಯಕ್ಕೆ ತಕ್ಕಂತೆ ಇಂತಿಷ್ಟು ಗಂಟೆಗೆ ಇಂತಿಷ್ಟು ಹೊಲದಲ್ಲಿ ಉಳುಮೆ ಮಾಡಬಹುದು ಎಂದು ಅಂದಾಜಿಸಬಹುದಾಗಿದೆ. ಸಾಮಾನ್ಯವಾಗಿ ಜೋಡೆತ್ತುಗಳ ಮೂಲಕ ರೈತರು 10 ಗಂಟೆಯಲ್ಲಿ 7 ರಿಂದ 8 ಎಕರೆಯಲ್ಲಿ ಉಳುಮೆ ಮಾಡಬಹುದು. ಅದು ಸತತವಾಗಿ 10 ಗಂಟೆ ಉಳುಮೆ ಮಾಡೋದು ಕಷ್ಟ-ಸಾಧ್ಯ. ಆಗಾಗ್ಗ ಬ್ರೇಕ್‌ ತೆಗೆದುಕೊಂಡು ಉಳುಮೆ, ಹರಗುವಿಕೆ, ರೆಂಟೆ ಕಾರ್ಯಗಳನ್ನ ಮಾಡಲಾಗುತ್ತೆ. ಆದ್ರೆ ಇಲ್ಲಿ ಕೇವಲ 6 ಗಂಟೆಯಲ್ಲಿ 28 ಏಕರೆ ಹರಗಿರೋದು ಹಾಗೂ 10 ಗಂಟೆ ಸತತವಾಗಿ ಎತ್ತುಗಳು 20 ಎಕರೆಯಲ್ಲಿ ಹರಗಿದ್ದು ಸಾಧನೆಯೇ ಎನ್ನಲಾಗಿದೆ. ಟ್ರಾಕ್ಟರ್‌ ಮೂಲಕವು ೨೮ ಎಕರೆ ವರೆಗು ಹರಗುವುದು ಕಷ್ಟ ಎನ್ನಲಾಗಿದೆ..

ದೇಶದಲ್ಲಿ ರೈಲ್ವೆ, ರಕ್ಷಣಾ ಇಲಾಖೆ ಬಿಟ್ರೆ ಅತಿ ಹೆಚ್ಚು ಭೂ ಆಸ್ತಿ ಇರೋದು ವಕ್ಫ್ ಬಳಿ! ಅಂಕಿ-ಅಂಶ ಸಮೇತ ಬಿಚ್ಚಿಟ್ಟ ಯತ್ನಾಳ್!

ಊರಲ್ಲಿ ಬಸವನ ಮೆರವಣಿಗೆ!

ಇನ್ನು ಅಪರೂಪದ ಸಾಧನೆ ಮಾಡಿದ ಜೋಡಿ ಎತ್ತುಗಳನ್ನ ಹಾಗೂ ರೈತರನ್ನ ಮೆರವಣಿಗೆ ಮಾಡಲಾಗಿದೆ. ಹಲಗೆ ಬಾರಿಸಿ, ಗುಲಾಲ್‌ ಹಾರಿಸಿ ಮೆರವಣಿಗೆ ಮಾಡಲಾಗಿದೆ. ಮೆರವಣಿಯುದ್ದಕ್ಕು ಗ್ರಾಮಸ್ಥರು ಭಲಾ ರೇ ಬಸವಾ.. ಭಲಾ ರೇ ಬಸವಾ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಸಾಧನೆ ಮಾಡಿದ ಎತ್ತುಗಳು ಸೇರಿ ಯುವ ರೈತರಿಗೆ ಸನ್ಮಾನಿಸಲಾಗಿದೆ..

click me!