ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?

ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?

Published : Jul 07, 2026, 01:09 PM IST
ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲು ಸಿದ್ಧತೆ ನಡೆದಿದ್ದು, ಇದಕ್ಕೆ 5 ಕೋಟಿ ರೂ. ವೆಚ್ಚದ ಅಂದಾಜಿದೆ. ಆದರೆ, ಇದು ಸಾಂಸ್ಕೃತಿಕವಾಗಿ ಸೂಕ್ತವಲ್ಲ, ದುಂದುವೆಚ್ಚ ಮತ್ತು ಬರಗಾಲದ ಸಮಯದಲ್ಲಿ ಅನಗತ್ಯ ಎಂದು ಸಂಸದ ಯದುವೀರ ಒಡೆಯರ್ ಸೇರಿದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ದಸರಾದಲ್ಲಿ ಕಂಬಳ ಬೇಕಾ ಬೇಡವಾ..? ದಸರಾ ಕಂಬಳ ವಿಚಾರದಲ್ಲಿ ಶುರುವಾಗಿದೆ ಹಗ್ಗ ಜಗ್ಗಾಟ. ದಸರಾದಲ್ಲಿ ಕಂಬಳ ಬೇಡ ಅಂತಿದ್ದಾರೆ ಮೈಸೂರಿಗರು. ಮಾಡ್ತೇವೆ ಎನ್ನುತ್ತಿದ್ದಾರೆ ಆಯೋಜಕರು. ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿ ಕಂಬಳಕ್ಕೆ ಸಿದ್ಧತೆ. 120 ಜೋಡಿ ಕೋಣಗಳು ಮೈಸೂರಿಗೆ ಆಗಮಿಸುವ ನಿರೀಕ್ಷೆ. ಆಯೋಜನೆಗೆ 5 ಕೋಟಿ ರೂ. ವೆಚ್ಚದ ಲೆಕ್ಕಾಚಾರ. 2 ದಿನಗಳ ಕಾಲ ಕಂಬಳ ನಡೆಸಲು ಸಮಾಲೋಚನೆ. 2 ಸಮಾನಾಂತರ ಸ್ಥಳದಲ್ಲಿ 16 ಸುತ್ತುಗಳಲ್ಲಿ ಆಯೋಜನೆಗೆ ಚಿಂತನೆ. 48 ಗಂಟೆ ನಿರಂತರವಾಗಿ ಬೆಳಕಿನ ವ್ಯವಸ್ಥೆಯಡಿ ಕಂಬಳ.

ಕಂಬಳಕ್ಕಾಗಿ ಎರಡು ಸ್ಥಳಗಳ ಪರಿಶೀಲನೆ. ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್‌ ಬಂಕ್‌ ಬಳಿ 15 ಎಕರೆ ಜಾಗ. ಸಾತಗಳ್ಳಿಯ VTU ಸಮೀಪದ 23 ಎಕರೆ ಜಾಗ ಅಂತಿಮ ಪಟ್ಟಿಗೆ. ದಸರಾದಲ್ಲಿ ಕಂಬಳ ಆಯೋಜನೆಗೆ ಮೈಸೂರು ಸಂಸದರಿಂದಲೇ ವಿರೋಧ. ಕಂಬಳಕ್ಕೆ ತನ್ನದೇ ಆದ ಸಂಪ್ರದಾಯ, ಗೌರವ ಇದೆ. ಕಂಬಳ ಮೈಸೂರು ದಸರಾಗೆ ಬೇಡ ಎಂದ ಯದುವೀರ ಒಡೆಯರ್ . ದಸರಾ ಧಾರ್ಮಿಕವಾದ ಆಚರಣೆ. ಅಲ್ಲಿನ ಸಂಸ್ಕೃತಿಗಳು ಅಲ್ಲಲ್ಲಿಯೇ ಆಚರಣೆ ಆಗಬೇಕು. ಇಲ್ಲಿಗೆ ಕಂಬಳವನ್ನು ಹೇರುವುದು ಬೇಡ ಎಂದ ಒಡೆಯರ್ .

ಕಂಬಳದಂತ ಜನಪದ ಕಲೆ ಆಯಾ ಪ್ರದೇಶಕ್ಕೆ ಸೀಮಿತವಾಗಿರಬೇಕು. ಅದನ್ನು ಬೇರೆಡೆಗೆ ತರುವಾಗ ಯೋಚನೆ ಮಾಡಬೇಕು. 5 -8 ಕೋಟಿ ಖರ್ಚು ಮಾಡಿ ದಸರಾದಲ್ಲಿ ಕಂಬಳ ಬೇಡ. ಕಂಬಳವನ್ನು ಅಲ್ಲೇ ಮಾಡಲಿ, ಇಲ್ಲಿ ಮಾಡಿದರೆ ದುಂದುವೆಚ್ಚ. ಕಂಬಳಕ್ಕಾಗಿ ಪ್ರತ್ಯೇಕ ಮೈದಾನ ಸಿದ್ಧ ಮಾಡಬೇಕು. ಕೋಟಿಗಟ್ಟಲೆ ಹಣ ಖರ್ಚು, ಮರಗಳನ್ನು ಕಡಿಯಬೇಕು. ಅಪಾರ ಪ್ರಮಾಣದ ನೀರನ್ನು ಬಳಸಿ ಕೆಸರು ಗದ್ದೆ ನಿರ್ಮಿಸಬೇಕು. ಬರಗಾಲದ ಸಂದರ್ಭದಲ್ಲಿ ಮೈಸೂರಲ್ಲಿ ಕಂಬಳ ಬೇಡ ಎಂದು ವಿರೋಧ

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more