ಮೈಸೂರು ಅಂಬಾರಿ ಹೊರಲು ಪ್ರಶಾಂತ ಆನೆಯೇ ಫಿಕ್ಸ್! ಈ ದಸರಾ ಗಜಪಡೆಯ ಕ್ಯಾಪ್ಟನ್‌ಗಿದೆ ಶಿವಮೊಗ್ಗ ನಂಟು!

Published : Oct 14, 2026, 03:27 PM IST
Mysuru Dasara 2026

ಸಾರಾಂಶ

ಮೈಸೂರು ದಸರಾ ಮಹೋತ್ಸವದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಆನೆಯ ಬಗ್ಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಈ ಬಾರಿ ದುಬಾರೆ ಶಿಬಿರದ 54 ವರ್ಷದ 'ಪ್ರಶಾಂತ' ಆನೆ ಅಂಬಾರಿ ಹೊರಲಿದ್ದು, ಇಂದು ಮಧ್ಯಾಹ್ನ ಅಧಿಕೃತ ಘೋಷಣೆಯಾಗಲಿದೆ. ಕಳೆದ 18 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿರುವ ಈ ಆನೆ ತನ್ನ ಶಿಸ್ತಿಗೆ ಹೆಸರಾಗಿದೆ.

ಮೈಸೂರು (ಅ.14): ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರಲಿರುವ ಗಜಪಡೆಯ ನಾಯಕ (Captain) ಯಾರು ಎಂಬ ತಿಂಗಳುಗಳ ನಿರೀಕ್ಷೆ ಹಾಗೂ ಚರ್ಚೆಗಳಿಗೆ ಕೊನೆಗೂ ತೆರೆಬೀಳಲಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಜಗತ್ಪ್ರಸಿದ್ಧ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 'ಪ್ರಶಾಂತ' (Prashantha Elephant) ಆನೆ ಹೊತ್ತು ಸಾಗಲಿದೆ ಎಂದು ತಿಳಿದುಬಂದಿದೆ. ಈ ಕುರಿತು ಇಂದು ಮಧ್ಯಾಹ್ನ 3:30ಕ್ಕೆ ಅಧಿಕೃತ ಘೋಷಣೆ ಹೊರಬೀಳಲಿದೆ.

ಮಧ್ಯಾಹ್ನ 3:30ಕ್ಕೆ ಅಧಿಕೃತ ಘೋಷಣೆ:

ಜಿಲ್ಲಾ ಉಸ್ತುವಾರಿ ಸಚಿವರು ಇಂದು ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ನಡೆಸಿ, ಈ ಬಾರಿಯ ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿರುವ ಮುಂಚೂಣಿ ಆನೆಯ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಯಾರೀ ಗಜರಾಜ 'ಪ್ರಶಾಂತ'?

  • ಆನೆ ಹೆಸರು: ಪ್ರಶಾಂತ (Prashantha)
  • ಆನೆ ಶಿಬಿರ: ದುಬಾರೆ ಆನೆ ಶಿಬಿರ (Dubare Elephant Camp)
  • ಲಿಂಗ: ಗಂಡು
  • ವಯಸ್ಸು: 54 ವರ್ಷಗಳು
  • ಶರೀರದ ಅಳತೆ: ಎತ್ತರ 2.61 ಮೀಟರ್, ಉದ್ದ 3.46 ಮೀಟರ್
  • ಅಂದಾಜು ತೂಕ: 5100 ಕೆ.ಜಿ.

ಪ್ರಶಾಂತ ಆನೆಯ ಇತಿಹಾಸ ಮತ್ತು ಹಿನ್ನೆಲೆ:

ಈ ಗಜರಾಜನನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದಿತ್ತು. ಅತ್ಯಂತ ಪ್ರಬಲ ದೇಹದಾಢ್ರ್ಯ ಹಾಗೂ ಗಂಭೀರ ನಡವಳಿಕೆಯನ್ನು ಹೊಂದಿರುವ ಈ ಆನೆಯನ್ನು ಶೀಘ್ರದಲ್ಲೇ ಪಳಗಿಸಿ ವಿಶೇಷ ತರಬೇತಿಗೆ ಒಳಪಡಿಸಲಾಗಿತ್ತು. ಬಲಿಷ್ಠ ಹಾಗೂ ನಂಬಿಕಸ್ಥ ಆನೆಯಾಗಿ ಅರಣ್ಯ ಇಲಾಖೆಯ ವಿವಿಧ ವನ್ಯಜೀವಿ ಕಾರ್ಯಾಚರಣೆಗಳಲ್ಲಿ ಪ್ರಶಾಂತ ಮೌಲ್ಯಯುತ ಸೇವೆಯನ್ನು ಸಲ್ಲಿಸಿದೆ.

ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತ ಬಂದಿರುವ ಪ್ರಶಾಂತ, ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ತನ್ನ ಶಿಸ್ತುಬದ್ಧ ನಡೆ, ಸತತ ಸೇವೆ ಹಾಗೂ ಮಾವುತರು-ಕಾಾವಟಿಗಳ ಆಜ್ಞೆಯನ್ನು ಚಚೂ ತಪ್ಪದೆ ಪಾಲಿಸುವ ಮೂಲಕ ದಸರಾ ಆನೆಗಳ ಪೈಕಿ ಅತ್ಯಂತ ನಂಬಿಕಸ್ಥ ಸದಸ್ಯನೆಂದು ಗುರುತಿಸಿಕೊಂಡಿದೆ. ಈ ಆನೆಯ ಗಂಭೀರ ಹಾಗೂ ಶಾಂತಿಯುತ ಸ್ವಭಾವವು ಮೆರವಣಿಗೆಯ ಭದ್ರತೆಗೆ ಅತ್ಯಂತ ಸಹಕಾರಿಯಾಗಿದೆ.

ಕಳೆದ ಬಾರಿಯ ದಸರಾದಲ್ಲಿ 'ಸಾಲ್ ಆನೆ'ಯಾಗಿ (Saal Elephant) ಅತ್ಯುತ್ತಮ ಸೇವೆ ಸಲ್ಲಿಸಿದ್ದ ಪ್ರಶಾಂತ, ಈಗ 3 ದಶಕಗಳ ಸುದೀರ್ಘ ಸೇವಾ ಪಯಣದೊಂದಿಗೆ ಮೈಸೂರು ದಸರಾ ಪರಂಪರೆಯ ಜೀವಂತ ಚಿಹ್ನೆಯಾಗಿ ಹೊರಹೊಮ್ಮಿದೆ. ಒಟ್ಟಿನಲ್ಲಿ, ಪ್ರಶಾಂತನ ಹೆಗಲೇರಲಿರುವ ಈ ಬಾರಿಯ ಅಂಬಾರಿ ಹೊರೆಯು ನಾಡಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯಾಕಮ್ಮಾ ನಿನಗಿಷ್ಟು ಅವಸರ; ಟವೆಲ್ ಸುತ್ತಿಕೊಂಡೇ ಮೆಟ್ರೋ ರೈಲಿಗೆ ಬಂದು ಮೇಕಪ್ ಮಾಡಿಕೊಂಡ ಲೇಡಿ!
ಕಿಚ್ಚ ಸುದೀಪ್‌ಗೆ ಸವಾಲೆಸೆದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ; ಕ್ಷಮೆಯಾಚಿಸುವಂತೆ ಮಾಜಿ ಸಚಿವ ರಾಜುಗೌಡ ಆಗ್ರಹ!