
ಮೆಟ್ರೋ (Metro) ಎಂದರೆ ಅಲ್ಲಿ ಏನೆಲ್ಲಾ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ನಿಖರವಾದ ಲೆಕ್ಕವಿಲ್ಲ. ರೀಲ್ಸ್ ಹುಚ್ಚು, ಪ್ರಯಾಣಿಕರ ನಡುವಿನ ಜಗಳ, ವಿಚಿತ್ರ ಬಟ್ಟೆ ಧರಿಸಿ ಓಡಾಡುವುದು ಇವೆಲ್ಲವೂ ಇಲ್ಲಿ ದಿನನಿತ್ಯದ ಸುದ್ದಿಯಂತೆ ಆಗಿವೆ. ಇದೀಗ ಯುವತಿಯೊಬ್ಬಳು ಸ್ನಾನ ಮಾಡಿ ಮುಗಿಸಿದ ತಕ್ಷಣ ನೇರವಾಗಿ ಮೆಟ್ರೋಗೆ ಬಂದವಳಂತೆ ಬಾತ್ರೋಬ್ ಹಾಗೂ ತಲೆಗೆ ಟವೆಲ್ ಸುತ್ತಿಕೊಂಡು ಮೆಟ್ರೋದಲ್ಲೇ ಸ್ಕಿನ್ಕೇರ್ (Skincare Routine) ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.
ವೈರಲ್ ಆಗಿರುವ ದೆಹಲಿ ಮೆಟ್ರೋದಲ್ಲಿನ ವಿಡಿಯೋದಲ್ಲಿ, ಯುವತಿಯೊಬ್ಬಳು ಯಾವುದೇ ಮುಜುಗರವಿಲ್ಲದೆ ದೆಹಲಿ ಮೆಟ್ರೋದೊಳಗೆ ಬಾತ್ರೋಬ್ (Bathrobe) ಧರಿಸಿಕೊಂಡು ಕುಳಿತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಆಕೆಯ ತಲೆಗೆ ಟವೆಲ್ ಸುತ್ತಿಕೊಳ್ಳಲಾಗಿದೆ, ಬಾತ್ರೂಮ್ ಸ್ಲಿಪ್ಪರ್ಸ್ ಧರಿಸಿದ್ದಾಳೆ ಮತ್ತು ಮುಖದ ಅಡಿಯಲ್ಲಿ ಕಣ್ಣಿನ ಬಳಿ ಅಂಡರ್-ಐ ಪ್ಯಾಚ್ಗಳನ್ನು (Under-eye patches) ಅಂಟಿಸಿಕೊಂಡು ಅತ್ಯಂತ ಖುಷಿಯಿಂದ ತನ್ನ ಸ್ಕಿನ್ಕೇರ್ ಕೆಲಸದಲ್ಲಿ ಮಗ್ನಳಾಗಿದ್ದಾಳೆ. ಆಕೆಯ ಪಕ್ಕದಲ್ಲೇ ಕುಳಿತಿದ್ದ ಅಕ್ಕಪಕ್ಕದ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ಆಂಟಿಯೊಬ್ಬರು ಆಕೆಯನ್ನು ದಿಗ್ಭ್ರತೆಯಿಂದ ನೋಡುತ್ತಿರುವ ದೃಶ್ಯ ನೆಟ್ಟಿಗರ ನಗು ತರಿಸಿದೆ.
ಈ ವಿಡಿಯೋವನ್ನು '@HaramiParindey' ಎಂಬ ಎಕ್ಸ್ (X) ಬಳಕೆದಾರರು ಹಂಚಿಕೊಂಡಿದ್ದು, 'ಪ್ರತಿ ದಿನ ಭಾರತೀಯ ಮೆಟ್ರೋಗಳಲ್ಲಿ ಇಂತಹ ಹುಚ್ಚಾಟಗಳು ನಡೆಯುತ್ತಲೇ ಇರುತ್ತಿರುತ್ತವೆ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡುನೋಡುತ್ತಿದ್ದಂತೆ ಇಂಟರ್ನೆಟ್ನಲ್ಲಿ ಹರಿದಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವರ್ತನೆ ತೋರುವುದು ವೈಯಕ್ತಿಕ ಸ್ವಾತಂತ್ರ್ಯವೇ ಅಥವಾ ಸಾರ್ವಜನಿಕ ಶಿಷ್ಟಾಚಾರಕ್ಕೆ (Public Etiquette) ವಿರುದ್ಧವೇ ಎಂಬ ಬಗ್ಗೆ ದೊಡ್ಡ ಚರ್ಚೆಯೇ ಆರಂಭವಾಗಿದೆ.
Crazier stuff keeps happening on Indian metros every day. https://t.co/oKJtJYrBTE
— Pakchikpak Raja Babu (@HaramiParindey) October 8, 2026
ಈ ವಿಡಿಯೋದಲ್ಲಿ ಪ್ರಯಾಣಿಕರ ಮುಖಭಾವಗಳೇ ಹೈಲೈಟ್ ಆಗಿವೆ. ಅದರಲ್ಲೂ ಪಕ್ಕದಲ್ಲಿ ಕುಳಿತಿದ್ದ ಆಂಟಿಯೊಬ್ಬರ ಮೌನ ಹಾಗೂ ಆಶ್ಚರ್ಯವನ್ನು ವೀಕ್ಷಕರು ತರೆಗೆ ತಂದಿದ್ದಾರೆ. ಒ ಬಳಕೆದಾರರು ಕಾಮೆಂಟ್ ಮಾಡುತ್ತಾ, 'ಆಂಟಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರಬಹುದು- ಮಗನೇ, ನನ್ನ ಇಡೀ ಜೀವನವೇ ವ್ಯರ್ಥವಾಯಿತಲ್ಲ ಅಂತ' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಇನ್ನು ಕೆಲವರು, 'ಇದೇನಾದರೂ ನ್ಯೂಯಾರ್ಕ್ ಸಬ್ವೇ ಅಥವಾ ಲಂಡನ್ ಟ್ಯೂಬ್ನಲ್ಲಿ ನಡೆದಿದ್ದರೆ ಯಾರೂ ಗಮನಿಸುತ್ತಲೂ ಇರಲಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ತಮಾಷೆಯ ಹಾಗೂ ವಿಚಿತ್ರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದ್ದು, ನೆಟ್ಟಿಗರು ಬಗೆಬಗೆಯ ಮೀಮ್ಸ್ ಹಾಗೂ ಕಾಮೆಂಟ್ಗಳ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ