ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ಬೆಂಕಿ ಅವಘಡ, ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರಿಗೆ ಸಹಾಯವಾಣಿ

By Gowthami KFirst Published Oct 11, 2024, 10:50 PM IST
Highlights

ತಿರುವಳ್ಳೂರಿನಲ್ಲಿ ಮೈಸೂರು - ದರ್ಭಾಂಗ ಎಕ್ಸ್‌ಪ್ರೆಸ್ ರೈಲು ಮತ್ತು ಗೂಡ್ಸ್ ರೈಲು ನಡುವೆ ಭೀಕರ ಅಪಘಾತ ಸಂಭವಿಸಿದೆ. ನಾಲ್ಕು ಎಸಿ ಕೋಚ್‌ಗಳು ಹಳಿ ತಪ್ಪಿ, ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿರುವಳ್ಳೂರ್ (ಸೆ.11): ಮೈಸೂರು - ದರ್ಭಾಂಗ ಎಕ್ಸ್‌ಪ್ರೆಸ್‌ ರೈಲು ಮತ್ತು ಗೂಡ್ಸ್ ರೈಲು ನಡುವೆ ಭೀಕರ ಅಪಘಾತವಾಗಿರುವ ಘಟನೆ ತಮಿಳುನಾಡಿನ ತಿರುವಳ್ಳೂರಿನ ಕವರಪೆಟ್ಟೈ ಬಳಿ ನಡೆದಿದೆ. 

ಪ್ಯಾಸೆಂಜರ್ ರೈಲು ಮತ್ತು ಗೂಡ್ಸ್ ರೈಲಿನ ಮಧ್ಯೆ ನಡೆದ ಅಪಘಾತದಲ್ಲಿ ನಾಲ್ಕು ಎಸಿ ಕೋಚ್ ಗಳಿಗೆ ಹಾನಿಯಾಗಿದ್ದು, ಹಳಿ ತಪ್ಪಿದೆ. ಜೊತೆಗೆ ಎರಡು ಬೋಗಿಗಳಲ್ಲಿ‌ ಬೆಂಕಿ ಕಾಣಿಸಿಕೊಂಡಿದ್ದು, ರೈಲಿನ ಕಿಟಕಿಗಳ ಮೂಲಕ ಕೆಲವು ಪ್ರಯಾಣಿಕರು ಹೊರ ಬಂದಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಜಿಲ್ಲಾಡಳಿತ ಕಾರ್ಯಾಚರಣೆಯಲ್ಲಿ ತೊಡಗಿದೆ.

Latest Videos

ಆದಾಯ ತೆರಿಗೆ vs TDS: ಈ ಎರಡರ ವ್ಯತ್ಯಾಸ ನೀವು ತಿಳಿಯಲೇಬೇಕು

ನಿಂತಿದ್ದ ಗೂಡ್ಸ್ ಟ್ರೇನ್ ಗೆ ಪ್ರಯಾಣಿಕ ರೈಲು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕನ್ನಡಿಗರು  ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲಿನಿಂದ 6 ಬೋಗಿಗಳು ಪ್ರತ್ಯೇಕಗೊಂಡ ಮಾಹಿತಿ ಲಭ್ಯವಾಗಿದೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿನಿಂದ‌ ನಾಗಪುರಕ್ಕೆ ರೈಲು ಹೊರಟಿತ್ತು.  ಕರ್ನಾಟಕದಿಂದ 45 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಕೆಲವರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಟ್ರೇನ್ ನಲ್ಲಿದ್ದ ಬೆಂಗಳೂರಿಗರು ಈ ಬಗ್ಗೆ  ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್ ರೈಲು ಮೈಸೂರಿನಿಂದ ಪೆರಂಬೂರ್ ಮೂಲಕ ದರ್ಭಾಂಗಕ್ಕೆ ತೆರಳುತ್ತಿತ್ತು. ಸಿಬ್ಬಂದಿ ಮತ್ತು ಚಾಲಕ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೈಸೂರು -ದರ್ಬಂಗಾ ಎಕ್ಸ್‌ಪ್ರೆಸ್ (ಟ್ರೇನ್ ನಂ.12578-ಎಂವೈಎಸ್-ಡಿಬಿಜಿ) ಚೆನ್ನೈ ವಿಭಾಗದ ಕವರಪೆಟ್ಟೈ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಅಧಿಕೃತ ಅಪ್‌ಡೇಟ್ ಪ್ರಕಾರ, ಕನಿಷ್ಠ ಆರು ಕೋಚ್‌ಗಳು ಹಳಿತಪ್ಪಿದ್ದು , ರಕ್ಷಣಾ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ.  ರೈಲು ಸಿಬ್ಬಂದಿ ಅನುಭವಿ ಭಾರೀ ಜರ್ಕ್ ರೈಲು ಲೂಪ್/ಲೈನ್‌ಗೆ ಪ್ರವೇಶಿಸಿತು ಮತ್ತು ಲೂಪ್ ಲೈನ್‌ನಲ್ಲಿ ಸ್ಟೇಬಲ್ಡ್ ಗುಡ್ ರೈಲಿಗೆ ಡಿಕ್ಕಿ ಹೊಡೆದಿದೆ ತಕ್ಷಣ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು  ತಿಳಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಟಾಟಾ ಸಮೂಹಕ್ಕೆ ಹೊಸ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನೋಯೆಲ್ ಟಾಟಾ ಯಾರು? ರತನ್‌ ಗೆ ಮಲ ಸಹೋದರ ಹೇಗೆ?

ಕನ್ನಡಿಗರಿಗಾಗಿ ಸಹಾಯವಾಣಿ: ಮೈಸೂರು ಕಂಟ್ರೋಲ್ ರೂಂನಲ್ಲಿ ಸಹಾಯವಾಣಿಯೊಂದಿಗೆ ವಾರ್ ರೂಮ್ ಅನ್ನು ಸ್ಥಾಪಿಸಲಾಗಿದೆ ಮತ್ತು   9731143981 ಈ ನಂಬರ್‌ ಗೆ ಸಂಪರ್ಕಿಸಬಹುದಾಗಿದೆ. 0821-2422400 ಸಂಖ್ಯೆಯ ಮೈಸೂರು ರೈಲು ನಿಲ್ದಾಣದಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ⁠139 ಸಹಾಯವಾಣಿ ಮೈಸೂರು ವಿಭಾಗೀಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಬೆಂಗಳೂರು ಕಂಟ್ರೋಲ್ ರೂಂನಲ್ಲಿ ಸಹಾಯವಾಣಿಯೊಂದಿಗೆ ವಾರ್ ರೂಮ್ ಸ್ಥಾಪಿಸಲಾಗಿದೆ ಮತ್ತು   08861309815 ನಲ್ಲಿ ಸಂಪರ್ಕಿಸಬಹುದು. ಎಸ್‌ಬಿಸಿ, ಎಂವೈಎ ಮತ್ತು ಕೆಜಿಐ ರೈಲು ನಿಲ್ದಾಣದಲ್ಲಿ ಸ್ಥಾಪಿಸಲಾದ ಸಹಾಯ ಕೇಂದ್ರವನ್ನು ತೆರೆಯಲಾಗಿದೆ.

 

STORY | Express train rams into stationary train in Tamil Nadu

READ: https://t.co/bKX61dBdMH

VIDEO:

(Full video available on PTI Videos - https://t.co/n147TvqRQz) pic.twitter.com/jjbDRoMX2O

— Press Trust of India (@PTI_News)
click me!