ಆಯುಧ ಪೂಜೆ ದಿನವೇ ರೊಟ್ಟಿ-ಬೆಂಡೆಕಾಯಿ ಪಲ್ಯ ತಿಂದು ಒಂದೇ ಕುಟುಂಬದ 7 ಜನರು ಅಸ್ವಸ್ಥ!

By Ravi Janekal  |  First Published Oct 11, 2024, 10:04 PM IST

ರೊಟ್ಟಿ, ಬೆಂಡೆಕಾಯಿ ಪಲ್ಯ ಸೇವಿಸಿ ಒಂದೇ ಕುಟುಂಬದ ಏಳು ಜನರು ತೀವ್ರ ಅಸ್ವಸ್ಥಗೊಂಡ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಡ ಗ್ರಾಮದಲ್ಲಿ ನಡೆದಿದೆ.


ರಾಯಚೂರು (ಅ.11):  ರೊಟ್ಟಿ, ಬೆಂಡೆಕಾಯಿ ಪಲ್ಯ ಸೇವಿಸಿ ಒಂದೇ ಕುಟುಂಬದ ಏಳು ಜನರು ತೀವ್ರ ಅಸ್ವಸ್ಥಗೊಂಡ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಡ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀ, ಮಳಾಪ್ಪ, ಬಸಲಿಂಗಪ್ಪ, ಗೌರಮ್ಮ, ಗುರುಬಸಮ್ಮ, ಮಲ್ಲಿಕಾರ್ಜುನ ಸೇರಿದಂತೆ ಒಟ್ಟು ಏಳು ಜನರು ಅಸ್ವಸ್ಥಗೊಂಡಿದ್ದಾರೆ. ಬೆಳಗ್ಗೆ ಊಟಕ್ಕೆ ರೊಟ್ಟಿ ಬೆಂಡೆಕಾಯಿ ಮಾಡಲಾಗಿತ್ತು. ಮನೆಯಲ್ಲಿ ಊಟ ಮಾಡಿ ಬುತ್ತಿಕಟ್ಟಿಕೊಂಡು ಹೊಲಕ್ಕೆ ದುಡಿಯಲು ಹೋಗಿದ್ದ ಕುಟುಂಬ. ಕೆಲಸ ಮಾಡಿ ಹೊಲದಲ್ಲಿ ಒಟ್ಟಿಗೆ ಊಟಕ್ಕೆ ಕುಳಿತಿದ್ದಾರೆ. ಮನೆಯಿಂದ ತಂದಿದ್ದ ರೊಟ್ಟಿ-ಬೆಂಡೆಕಾಯಿ ಪಲ್ಯ ಒಟ್ಟಿಗೆ ಊಟ ಮಾಡಿರುವ ಕುಟುಂಬ ಸದಸ್ಯರು. ಆದರೆ ಊಟ ಮಾಡಿದ ಬಳಿಕ ಏಕಾಏಕಿ ಏಳು ಜನರಿಗೆ ವಾಂತಿ ಭೇದಿ ಆಗಿದೆ. ಇದರಿಂದ ಅನುಮಾನಗೊಂಡು ಕೂಡಲೇ ಕವಿತಾಳ ಆಸ್ಪತ್ರೆಗೆ ದಾಖಲಾಗಿದ್ದಾರೆ.

Tap to resize

Latest Videos

undefined

ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಸರ್ಕಾರ; 'ಇದು ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ' ಪ್ರಹ್ಲಾದ್ ಜೋಶಿ ಕಿಡಿ

ತೀವ್ರ ಅಸ್ವಸ್ಥಗೊಂಡಿದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಅಲ್ಲಿಂದ ಲಿಂಗಸಗೂರು ತಾಲೂಕು ಆಸ್ಪತ್ರೆಗೆ ರವಾನಿಸಿದ್ದ ವೈದ್ಯರು. ಸದ್ಯ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಕುಟುಂಬ. ಏಳು ಜನರಲ್ಲೂ ಆರೋಗ್ಯ ಸ್ಥಿರವಾಗಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ. ರೊಟ್ಟಿ ಬೆಂಡೆಕಾಯಿ ಪಲ್ಯ ಸೇವನೆಯಿಂದ ಅಸ್ವಸ್ಥಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

click me!