ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಸರ್ಕಾರ; 'ಇದು ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ' ಪ್ರಹ್ಲಾದ್ ಜೋಶಿ ಕಿಡಿ

By Ravi Janekal  |  First Published Oct 11, 2024, 8:54 PM IST

ಅಂದು ಸ್ವಲ್ಪ ಮೈ ಮರೆತಿದ್ರೆ ನಮ್ಮ ಕೊಲೆಯಾಗ್ತಿತ್ತು' ಅಂತಾ ಅಲ್ಲಿನ ಪೊಲೀಸ್ ಅಧಿಕಾರಿಯೇ ಹೇಳಿದ್ರು. ನಾನೀಗ ಅವರ ಹೆಸರು ಹೇಳಲ್ಲ. ಆ ಪೊಲೀಸ್ ಅಧಿಕಾರಿ ಹೆಸರು ಹೇಳಿದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಿ ಮೇಲೆ ಸೇಡಿನ ಕ್ರಮ ತೆಗೆದುಕೊಳ್ಳಲೂ ಹೇಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.


ಗದಗ: ಹುಬ್ಭಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಪೇದೆಗಳ ಮೇಲೆ ಕಲ್ಲು ತೂರಾಟ ನಡೆಸಿ ಭಾರಿ ಗಲಭೆ ಸೃಷ್ಟಿಸಿದ ಕೇಸ್ ವಾಪಸ್ ಪಡೆಯಲು ಕರ್ನಾಟಕ ಸಚಿವ ಸಂಪುಟ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಡೆ ಇದೀಗ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಬಗ್ಗೆ ಏಷ್ಯಾನೆಟ್ ಸುವರ್ಣ ಪ್ರತಿನಿಧಿಯೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಅಂದು ನಡೆದ ಹುಬ್ಬಳ್ಳಿ ಗಲಭೆಯ ಕರಾಳತೆ ಬಿಚ್ಚಿಟ್ಟಿದ್ದಾರೆ. 'ಅಂದು ಸ್ವಲ್ಪ ಮೈ ಮರೆತಿದ್ರೆ ನಮ್ಮ ಕೊಲೆಯಾಗ್ತಿತ್ತು' ಅಂತಾ ಅಲ್ಲಿನ ಪೊಲೀಸ್ ಅಧಿಕಾರಿಯೇ ಹೇಳಿದ್ರು.  ನಾನೀಗ ಅವರ ಹೆಸರು ಹೇಳಲ್ಲ. ಆ ಪೊಲೀಸ್ ಅಧಿಕಾರಿ ಹೆಸರು ಹೇಳಿದ್ರೆ ಕಾಂಗ್ರೆಸ್ ಅವರ ಮೇಲೆ ಸೇಡಿನ ಕ್ರಮ ತೆಗೆದುಕೊಳ್ಳಲೂ ಹೇಸುವುದಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಯ ಹೆಸರು ಹೇಳುವುದಿಲ್ಲ ಎಂದರು.

Latest Videos

undefined

ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದವರು ಅಮಾಯಕರಾ? 'ಗಲಭೆಯಲ್ಲಿ ಮುಗ್ಧರ ಬಂಧನ ಆಗಿದೆ' ಎಂದ ಸಚಿವ ಮುನಿಯಪ್ಪ!

 ಹುಬ್ಬಳ್ಳಿ ಗಲಭೆ ಆರೋಪಿಗಳ ಮೇಲೆ ಯುಎಪಿಎ ಕೇಸ್ ಹಾಕಿದ್ರು, ಅನ್‌ಲಾಫುಲ್ ಆಕ್ಟಿವಿಟಿ ಪ್ರಿವೆನ್ಷನ್ ಆಕ್ಟ್(unlawful activities prevention act) ಅದು. ಭಯೋತ್ಪಾದನೆ ಚಟುವಟಿಕೆ ವಿರುದ್ಧದ ಕಾನೂನು ಅದು. ಆಗಿನ ಪೊಲೀಸರು ಯೋಚನೆ ಮಾಡಿಯೇ ಕೇಸ್ ಹಾಕಿದ್ರು. ಇಂತಹ ಗಂಭೀರ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ, ಮುಸ್ಲಿಮರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಅಧಿಕಾರಕ್ಕಾಗಿ ದೇಶದ ಭದ್ರತೆಗೆ, ಸಂವಿಧಾನ, ಕಾನೂನು, ಪೊಲೀಸ್ ಇಲಾಖೆ ಸವಾಲೊಡ್ಡು ಇಂತಹ ಪ್ರಕರಣದಲ್ಲಿ ರಾಜಕಾರಣ ಮಾಡುವುದು ಬಿಡಬೇಕು. ಈ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದರೆ ನಾವು ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್‌ಗೆ ಹೋಗುತ್ತೇವೆ. ಸಣ್ಣ ಗಲಭೆ, ಅಮಾಯಕರಿದ್ದರು ಅಂತಾರೆ, ಅದು ಸಣ್ಣ ಗಲಭೆ ಅಂತಾ ಡಿಸೈಡ್ ನೀವ್ಯಾರು? ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಗೃಹಮಂತ್ರಿಗೆ ನಿಜಕ್ಕೂ ರಾಜ್ಯದ ಬಗ್ಗೆ ಕಳಕಳಿ ಇದ್ಯಾ?

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲೂ ಅಮಾಯಕರಿದ್ದಾರೆ ಅಂತಾರೆ. ಜಮೀರ್ ಅಹ್ಮದ್ ಗೃಹ ಮಂತ್ರಿಗಳಿಗೆ ಪತ್ರ ಬರೆದು, ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಭೆ ಕೇಸ್ ವಾಪಾಸ್ ಪಡೆಯಬೇಕೆಂದು ಕೇಳಿಕೊಂಡಿದ್ರು. ಅದಾದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಅಂತಾ ಗೃಹ ಮಂತ್ರಿಗಳು ಹೇಳ್ತಾರೆ. ನಿಜವಾಗಲೂ ರಾಜ್ಯದ ಸುರಕ್ಷತೆಯ ಬಗ್ಗೆ ಗೃಹಮಂತ್ರಿಗಳಿಗೆ ಕಳಕಳಿ ಇದ್ದರೆ ತಕ್ಷಣ ವಿಲೇವಾರಿಗೆ ಹಾಕಬೇಕಿತ್ತು. ಆದರೆ ಟ್ರಯಲ್ ಕೋರ್ಟ್, ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು ರಿಜೆಕ್ಟ್ ಆಯ್ತು. ಈ ಪ್ರಕರಣದಲ್ಲಿ ಸರ್ಕಾರಿ ವಕೀಲರನ್ನ ಚೇಂಜ್ ಮಾಡಲಾಗಿತ್ತು. ಬೇಲ್ ಕೊಟ್ಟ ಎರಡು ತಿಂಗಳಲ್ಲಿ ಕೇಸ್ ಹಿಂಪಡೆಯುತ್ತಾರೆ. ಮುಸ್ಲಿಮರ ತುಷ್ಟೀಕರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯವೇ ಜಾಮೀನು ನಿರಾಕರಿಸಿದ್ರೂ, ಪೊಲೀಸರಿಗೆ ಕಲ್ಲು ತೂರಿದ ಪುಂಡರ ಕೇಸ್ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರ!

ಕಾಂಗ್ರೆಸ್ ಶಾಸಕ ರಾಜು ಕಾಗೆ ಅಸಮಾಧಾನ: 

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ರಾಜು ಕಾಗೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಸಚಿವರು, ಈ ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಯರೆಡ್ಡಿ, ಜಾರಕಿಹೊಳಿ ಸೇರಿದಂತೆ ಅನೇಕರು ಮಾತನಾಡಿದ್ದರು. ಮೊನ್ನೆ ಬಿ ಆರ್ ಪಾಟೀಲ್ ಸಹ ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಸೊಕ್ಕು ಜಾಸ್ತಿಯಾಗಿದೆ ಅಂತಾ ಹೇಳಿದ್ದಾರೆ. ಮಳೆಯಾಗಿ ರಸ್ತೆ ಹದಗೆಟ್ಟಿವೆ, ಅಭಿವೃದ್ಧಿಯಾಗಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನದ ಪೇಮೆಂಟ್ ಆಗ್ತಿಲ್ಲ. ಒಂದು ರೀತಿಯಲ್ಲಿ ಸರ್ಕಾರ ದಿವಾಳಿ ಹಂತಕ್ಕೆ ಹೋಗ್ತಿದೆ. ಈಗಾಗಲೇ ಹಿಮಾಚಲ, ಪಂಜಾಬ್, ರಾಜ್ಯಗಳಲ್ಲಿ ಸರ್ಕಾರ ಅದೇ ಪರಿಸ್ಥಿತಿಗೆ ತಲುಪಿವೆ. ಬೇರೆ ಬೇರೆ ರಾಜ್ಯದ ಮಂತ್ರಿಗಳ ಜೊತೆಗೆ ವೈಕ್ತಿಕವಾಗಿ ಮಾತನಾಡುವಾಗ ಉಚಿತ ಯೋಜನೆಯಿಂದ ಈ ರೀತಿಯಾಗಿದೆ ಎಂದು ಕೆಲವರು ಅನೌಪಚಾರಿಕವಾಗಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ರಾಜ್ಯ ಒಂದು ವರ್ಷದಲ್ಲಿ ಸಿಕ್ಕಾಪಟ್ಟಿ ಸಾಲ ಮಾಡಿಕೊಂಡಿದೆ. 1 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದೆ, ಹೀಗಾಗಿ ಸಾಲದ ಕೋಪಕ್ಕೆ ರಾಜ್ಯವನ್ನು ತಳ್ಳುತ್ತಿದ್ದಾರೆ. ಯಾವುದೇ ಪ್ಲಾನ್ ಇಲ್ಲದೆ ಮಾಡ್ತಾಯಿರೋದರಿಂದ ವ್ಯವಸ್ಥೆ ಕೆಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಮಳೆ ಬಹಳ ಆಗ್ತಿದೆ, ಪರಿಸ್ಥಿತಿ ಬಹಳ ಗಂಭೀರ ಇದೆ. ಇದರ ಪರಿಣಾಮ ಒಟ್ಟು ರಾಜ್ಯದ ಮೇಲೆ ಆಗುತ್ತದೆ ಎಂದರು.

click me!