ನೀವು ಹೇಳಿದ 'ಚೆಂಗ್ಲು' ನಾನಲ್ಲ, ನಿಜವಾದ ಚೆಂಗ್ಲು ಅಂದ್ರೆ ನೀವೇ: ಡಿಕೆಶಿ ವಿರುದ್ಧ ಮುನಿರತ್ನ ಕಿಡಿ!

Published : Apr 19, 2025, 12:57 PM ISTUpdated : Apr 19, 2025, 01:06 PM IST
ನೀವು ಹೇಳಿದ 'ಚೆಂಗ್ಲು' ನಾನಲ್ಲ, ನಿಜವಾದ ಚೆಂಗ್ಲು ಅಂದ್ರೆ ನೀವೇ: ಡಿಕೆಶಿ ವಿರುದ್ಧ ಮುನಿರತ್ನ ಕಿಡಿ!

ಸಾರಾಂಶ

ಬಿಜೆಪಿ ಶಾಸಕ ಮುನಿರತ್ನ ಅವರು ಇಂದು ಸುದ್ದಿಗೋಷ್ಠಿಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ರಾಜಕಾಲುವೆ ಯೋಜನೆಯ ಹೆಸರಿನಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು 300-400 ಕೋಟಿ ರೂ. ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ, ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದಾಗಿ ಮುನಿರತ್ನ ತಿಳಿಸಿದರು.

ಬೆಂಗಳೂರು (ಏ.19): ಬಿಜೆಪಿ ಶಾಸಕ ಮುನಿರತ್ನ ಅವರು ಇಂದು ಸುದ್ದಿಗೋಷ್ಠಿಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ರಾಜಕಾಲುವೆ ಯೋಜನೆಯ ಹೆಸರಿನಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು 300-400 ಕೋಟಿ ರೂ. ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ, ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದಾಗಿ ಮುನಿರತ್ನ ತಿಳಿಸಿದರು.

ಮುನಿರತ್ನ ಆರೋಪಗಳೇನು?

ಭ್ರಷ್ಟಾಚಾರದ ಆರೋಪ: ರಾಜಕಾಲುವೆ ತಡೆಗೋಡೆ ಈಗಾಗಲೇ ಇದ್ದರೂ, ಪುನರ್‌ನಿರ್ಮಾಣಕ್ಕೆ ಸುಳ್ಳು ಕಾರಣ ಹೇಳಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಟೆಂಡರ್‌ಗಳಲ್ಲಿ 10-15% ಕಮಿಷನ್ ವ್ಯವಹಾರ ನಡೆದಿದೆ ಎಂದು ದೂರಿದರು.

ಟೆಂಡರ್ ಹಗರಣ: ಮಹದೇವಪುರ ಕಾಮಗಾರಿಗೆ ಸ್ಟಾರ್ ಚಂದ್ರು, ರಾಜರಾಜೇಶ್ವರಿ ಕ್ಷೇತ್ರದಲ್ಲಿ BSR ಕನ್‌ಸ್ಟ್ರಕ್ಷನ್‌ಗೆ ಟೆಂಡರ್ ನೀಡಲಾಗಿದೆ ಎಂದು ಮುನಿರತ್ನ ಮೊದಲೇ ಊಹಿಸಿದ್ದರು. ಫೈನಾನ್ಸಿಯಲ್ ಬಿಡ್‌ನಲ್ಲಿ 5-10% ಹೆಚ್ಚಳವಾಗಿರುವುದು ಕಮಿಷನ್‌ಗೆ ಸಾಕ್ಷಿಯಾಗಿದೆ ಎಂದರು.

‘ಚೆಂಗ್ಲು’ ವಿವಾದ: ಡಿಕೆ ಶಿವಕುಮಾರ್ ತಮ್ಮನ್ನು ‘ಚೆಂಗ್ಲು’ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿ, ನಿಜವಾದ ‘ಚೆಂಗ್ಲು’ ಡಿಕೆ ಶಿವಕುಮಾರ್ ಎಂದು ಮುನಿರತ್ನ ತಿರುಗೇಟು ನೀಡಿದ್ದಾರೆ. ಚೆಂಗ್ಲು ಎಂದರೆ ಥಟ್ಟನೆ ಬದಲಾಗುವ ಮನಸ್ಥಿತಿ, ಗುರಿಯಿಲ್ಲದೆ ಕಾಲಹರಣ ಮಾಡುವವರು ಎಂದು ವಿವರಿಸಿದರು.

ಇದನ್ನೂ ಓದಿ: 6 ಜನ ಮಕ್ಕಳಲ್ಲಿ ನಾನೊಬ್ಬನೇ ಓದಿ ಸಿಎಂ ಆದೆ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ: ಸಿಎಂ

ಡಿಕೆ ಶಿವಕುಮಾರ್‌ಗೆ ಸವಾಲ್:
ಮುನಿರತ್ನ ಅವರು, ಡಿಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಆಣೆ ಪ್ರಮಾಣಕ್ಕೆ ಬರಲು ಸವಾಲು ಹಾಕಿದರು. ತಮ್ಮ ವಿರುದ್ಧದ ರೇಪ್ ಕೇಸ್ ಆರೋಪಗಳನ್ನು ಸಾಬೀತುಪಡಿಸಲು ಕುಟುಂಬದೊಂದಿಗೆ ಬಂದು ಸತ್ಯ ಪ್ರಮಾಣ ಮಾಡಲು ಆಹ್ವಾನಿಸಿದರು.

ರಾಜಕಾರಣದಲ್ಲಿ ಮಿತ್ರರು ಯಾರೂ ಇರಲ್ಲ. ಮಿತ್ರರು ಇದ್ದಾರೆ ಅಂತ ಯಾರಾದ್ರೂ ಹೇಳಿದ್ರೆ ಅವರಂಥ ಶತಮೂರ್ಖ ಬೇರೆ ಇಲ್ಲ ವಿಧಾನಸೌಧದಲ್ಲಿ ರೇಪ್ ಮಾಡಿರೋದು ಸಾಬೀತಾಗಿದೆ ಅಂತ ಮಾತಾಡ್ತಾರೆ. ಶಿವಕುಮಾರ್ ಅವರು ದೈವ ಭಕ್ತರು. ನೀವು ನಿಮ್ಮ ಕುಟುಂಬ ಕರೆದುಕೊಂಡು ಬನ್ನಿ. ನಾನೂ ಕುಟುಂಬ ಕರೆದುಕೊಂಡು ಬರ್ತೀನಿ. ಆಣೆ ಪ್ರಮಾಣ ಮಾಡೋಣ. HIV ಇಂಜೆಕ್ಷನ್ ಎಷ್ಟು ಕಥೆ ಕಟ್ಟಿಸಿದ್ರಿ. ಸುಳ್ಳು ರೇಪ್ ಕೇಸ್ ಹಾಕಿಸಿದ್ರಿ. ಇದೆಲ್ಲ ಬಿಟ್ಟುಬಿಡಿ, ನ್ಯಾಯಯುತವಾಗಿ ಆಡಳಿತ ಮಾಡಿ. ಎಲ್ಲರ ಜೊತೆ ಸೌಹಾರ್ದಯುತವಾಗಿ ಇರಿ. ಈಗಾಗಲೇ 60 ವರ್ಷ ಆಗಿದೆ. ಈಗಾಗಲೇ 60% ಕಿಡ್ನಿ ಹೋಗಿದೆ, ನನಗೂ ಹೋಗಿದೆ. ಮಾತ್ರೆ ಬಿಟ್ಟು ನೀವು ಇರಲ್ಲ, ನಾನು ಇರಲ್ಲ ಮತ್ಯಾಕೆ ದ್ವೇಷ ಸಾಧನೆ? ಎಂದು ಪ್ರಶ್ನಿಸಿದರು. 

ನಗರ ಯೋಜನೆಗಳಲ್ಲಿ ಭ್ರಷ್ಟಾಚಾರ:
ರಾಜರಾಜೇಶ್ವರಿ ಕ್ಷೇತ್ರದ 964 ಕಿ.ಮೀ. ರಸ್ತೆಗೆ ಕೇವಲ ಗುಂಡಿ ಮುಚ್ಚಲು ಗುದ್ದಲಿ ಪೂಜೆ ಮಾಡಲಾಗಿದೆ ಎಂದು ಕಿಡಿಕಾರಿದ ಮುನಿರತ್ನ ಅವರು, ಶೋಲೆ ಸಿನಿಮಾದಂತೆ 70 mm ಫ್ಲೆಕ್ಸ್ ಹಾಕಿದ್ದಾರೆ, ಒಬ್ಬರು ಗಬ್ಬರ್ ಸಿಂಗ್, ಒಬ್ಬರು ಅಮಿತಾಬ್ ಬಚ್ಚನ್ ತರ ಕಾಣಿಸಿದ್ದಾರೆ, ಒಬ್ಬರು ಹೇಮಮಾಲಿನಿ ತರ ಕಾಣ್ತಾ ಇದ್ರು ಎಂದು ವ್ಯಂಗ್ಯವಾಡಡಿದರು. ಮುಂದುವರಿದು ಟನಲ್ ರೋಡ್ ಡಿಪಿಆರ್‌ಗೆ 9 ಕೋಟಿ, ಬ್ರ್ಯಾಂಡ್ ಬೆಂಗಳೂರಿಗೆ 1 ಲಕ್ಷ ಕೋಟಿ ಯೋಜನೆ ಘೋಷಣೆಯಾದರೂ, 'ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ' ಎಂಬಂತೆ ಪರಿಸ್ಥಿತಿ ಇದೆ ಎಂದು ಟೀಕಿಸಿದರು.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಡಿಕೆಶಿಯಿಂದಶೇ.15ರಷ್ಟು ಕಮಿಷನ್: ಮುನಿರತ್ನ
ಡಿಕೆ ಶಿವಕುಮಾರ್ ಜೊತೆಗಿನ ಸಂಬಂಧ:

'ನಾನು ಡಿಕೆ ಶಿವಕುಮಾರ್ ಅವರೊಂದಿಗೆ 21ನೇ ವಯಸ್ಸಿನಿಂದ ಸ್ನೇಹಿತರಾಗಿದ್ದೇನೆ. ಆದರೆ ಅವರು ರೇಪ್ ಕೇಸ್ ಹಾಕುವ ಮಟ್ಟಕ್ಕೆ ಇಳಿದಿದ್ದಾರೆ. ದ್ವೇಷದ ರಾಜಕಾರಣ ಬಿಟ್ಟು ಏನನ್ನಾದರೂ ಸಾಧಿಸಲಿ' ಎಂದು ಮುನಿರತ್ನ ಹೇಳಿದ್ದಾರೆ. ಇದೇ ವೇಳೆ ಎಸ್.ಟಿ ಸೋಮಶೇಖರ್ ವಿರುದ್ಧದ ಆರೋಪಗಳ ಬಗ್ಗೆ, ಅವರು ನನ್ನ ಆತ್ಮೀಯ ಸ್ನೇಹಿತರು, ಅವರ ಬಗ್ಗೆ ಗೌರವವಿದೆ' ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?