ರಿಕ್ಕಿ ರೈ ಪ್ರಕರಣ, ಮುತ್ತಪ್ಪ ರೈ ಪತ್ನಿ ಸೇರಿ ನಾಲ್ವರ ವಿರುದ್ಧ FIR!

Published : Apr 19, 2025, 12:51 PM ISTUpdated : Apr 19, 2025, 04:26 PM IST
ರಿಕ್ಕಿ ರೈ ಪ್ರಕರಣ, ಮುತ್ತಪ್ಪ ರೈ  ಪತ್ನಿ ಸೇರಿ ನಾಲ್ವರ ವಿರುದ್ಧ FIR!

ಸಾರಾಂಶ

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು. ಚಾಲಕ ಬಸವರಾಜ್ ದೂರಿನ ಮೇರೆಗೆ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಕೌಟುಂಬಿಕ ಕಲಹ, ಜೀವ ಬೆದರಿಕೆ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ರಿಕ್ಕಿ ರೈ ಮೂಗು ಮತ್ತು ತೋಳಿಗೆ ಗುಂಡು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಜಿ ಭೂಗತ ದೊರೆ, ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಮಗ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಾಲ್ಕು ಮಂದಿ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜ್ ನೀಡಿದ ದೂರಿನ ಮೇಲೆ ಬಿಡಿದಿ ಪೊಲೀಸ್ ಠಾಣೆಯಲ್ಲಿ  ಎಫ್ ಐ ಆರ್ ದಾಖಲಾಗಿದೆ. ರಾಕೇಶ್ ಮಲ್ಲಿ, ಮುತ್ತಪ್ಪ ರೈ ಎರಡನೆ ಪತ್ನಿ ಅನುರಾಧ, ನಿತೀಶ್ ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ ಎಂಬುವರ ಮೇಲೆ ದೂರು ದಾಖಲಾಗಿದೆ. ಎ1 ಆರೋಪಿ ರಾಕೇಶ್ ಮಲ್ಲಿ, ಎ2 ಆರೋಪಿ ಅನುರಾಧ, ಎ3 ಆರೋಪಿ ನಿತೇಶ್ ಶೆಟ್ಟಿ, ಎ 4 ಆರೋಪಿ ವೈದ್ಯನಾಥ  ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆ ಬೆದರಿಕೆ ಇತ್ತು ಎಂದು ಹೇಳಲಾಗುತ್ತಿದೆ.

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್ ಪ್ರಕರಣ; ₹2000 ಕೋಟಿ ಆಸ್ತಿ ಕಾರಣವಾಯ್ತಾ?

ನಾಲ್ಕೈದು ವರ್ಷಗಳಿಂದ ರಿಕ್ಕಿ ರೈ ಬಳಿ ಕಾರು ಚಾಲಕನಾಗಿ  ಬಸವರಾಜು ಕೆಲಸ ಮಾಡ್ತಿದ್ದಾರೆ. ಹಲವು ಭಾರಿ ನನಗೆ ಜೀವ ಬೆದರಿಕೆ ಇದೆ ಅಂತ ರಿಕ್ಕಿ ರೈ‌ ತಿಳಿಸಿದ್ದರು. ಸದಾಶಿವನಗರ ಹಾಗೂ ಬಿಡದಿಯ ಫಾರಂ ಹೌಸ್ ನಲ್ಲಿ ರಿಕ್ಕಿ ವಾಸವಿದ್ದರು. ತಮ್ಮ ಬೆಂಗಳೂರು ನಿವಾಸದಿಂದ 6 ಗಂಟೆಗೆ ಬಿಟ್ಟು 7.30ಕ್ಕೆ ಬಿಡದಿಯ ಮನೆಗೆ ಬಂದಿದ್ದ ರಿಕ್ಕಿ ರೈ ಮನೆಯಲ್ಲಿ ವಿಶ್ರಾಂತಿ ಪಡೆದು ರಾತ್ರಿ 11 ಗಂಟೆಗೆ ಬೆಂಗಳೂರಿನ ನಿವಾಸಕ್ಕೆ ಹೊರಟಿದ್ದರು. ಕಪ್ಪು ಬಣ್ಣದ ಕೆಎ 53 ಎಂಸಿ 7128 ನಂಬರ್ ನ ಫಾರ್ಚೂನರ್ ಕಾರಿನಲ್ಲಿ ರಿಕ್ಕಿ ರೈ, ಡ್ರೈವರ್ ಬಸವರಾಜ್ ಹಾಗೂ ಅಂಗರಕ್ಷಕ ರಾಜ್ ಪಾಲ್  ಹೊರಟಿದ್ದರು.

ಮನೆಯಿಂದ ಸ್ವಲ್ಪ ದೂರ ಹೋದಾಗ ಟಫ್ ಅಂತ ಶಬ್ಧ ಕೇಳಿ ಬಂದಿತ್ತು. ಸ್ವಲ್ಪ ಮುಂದೆ ಹೋಗಿ ಟಯರ್ ಬ್ಲಾಸ್ಟ್ ಆಗಿರಬಹುದು ಅಂತಾ  ಪರಿಶೀಲನೆ ನಡೆಸಿದ್ರು, ಆದರೆ ಎಲ್ಲವೂ ಸರಿಯಾಗಿದೆ ಅಂತಾ ಮುಂದೆ ಹೋದಾಗ ರೈಲ್ವೆ ಕ್ರಾಸ್ ವರೆಗೂ ಹೋಗಿ ಪರ್ಸ್ ಮರೆತಿರೋದಾಗಿ ರಿಕ್ಕಿ ರೈ ಹೇಳಿದ್ದಕ್ಕೆ. ಮತ್ತೆ ಬಿಡದಿಯ ಮನೆಗೆ ವಾಪಾಸ್ ಬಂದರು. ಆ ಬಳಿಕ ಮತ್ತೆ 12.50ಕ್ಕೆ ಬಿಡದಿಯಿಂದ ಬೆಂಗಳೂರಿಗೆ ರಿಕ್ಕಿ ರೈ ಸಹಿತ ಮೂವರು ಹೊರಟಿದ್ದರು.

ಇದಾದ ನಂತರ ಮೊದಲು ಸೌಂಡ್ ಕೇಳಿದ್ದ ಜಾಗದಲ್ಲೆ ಮತ್ತೆ ಫೈರಿಂಗ್ ನಡೆದಿದೆ. ಏಕಾಏಕಿ ಗುಂಡು ಹಾರಿಸಿದ ಪರಿಣಾಮ ಡ್ರೈವರ್ ಬಚಾವ್ ಆಗಿದ್ದು, ರಿಕ್ಕಿ ರೈ ಅವರ ಮೂಗು ಹಾಗೂ ಬಲತೋಳಿಗೆ  ಗುಂಡು ತಾಗಿದೆ. ಒಂದೇ ರಾತ್ರಿ ಎರಡು ಬಾರಿ ಫೈರಿಂಗ್ ಆಗಿದ್ದು, ಮೊದಲನೇ ಬಾರಿ ಪಾರಾಗಿ ಹೋಗಿದ್ದ ರಿಕ್ಕಿ ಎರಡನೇ ಬಾರಿ ಗುಂಡೇಟಿಗೆ ಸಿಕ್ಕಿದ್ದಾರೆ. ಕೂಡಲೇ ಗಾಡಿ ನಿಲ್ಲಿಸಿ ರಿಕ್ಕಿ ರೈ ಅವರನ್ನ  ಚಾಲಕ ಬಸವರಾಜ್ ನೋಡಿದಾಗ ತೀವ್ರ ರಕ್ತ ಸ್ರಾವ ಆಗಿತ್ತು, ತನ್ನದೇ ಶರ್ಟ್ ಬಿಚ್ಚಿ ಮುಖದ ಮೇಲೆ ಒತ್ತಿ ಹಿಡಿದರು. ಅದ್ರೂ ರಕ್ತಸ್ರಾವ ಕಡಿಮೆ ಆಗಿರಲಿಲ್ಲ. ಬಳಿಕ ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ಅದೇ ಕಾರಿನಲ್ಲಿ ತೆರಳಿದರು. ಕೂಡಲೇ ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ನೀಡಿದರು.

Breaking News: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಮಿಡ್ ನೈಟ್ ಫೈರಿಂಗ್!

ಘಟನೆ ಬಳಿಕ ರಿಕ್ಕಿ ರೈ ಅವರನ್ನ ಡ್ರೈವರ್ ಬಸವರಾಜ್ ಮಾತನಾಡಿಸಿದ್ದು, ಈ ವೇಳೆ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥ್ ಮೇಲೆ ಅನುಮಾನ ಇರೋದಾಗಿ ತಿಳಿಸಿದ್ರು. ಮುತ್ತಪ್ಪ ರೈ ಗೂ ಹಲವಾರು ವಿರೋಧಿಗಳಿದ್ರು, ಅವರಿದ್ದಾಗಲೂ ಅಟ್ಯಾಕ್ ನಡೆದಿತ್ತು. ಬಳಿಕ ಅವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಅವರ ಕೊನೆಯ ದಿನಗಳಲ್ಲೂ ಅನುರಾಧ, ರಾಕೇಶ್ ಮಲ್ಲಿಯಿಂದ ಬೆದರಿಕೆ ಕರೆ ಬಂದಿತ್ತು. ಮಾನಸಿಕ ಕಿರುಕುಳ ಕೊಡ್ತಿದ್ದರು. ಹಾಗಾಗಿ ಮಕ್ಕಳಿಗೆ ಸದಾ ಎಚ್ಚರಿಕೆಯಿಂದ ಇರುವಂತೆ ಮುತ್ತಪ್ಪ ರೈ ತಿಳಿಸಿದ್ದರಂತೆ. ರಿಕ್ಕಿ ರೈಗೆ ವಿವಾಹವಾಗಿದ್ದು, ಹೆಂಡತಿ, ಮಗು ವಿದೇಶದಲ್ಲಿದ್ದಾರೆ. ಆಗಾಗ ಅಲ್ಲಿಗೆ ಹೋಗಿ ಬಂದಿರೋದು ಮಾಡುತ್ತಿರುತ್ತಾರಂತೆ. ಸದ್ಯ ದೂರಿನಲ್ಲಿ ಉಲ್ಲೇಖ ಮಾಡಿರೋ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ  ಚಾಲಕ ತನ್ನ ದೂರಿನಲ್ಲಿ ತಿಳಿಸಿದ್ದಾನೆ .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Farmer wins battle: ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!