
ಮುಂಡಗೋಡ (ಸೆ.25): ಕಾಮಿಡಿ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಸಬ್ ರಿಜಿಸ್ಟ್ರರ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಮುಂಡಗೋಡ ಸಬ್ ರಿಜಿಸ್ಟ್ರರ್ ಕಚೇರಿ ಬುಧವಾರ ಇಡೀ ದಿನ ಬಂದ್ ಆಗಿತ್ತು.
ಸಬ್ ರಿಜಿಸ್ಟ್ರರ್ ದೀಪಾ, ಕಂಪ್ಯೂಟರ್ ಆಪರೇಟರ್‌ಗಳಾದ ದೇವರಾಜ ಮತ್ತು ಹೇಮಾ ಸೇರಿದಂತೆ ಯಾರೂ ಕಚೇರಿಗೆ ಆಗಮಿಸದ ಕಾರಣ ಕಚೇರಿಯ ಬೀಗ ತೆಗೆಯಲೇ ಇಲ್ಲ.
ನಕಲಿ ದಾಖಲೆ ಸೃಷ್ಟಿಸಿ ತಮ್ಮ ಮಗಳನ್ನು ಖ್ವಾಜಾ ಶಿರಹಟ್ಟಿಯೊಂದಿಗೆ ವಿವಾಹ ಮಾಡಲಾಗಿದೆ ಎಂದು ಯುವತಿಯ ತಾಯಿ ಶಿವಕ್ಕ ಜಾಲಿಹಾಳ ದೂರು ದಾಖಲಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಗೈರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮುಕಳೆಪ್ಪನದು ನಿಯಮ ಬಾಹಿರ ವಿವಾಹ ನೋಂದಣಿ, ಠಾಣೆ ಮೆಟ್ಟಲೇರಿದ ಪತ್ನಿ!
ಕಚೇರಿಯ ಕಾರ್ಯನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿದೆ ಇದರಿಂದಾಗಿ ಸ್ಥಳೀಯರ ಕೆಲಸಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗಿದೆ.
ಈ ಪ್ರಕರಣವು ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ