
Mysuru Dasara 2025: ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ಪ್ರೀತಮ್ ಚಕ್ರವರ್ತಿ ಗಾನಸುಧೆಗೆ ಮೈಸೂರು ಜನತೆ ಫಿದಾ ಆಗಿ ಕುಣಿದು ಕುಪ್ಪಳಿಸಿದರು.ನಗರದ ಉತ್ತನಹಳ್ಳಿ ಬಳಿಯ ಮೈದಾನದಲ್ಲಿ ಆಯೋಜಿಸಿರುವ ಯುವ ದಸರೆಯಲ್ಲಿ ಬುಧವಾರ ರಾತ್ರಿ ಪ್ರೀತಮ್ ವೇದಿಕೆಗೆ ಬರುತ್ತಿದ್ದಂತೆ ಯುವ ಸಮೂಹ ಶಿಳ್ಳೆ ಚಪ್ಪಾಳೆ ಮೂಲಕ ಸ್ವಾಗಿತಿಸಿದರು.
ಯುವ ಸಮೂಹದ ಹರ್ಷ ನೋಡಿದ ಗಾಯಕ ಪ್ರೀತಮ್, ಹೇ ದಿಲ್ ಹೇ ಮುಸ್ಕಿಲ್, ಥೂ ಮೇರಿ ಸನಮ್, ಥುಮ್ ಜೋ ಆಯೆ, ಅಭಿ ಕುಚ್ ದೇನೆ, ಹಲ್ಕಾ ಹಲ್ಕಾ ಹೇ ಸಮಾ, ಬಿನ್ ತೇರಿ ಸೇರಿದಂತೆ ತಮ್ಮ ಹಲವು ಹಿಂದಿ ಹಿಟ್ ಚಿತ್ರಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಇದಲ್ಲದೆ ಕನ್ನಡದ ಸುದೀಪ್ ನಟನೆಯ ಎಕ್ಕ ಸಕ್ಕ ಎಕ್ಕ ಸಕ್ಕ ಹಾಡು ಹಾಡುತ್ತಿದ್ದಂತೆ ಇಡೀ ಪ್ರೇಕ್ಷಕರು ಎದ್ದು ಡ್ಯಾನ್ಸ್ ಮಾಡಿದರು. ಇದಕ್ಕೂ ಮುನ್ನ ಬಾಲಿವುಡ್ ಶೋರ್ ಪೊಲೀಸ್ ಗಾಯಕರ ತಂಡ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತೊಬ್ ತೋಬ, ಊರ್ವಶಿ ಊರ್ವಶಿ ಹಾಗೂ ಇನ್ನಿತರ ಹಿಂದಿ ಗೀತೆಗಳನ್ನು ಹಾಡಿ ಯುವ ದಸರಾ ವೇದಿಕೆಯಲ್ಲಿ ಮೋಡಿ ಮಾಡಿದರು.
ಇದನ್ನೂ ಓದಿ: Mysuru Dasara 2025: ದಸರಾದಲ್ಲಿ 3000 ಡ್ರೋನ್ ಗಿನ್ನೆಸ್ ದಾಖಲೆಗೆ ಪ್ರಯತ್ನ, ಯಾವ ದಿನ ನೋಡಬಹುದು? ಇಲ್ಲಿದೆ ವಿವರ
ಸಿಎಂ, ಡಿಸಿಎಂಗೆ ಸನ್ಮಾನ
ಯುವ ದಸರಾ ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ಭೈರತಿ ಸುರೇಶ್ ಅವರಿಗೆ ಯುವ ದಸರಾ ಉಪ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಂಸದ ಸುನೀಲ್ ಬೋಸ್, ವಿಧಾನಪರಿಷತ್ತು ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಡಾ.ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮೊದಲಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ