SL Bhyrappa: ರಂಗಾಯಣದಿಂದ ದೂರ ಇಟ್ಟಿದ್ದರು, ನಾನೇ ಮೊದಲು ಆಹ್ವಾನಿಸಿದೆ -ಅಡ್ಡಂಡ ಕಾರ್ಯಪ್ಪ

Published : Sep 25, 2025, 09:43 AM IST
SL Bhyrappa

ಸಾರಾಂಶ

ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ (94) ನಿಧನರಾಗಿದ್ದಾರೆ. ಅವರ ಅಗಾಧ ಸಾಹಿತ್ಯ ಸೇವೆಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಗ್ರಹಿಸಿದರು. ಮೈಸೂರಲ್ಲಿ ಅವರ ಹೆಸರಿನ ಅಧ್ಯಯನ ಪೀಠ ಸ್ಥಾಪನೆ ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರು (ಸೆ.25): ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಎಸ್ಎಲ್ ಬೈರಪ್ಪ (94) ನಿಧನರಾದರು. ಪರ್ವ, ಉತ್ತರಕಾಂಡ, ವಂಶವೃಕ್ಷ, ಆವರಣ ಸೇರಿ ಹಲವು ಕೃತಿಗಳನ್ನು ಎಸ್ಎಲ್ ಬೈರಪ್ಪ ರಚಿಸಿದ್ದರು. ಗೃಹ ಭಂಗ ಕಾದಂಬರಿ ಧಾರಾವಾಹಿಯಾಗಿದ್ದರೆ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳು ಸಿನಿಮಾಗಳಾಗಿವೆ. ಇಂದಿಗೂ ಕೂಡ ಎಸ್ಎಲ್ ಭೈರಪ್ಪನವರ ಕೃತಿಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಕನ್ನಡ ಸಾಹಿತ್ಯಕ್ಕೆ ಎಷ್ಟೆಲ್ಲ ಕೊಡುಗೆ ನೀಡಿರುವ ಎಸ್ ಎಲ್ ಭೈರಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಎಸ್ ಎಲ್ ಭೈರಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು: ಅಡ್ಡಂಡ ಕಾರ್ಯಪ್ಪ

ಖ್ಯಾತ ಕಾದಂಬರಿಕಾರ ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರವು ಈ ಬಗ್ಗೆ ಕೇಂದ್ರಕ್ಕೆ ಶೀಘ್ರವೇ ಶಿಫಾರಸು ಮಾಡಬೇಕು ಎಂದಿದ್ದಾರೆ., ಭೈರಪ್ಪರ ಸಾಹಿತ್ಯ ಸೇವೆಯನ್ನು ಗೌರವಿಸುವಂತೆ ರಾಜ್ಯದಲ್ಲಿ ಮೈಸೂರಿನಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆಯೂ ಹೇಳಿದ್ದಾರೆ. 

ಇದನ್ನೂ ಓದಿ: SL Bhyrappa ಭೈರಪ್ಪ ಶತಾಯುಷಿ ಆಗುತ್ತಾರೆ ಅಂದುಕೊಂಡಿದ್ದೆ: ಪಿ. ಶೇಷಾದ್ರಿ

ಎಸ್.ಎಲ್ ಭೈರಪ್ಪನವರನ್ನು ರಂಗಾಯಣದಿಂದ ದೂರ ಇಡಲಾಗಿತ್ತು

ನಾನು ನಿರ್ದೇಶಕನಾದ ಮೇಲೆ ಮೊದಲು ಅವರನ್ನು ರಂಗಾಯಣಕ್ಕೆ ಆಹ್ವಾನಿಸಿದ್ದೆ. ನನ್ನ 'ಟಿಪ್ಪು ನಿಜಗನಸುಗಳು' ನಾಟಕಕ್ಕೆ ಮುನ್ನುಡಿ ಬರೆದಿದ್ದರು. ಯಾವತ್ತೂ ಅವರು ಸಾಪ್ಟ್ ಆಗಿ ಮಾತಾಡಿ ಮರುಳು ಮಾಡುವ ಕೆಲಸ ಮಾಡಲಿಲ್ಲ. ಭೈರಪ್ಪ ಅವರು ಅಷ್ಟು ನಿಷ್ಠುರವಾದಿಯಾಗಿದ್ದರು. ಬಾನು ಮುಷ್ತಾಕ್ ಈಗ ಲೇಖನ ಬರೆದಿರಬಹುದು. ಆದರೆ ಅವರು ಡಬಲ್ ಸ್ಟ್ಯಾಂಡರ್ಡ್ ಇರುವವರು. ಅವರು ದೊಡ್ಡ ಮುಸ್ಲಿಂ ಫಂಡಮೆಂಟಲ್. ಭೈರಪ್ಪ ಖಾನ್ ಆಗಿದ್ರೆ ಸರ್ಕಾರ ಅವರ ಬಗ್ಗೆ ಮುತುವರ್ಜಿ ವಹಿಸುತ್ತಿತ್ತು. ಸಿದ್ದರಾಮಯ್ಯ ಅವರ ನೆನಪಿನಲ್ಲಿ ಏನಾದರೂ ಕಾರ್ಯಕ್ರಮ ಮಾಡುತ್ತಿದ್ದರು. ಅವರ ಬಳಿ ಭೈರಪ್ಪನವರಿಗೆ ಏನಾದರೂ ಮಾಡಿ ಆಂತ ಹೇಳಿ ಏನು ಪ್ರಯೋಜನ? ಮೈಸೂರಿನಲ್ಲಿ ಭೈರಪ್ಪನವರ ಹೆಸರಲ್ಲಿ ಅಧ್ಯಯನ ಪೀಠ ಮಾಡಲಿ ಭಾರತ ರತ್ನ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಅಷ್ಟೇ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!