ಮುಂಡರಗಿ ಲೇಔಟ್: ಅಶ್ರಯ ಮನೆಗಳ  ಹಂಚಿಕೆ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಹಗ್ಗ ಜಗ್ಗಾಟ

Published : Sep 12, 2023, 12:46 PM IST
ಮುಂಡರಗಿ ಲೇಔಟ್: ಅಶ್ರಯ ಮನೆಗಳ  ಹಂಚಿಕೆ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಹಗ್ಗ ಜಗ್ಗಾಟ

ಸಾರಾಂಶ

ಮುಂಡ್ರಗಿ ಲೇಔಟ್ ನಲ್ಲಿ ಹಂಚಿಕೆಯಾಗದೇ ಉಳಿದ ಮನೆಗಳು. ಸಾವಿರ ಮನೆಗಳಿದ್ರೂ ಮೂಲಭೂತ ಸೌಕರ್ಯ ನೀಡುವಲ್ಲಿ ವಿಫಲ. ಮನೆಗಳ ಹಂಚಿಕೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರ ಹಗ್ಗಜಗ್ಗಾಟ

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

 ಬಳ್ಳಾರಿ (ಸೆ.12) : ಅದು ಬಡವರಿಗ ನೀಡಬೇಕೆನ್ನುವ ಉದ್ದೇಶದಿಂದ ನಿರ್ಮಾಣ ಮಾಡಿದ ಮನೆಗಳು ಆದ್ರೇ ವರ್ಷಗಳೇ ಕಳೆದ್ರೂ ಆ ಮನೆಗಳಿಗೆ ಮೂಲಭೂತ ಸೌಕರ್ಯ ನೀಡಲು ಮತ್ತು ಸಮರ್ಪಕವಾಗಿ ಹಂಚಿಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದರಲ್ಲಿ ಅಧಿಕಾರಿಗಳದ್ದೋ ಅಥವಾ ಜನಪ್ರತಿನಿಧಿಗಳು ನಿರ್ಲಕ್ಷ್ಯವೋ ಗೊತ್ತಿಲ್ಲ. ಬಳ್ಳಾರಿಯಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಾವಿರಾರು ಮನೆಗಳು ಬಳಕೆಯಾಗದೇ  ಹಾಗೇ ಅಸ್ಥಿಪಂಜರದಂತೆ ನಿಂತಿವೆ. ಇನ್ನೂ ಈ ಮನೆ ಹಂಚಿಕೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ವಾಗ್ವಾದ ನಡೆಸಿದ್ದಾರೆ.  
 
5600 ಮನೆಗಳ ನಿರ್ಮಾಣ ಇದರಲ್ಲಿ ಒಂದು ಸಾವಿರ ಮನೆ ವಾಸಕ್ಕೆ ಯೋಗ್ಯ

ಸಾಲು ಸಾಲಾಗಿ ನಿಂತಿರೋ ಸಾವಿರಾರು ಆಶ್ರಯ ಮನೆಗಳು.. ಮನೆಗಳನ್ನೇನು ಭರ್ಜರಿಯಾಗಿ ನಿರ್ಮಾಣ ಮಾಡಿದ್ಧಾರೆ ಆದ್ರೇ, ಮೂಲಭೂತ ಸೌಕರ್ಯ ಮಾತ್ರ ಶೂನ್ಯ.. ಕೇವಲ ಆರುವರೆ ಲಕ್ಷಕ್ಕೊಂದು ಮನೆಯಂದ್ರೂ ಇಲ್ಲಿಯ ಮನೆಗಳನ್ನು ಕೊಳ್ಳುವವರೇ ಇಲ್ಲ ಎನ್ನುಲಾಗುತ್ತಿದೆ.. ಹೌದು, ಸಾಲು ಸಾಲು ಸಿದ್ದಗೊಂಡು ನಿಂತಿರೋ  ಈ ಮನೆಗಳು ಇರೋದು ಬಳ್ಳಾರಿ ಹೊರವಲಯದ ಮುಂಡ್ರಗಿ ಲೇಔಟ್ ನಲ್ಲಿ. ಮಹಾತ್ಮ ಗಾಂಧಿ ಟೌನ್ ಶಿಪ್ ಹೆಸರಿನ ಈ ಮನೆಗಳನ್ನು ಈ ಹಿಂದಿನ ಅಂದ್ರೇ 2013 ರಿಂದ 2018ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ನೀಡಬೇಕೆಂದು ಅಂದಿನ ಉಸ್ತುವಾರಿ ಸಚಿವ ಸಂತೋಷ ಲಾಡ್ ನಿರ್ಮಾಣ ಮಾಡಲು ಮುಂದಾಗಿದ್ರು. ಆಗ ಸ್ವಲ್ಪ ಕೆಲಸವಾದ್ರೂ ನಂತರ ಬಂದ ಬಿಜೆಪಿ ಸರ್ಕಾರದಲ್ಲಿ 5600 ಮನೆಗಳನ್ನು ನಿರ್ಮಾಣಕ್ಕೆ ಕೈ ಹಾಕಲಾಗಿತ್ತು. ಇದೀಗ ಇದರಲ್ಲಿ ಒಂದು ಸಾವಿರ ಮನೆ ರೆಡಿಯಾಗಿದ್ರೂ ಹಂಚಿಕೆಯಾಗಿಲ್ಲ. ಇದಕ್ಕೆ ಕಾರಣ ಮನೆಗಳಿಗೆ ಮೂಲಭೂತ ಸೌಲಭ್ಯಗಳಾದ ನೀರು, ಚರಂಡಿ ಸೇರಿದಂತೆ ಟ್ರಾನ್ಸಪೋರ್ಟ್ ವ್ಯವಸ್ಥೆ ಇಲ್ಲದೇ ಇರೋದಾಗಿದೆ.

Dharwad News: ಮರೀಚಿಕೆಯಾದ ಸರ್ಕಾರದ ಸಹಾಯಧನ!

 ಬಿಜೆಪಿ ಕಾರ್ಯಕರ್ತರಿಗೆ ಹಂಚಿಕೆ ಮಾಡಿದ್ದಾರೆಂದು ಕಾಂಗ್ರೆಸ್ ನವರ ವಾದ

ಈ ಮಧ್ಯೆ ಬಿಜೆಪಿ ಸರ್ಕಾರದ ಕೊನೆಯಲ್ಲಿ ಸಿದ್ದಗೊಂಡಿರೋ ಮನೆಗಳನ್ನು ಲಾಟರಿ ಮೂಲಕ ಹಂಚ ಲಾಯ್ತು. ಹಂಚಿಕೆಯಾದ ಬಹುತೇಕ ಜನರು ಹಣವನ್ನು ಕಟ್ಟಿಲ್ಲ. ಇದಕ್ಕೆ ಕಾರಣ ಮನೆಗಳಿಗೆ ಮೂಲಭೂ ಸೌಕರ್ಯ ಇಲ್ಲದೇ ಇರೋದಾಗಿದೆ. ಮನೆ ಕಟ್ಟಿದ್ದಾರೆ ಎಂದು ಹೋದ್ರೂ ಅಲ್ಲಿ ಯಾವುದೇ ಸೌಲಭ್ಯವಿಲ್ಲದೇ ಹೇಗೆ ಇರೋದು ಎನ್ನುವದು ಜನರ ವಾದವಾಗಿದೆ. ಇನ್ನೂ ಬಿಜೆಪಿ ಸರ್ಕಾರದಲ್ಲಿ ಇಲ್ಲಿಯ ಮನೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಾಗಿ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಸಾವಾಲು ಹಾಕಿರೋ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆ ರೀತಿ ಒಂದು ಮನೆ ಹಂಚಿಕೆಯಾದ್ರೂ ತೋರಿಸಿ ಎಂದು ಸವಾಲು ಹಾಕಿದ್ದಾರೆ.

ಯಲಬುರ್ಗಾ ಕ್ಷೇತ್ರಕ್ಕೆ 4500 ಮನೆ ಮಂಜೂರು; ಫಲಾನುಭವಿಗಳು ಯಾರಿಗೂ ಹಣ ಕೊಡಬೇಡಿ - ಸಚಿವ ಹಾಲಪ್ಪ ಆಚಾರ

ಮನೆ ಹಂಚಿಕೆಯಾಗದೇ ಇದ್ರೇ ಹಾಳಾಗಿ ಹೋಗಲಿವೆ

 ಯಾವುದೇ ಸರ್ಕಾರ ಒಂದು ಯೋಜನೆಯನ್ನು ಮಾಡೋ ಮುನ್ನ ಸಾಕಷ್ಟು ಯೋಚನೆ ಮತ್ತು ಪೂರ್ವ ಸಿದ್ಧತೆಯನ್ನೊಳಗೊಂಡ ಯೋಜನೆ ಮಾಡಬೇಕು.ಆದ್ರೇ  ತರಾತುರಿಯಲ್ಲಿ ತೆಗೆದುಕೊಂಡ ನಿರ್ಣಯವೋ ಅಥವಾ ನಿರ್ಲಕ್ಷ್ಯೋ ಗೊತ್ತಿಲ್ಲ ಆರು ವರ್ಷ ಕಳೆದ್ರೂ ನಿರ್ಮಾಣ ಮಾಡಿದ ಮನೆಗಳ ಹಂಚಿಕೆಯಾಗಿಲ್ಲದಿರೋದು ದುರ್ದೈವದ ಸಂಗತಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!