ಬಿಕೆ ಹರಿಪ್ರಸಾದ್ ಹೇಳಿಕೆ ವಿರುದ್ದ ಕಾಗಿನೆಲೆ ಈಶ್ವರಾನಂದಪುರಿ ಶ್ರೀ ಆಕ್ರೋಶ

By Ravi Janekal  |  First Published Sep 12, 2023, 12:20 PM IST

ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ದಿನಗಳಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಸ್ವ ಪಕ್ಷದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಲೇ ಬರುತ್ತಿದ್ದಾರೆ. ಇದೇ ವಿಚಾರವಾಗಿ ಕಾಗಿನೆಲೆ ಶಾಖಾ ಮಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳು ಹರಿಪ್ರಸಾದ್ ವಿರುದ್ದ ವಾಗ್ದಾಳಿ ನಡೆಸುವ ಮೂಲಕ ಸರ್ಕಾರದ ಹಾಗೂ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದಾರೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.12) : ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ದಿನಗಳಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಸ್ವ ಪಕ್ಷದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಲೇ ಬರುತ್ತಿದ್ದಾರೆ. ಇದೇ ವಿಚಾರವಾಗಿ ಕಾಗಿನೆಲೆ ಶಾಖಾ ಮಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳು ಹರಿಪ್ರಸಾದ್ ವಿರುದ್ದ ವಾಗ್ದಾಳಿ ನಡೆಸುವ ಮೂಲಕ ಸರ್ಕಾರದ ಹಾಗೂ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದಾರೆ.

Latest Videos

undefined

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಕೋಟ್ಯಂತರ ಜನರ ಮನಸ್ಸಿನಲ್ಲಿದ್ದು, ಮನೆಗೆ ಮಾರಿ ಪರರಿಗೆ ಉಪಕಾರಿ ಅನಿಸಿಕೊಳ್ಳುತ್ತ ಕುರುಬ ಸಮಾಜಕ್ಕೆ ಏನೂ ಮಾಡಿಕೊಳ್ಳದೆ ಇತರೆ ಎಲ್ಲಾ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ವ್ಯಕ್ತಿಯಾಗಿದ್ದಾರೆ ಎಂದು ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುವ ಮೂಲಕ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿರುದ್ದ ಹರಿಹಾಯ್ದಿದ್ದಾರೆ. 

ಯಾರ ಹುದ್ದೆಯನ್ನು ಸಿಎಂ ತಪ್ಪಿಸಿಲ್ಲ ಹರಿಪ್ರಸಾದ್ ಅಸಮಾಧಾನ ಸರಿಯಲ್ಲ : ಬೋಸರಾಜು

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನಾಗೇನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡುತ್ತ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್(BK hariprasad) ದೊಡ್ಡ ನಾಯಕನಾಗಿದ್ದು, ಅವರಿಗೆ ಇಷ್ಟೊಂದು ಹೊಟ್ಟೆ ಕಿಚ್ಚು ಇರಬಾರದು. ಸಿದ್ಧರಾಮಯ್ಯ ಸದಾ ಕುರುಬರನ್ನೇ ಬೆಳೆಸುತ್ತಿದ್ದಾರೆ ಎಂಬ ಹೇಳಿಕೆ ಪ್ರಬುದ್ಧ ರಾಜಕಾರಣಿಯ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎರಡು ಭಾರಿ ಮುಖ್ಯಮಂತ್ರಿ ಆಗಿರುವ ಸಿದ್ಧರಾಮಯ್ಯ ಎಂದು ಸಹ ಜಾತಿ ರಾಜಕಾರಣ ಮಾಡಲಿಲ್ಲ. ಸಿದ್ಧರಾಮಯ್ಯ ಸಂಪುಟದಲ್ಲಿ ಬಹಳ ಜನ ಕುರುಬರು ಮಂತ್ರಿಗಳಾಗಿರಲಿಲ್ಲ. 

ಸಣ್ಣ ಸಮುದಾಯಗಳಿಗೂ ಸಿದ್ಧರಾಮಯ್ಯ ಅವಕಾಶ ನೀಡಿದರು. ಬಡವರು, ಹಿಂದುಳಿದವರು, ದಲಿತರು, ಮಹಿಳೆಯರ ಪರ‌ ಧ್ವನಿ ಆದವರು ಸಿದ್ದರಾಮಯ್ಯ. ಇದನ್ನು ತಿಳಿಯದೆ ಹರಿಪ್ರಸಾದ್ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಆದ್ದರಿಂದ ನಾವು ಈ ಸಂದರ್ಭದಲ್ಲಿ ಮಾತನಾಡದಿದ್ದರೆ ಜನರಿಗೆ ಸತ್ಯ ಗೊತ್ತಾಗುವುದಿಲ್ಲ ಎಂದು ಈ ಹೇಳಿಕೆ ನೀಡುತ್ತಿರುವುದಾಗಿ ತಿಳಿಸಿದರು. ಒಕ್ಕಲಿಗ, ಲಿಂಗಾಯತರು ಸಿಎಂ ಆದಾಗಿನ ಸಂಪುಟ ನೋಡಿ. ಮುಖ್ಯಮಂತ್ರಿ ಆಗಿದ್ದವರು ಆಯಾ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಿದ್ದರು.

ಆದರೆ ಸಿದ್ಧರಾಮಯ್ಯ ಮಾತ್ರ ಎಲ್ಲಾ ಸಮುದಾಯಗಳಿಗೂ ಸ್ಥಾನ ನೀಡಿದ್ದಾರೆ ಎಂದು ಹೇಳಿದ ಅವರು, ಹರಿ ಪ್ರಸಾದ್ ಅರಮನೆ ಮೈದಾನದಲ್ಲಿ ಸಮಾವೇಶ ಮಾಡುವ ಮೂಲಕ ಈಗ ಹಿಂದುಳಿದ ಸಮಾಜದ ನಾಯಕರಾಗಲು ಹೊರಟಿದ್ದಾರೆ. ಆದರೆ ಆತ ಎಂದೂ ಕೂಡ ಹಿಂದುಳಿದ ಸಮುದಾಯಗಳ ಪರ ಮಾತಾಡಿದವರಲ್ಲ. ಅದೇ ರೀತಿ ಹರಿಪ್ರಸಾದ್ ಅವರೇ ನಿವೇನೂ ಎಂದು ಸಾಧನೆ ಮಾಡಲು ಆಗುವುದಿಲ್ಲ ಎಂದು ಸವಾಲು ಹಾಕಿದರು.

 ಸಿದ್ಧರಾಮಯ್ಯ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿದ್ದರು. ಆಗ ಉಪ ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕುವುದಾಗಿ ದೇವೇಗೌಡರು ಹೇಳಿದ್ದರು. ಯಾವುದಕ್ಕೂ ಹೆದರದೆ, ಅಧಿಕಾರಕ್ಕೆ ಅಂಟಿಕೊಳ್ಳದೆ ಅಹಿಂದ ಸಮಾವೇಶ ಮಾಡಿದ್ದರು. ನಂತರ ಅಹಿಂದ ಸಮಾವೇಶದಿಂದ ಉಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಸಿದ್ಧರಾಮಯ್ಯ ರಾಜಕಾರಣ ಮಾಡುವುದು ಅಧಿಕಾರಕ್ಕಾಗಿ ಅಲ್ಲ, ಜನರಿಗಾಗಿ ರಾಜಕಾರಣ ಮಾಡುತ್ತಾರೆ ಎಂದು ತಿಳಿ ಹೇಳಿದರು.

ನನ್ನ ಮೇಲೆ ಯಾರಾದರೂ ದೂರು ಕೊಡಲಿ: ಸಿದ್ದು ಹೆಸರೇಳದೇ ಅರ್ಕಾವತಿ ಹಗರಣ ಪ್ರಸ್ತಾಪಿಸಿದ ಹರಿಪ್ರಸಾದ್

ಸಿದ್ಧರಾಮಯ್ಯ ಅವರ ಮುಖ ನೋಡಿ ರಾಜ್ಯದ ಜನ ಮತ ಹಾಕಿದ್ದಾರೆ. ಹೈಕಮಾಂಡ್ ಹಾಗೂ 135 ಜನ ಶಾಸಕರು ಸೇರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಹೇಳಿರುವ ಶ್ರೀಗಳು,  ನಿಮ್ಮನ್ನೇಕೆ ಸಿಎಂ ಮಾಡಲಿಲ್ಲ ಎಂದು ಹರಿಪ್ರಸಾದ್ ಗೆ ಪ್ರಶ್ನೆಸಿ, ನಿಮ್ಮನ್ನು ನೋಡಿ ಜನರು ಯಾರೂ ಸಹ ಮತ ಹಾಕಿಲ್ಲ ಎಂದು ಹರಿಪ್ರಸಾದ್ ವಿರುದ್ಧ ಕಿಡಿಕಾರಿದರು.

click me!