ದೇಶದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕ ಸ್ಥಾನ ಗೆಲ್ಲುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಭವಿಷ್ಯ ನುಡಿದಿರುವ ಮಾಜಿ ಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ರಾಯರೆಡ್ಡಿ ಅವರು, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.
ಕಲಬುರಗಿ (ಸೆ.12): ದೇಶದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕ ಸ್ಥಾನ ಗೆಲ್ಲುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಭವಿಷ್ಯ ನುಡಿದಿರುವ ಮಾಜಿ ಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ರಾಯರೆಡ್ಡಿ ಅವರು, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.
ಕೆಕೆಆರ್‌ಡಿಬಿಗೆ ತಮ್ಮ ಕ್ಷೇತ್ರದ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲು ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಯುಪಿಎ ಕೂಟದಿಂದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿರುವ ಉದಾಹರಣೆ ನಮ್ಮೆಲ್ಲರ ಮುಂದಿದೆ. ಇದೀಗ ಅಂತಹ ಸಂದರ್ಭ ಬಂದಿದ್ದರಿಂದ ಈ ಹುದ್ದೆಗೆ ಅರ್ಹರಾಗಿರುವ ಡಾ. ಖರ್ಗೆ ಅವರನ್ನು ಪ್ರದಾನಿ ಅಭ್ಯರ್ಥಿ (Mallikarjun kharge prime minister candidate ?) ಎಂದು ಪಕ್ಷ ಘೋಷಿಸಲಿ, ಆ ಮೂಲದ ದೇಶದಲ್ಲಿ ದಲಿತ ಸಮುದಾಯದವರಿಗೆ ಪ್ರಧಾನಿ ಪಟ್ಟ ನೀಡುತ್ತಿರುವ ಸಂದೇಶ ಸಾರಲಿ ಎಂದು ರಾಯರೆಡ್ಡಿ ಆಗ್ರಹಿಸಿದ್ದಾರೆ.
undefined
ಕರ್ನಾಟಕ ಭ್ರಷ್ಟರಾಜ್ಯ ಆಗುತ್ತಿದೆ, ರಾಜಕೀಯ ವ್ಯವಸ್ಥೆ ಬೇಸರ ತಂದಿದೆ: ಶಾಸಕ ಬಸವರಾಜ ರಾಯರೆಡ್ಡಿ
ಕಾಂಗ್ರೆಸ್ ಪಕ್ಷಕ್ಕೆ ನಾನು ನನ್ನ ವೈಯಕ್ತಿಕ ಅಭಿಪ್ರಾಯ ತಿಳಿಸುತ್ತಿರುವೆ. ಹಿರಿಯ ನಾಯಕರು ಎಲ್ಲರೂ ಸೇರಿಕೊಂಡು ಈ ಬಗ್ಗೆ ಚಿಂತಿಸಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದರು.
ಖರ್ಗೆಯವರು ಅನುಭವಿ ಹಾಗೂ ಹಿರಿಯ ಮುತ್ಸದ್ದಿಯಾಗಿದ್ದಾರೆ. ಇವರ ನೇತೃತ್ವದಲ್ಲಿ ದೇಶಕ್ಕೆ ಒಳಿತಾಗಲಿ ಅನ್ನೋದೋ ತಮ್ಮ ಭಾವನೆ ಎಂದರು.
ಸಿದ್ಧಾಂತ, ತತ್ವಗಳು ನಾಶವಾಗಿರುವಾಗ ಅವಕಾಶವಾದಿತನವೇ ರಾಜಕೀಯದಲ್ಲಿಂದು ಹೆಚ್ಚು ಮುಂಚೂಣಿಗೆ ಬರುತ್ತಿದೆ. ಅಂತಹ ಅವಕಾಶವಾದಿ ರಾಜಕೀಯದ ಫಲವೇ ಇಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗಿದೆ ಎಂದ ರಾಯರೆಡ್ಡಿ ಬರುವ ದಿನಗಳಲ್ಲಿ ಅವಕಾಶ ವಾದಕ್ಕೆ ಜನ ಹೇಗೆ ಸ್ಪಂದಿಸುವರೋ ಕಾದು ನೋಡಬೇಕೆಂದರು. ಜನತೆ ಅವಕಾಶವಾದಕ್ಕೆ ಮನ್ನಣೆ ನೀಡೋದಿಲ್ಲವೆಂದೂ ಅಭಿಪ್ರಾಯಪಟ್ಟರು.
ಕುತೂಹಲ ಕೆರಳಿಸಿದ ರಾಯರಡ್ಡಿ ಔತಣಕೂಟ: ರಾಜ್ಯ ರಾಜಕೀಯ ಭಾರೀ ಸದ್ದು..!
ಸರ್ಕಾರ ನೂರು ದಿನಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ. ಮಂತ್ರಿಯಾದವರು ಸ್ಪಂದಿಸುತ್ತಿದ್ದಾರೆ ಎಂದ ರಾಯರೆಡ್ಡಿ ಜನರಿಗೆ ಅನುಕೂಲವಾಗುತಂಹ ಆಡಳಿತ ಕೊಡಬೇಕು ಎಂಬುದೇ ತಮ್ಮ ಅಭಿಮತವಾಗಿತ್ತು. ಅದಕ್ಕೇ ತಾವು ಹಿಂದೆ ಸಿಎಂ ಗಮನ ಸೆಳೆದಾಗಿ ಹೇಳಿದರಲ್ಲದೆ ಇದೀಗ ಕೆಕೆಆರ್‌ಡಿಬಿಯಲ್ಲಿ ಹಣವಿದೆ. ಶಾಸಕರೆಲ್ಲರೂ ತಮ್ಮ ಕ್ಷೇತ್ರಗಳ ಕ್ರಿಯಾ ಯೋಜನೆ ಬೇಗ ಸಲ್ಲಿಸುವ ಮೂಲಕ ಹೆಚ್ಚಿನ ಅನುದಾನ ಅಭಿವೃದ್ಧಿಗೆ ಬಳಕೆಯಾಗುವಂತೆ ಸಹಕರಿಸಬೇಕಿದೆ ಎಂದರು.