
ಬೆಂಗಳೂರು (ಫೆ.17): ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಯುದ್ಧ ಶಸ್ತ್ರಾಸ್ತ್ರಗಳ ನಡುವೆ ಭಾರತ್ ಅರ್ಥ್ ಮೂವರ್ಸ್ ಕಂಪನಿಯ ಮಾವನ ರಹಿತ ಮೆಟ್ರೋ ರೈಲಿನ ಹವಾ ಮುಂಬೈನಲ್ಲಿ ಓಡುವ ಈ ಚಾಲಕ ರಹಿತ ಮೆಟ್ರೋ ರೈಲು ಮತ್ತು ಬೋಗಿ ಸಿದ್ಧವಾಗುತ್ತಿರುವುದು ಬೆಂಗಳೂರಿನಲ್ಲಿ ಎಂಬುದೇ ವಿಶೇಷ. ಬೆಂಗಳೂರಿನಲ್ಲಿರುವ ಬೆಮೆಲ್ ಉತ್ಪಾದನಾ ಘಟಕದಲ್ಲಿ ಚಾಲಕ ರಹಿತ ಮೆಟ್ರೋ ತಯಾರಿ ಮಾಡಲಾಗುತ್ತಿದೆ. ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚಾರ ನಡೆಸಲಾಗಿದೆ. ಸಂಚಾರವನ್ನು ಆಪರೇಷನ್ ಕಂಟ್ರೋಲ್ ಸೆಂಟರ್‌ನಲ್ಲಿ ನಿಗಾ ವಹಿಸಲಾಗಿದೆ. ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗುತ್ತೆ. ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಬಹುದು. ಈ ಯೋಜನೆ ಮೂಲಕ ರೈಲಿನಲ್ಲಿ ಚಾಲಕ ಕುಳಿತು ಕೊಳ್ಳುವ ಸ್ಥಳ ಉಳಿತಾಯವಾಗಲಿದೆ. ಚಾಲಕನ ಜಾಗವನ್ನು ಜನರ ಪ್ರಯಾಣಕ್ಕೆ ಬಳಕೆ ಮಾಡಬಹುದು.
ಚಾಲಕ ರಹಿತ ಮೆಟ್ರೋದ ಪ್ರತಿ ಬೋಗಿಯಲ್ಲಿ 380 ಮಂದಿ ಪ್ರಯಾಣ ಮಾಡಬಹುದಾಗಿದೆ. ಚಾಲಕ ಇಲ್ಲದ ಮೆಟ್ರೋ ರೈಲು ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್ ಸಹಾಯದಿಂದ ರೈಲು ಸಂಚರಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಚಾಲಕ ರಹಿತ ಮೆಟ್ರೋ ಸಂಚಾರ ಬಹುತೇಕ ಖಚಿತವಾಗಿದೆ.
ಎರಡನೇ ಹಂತದ ಮೆಟ್ರೋದ ಹಳದಿ ಮತ್ತು ಗುಲಾಬಿ ಬಣ್ಣದ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಟ್ರೈನ್ ಓಡಾಟ ನಡೆಸಲಿದೆ. ನಮ್ಮ ಮೆಟ್ರೋ ಒಟ್ಟು 318 ಚಾಲಕ ರಹಿತ ಮೆಟ್ರೋ ಬೋಗಿ ಪೂರೈಕೆಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಿದೆ. ಬೆಮೆಲ್ ಸೇರಿದಂತೆ ಅಂತಾರಾಷ್ಟ್ರೀಯ ಕಂಪನಿಗಳು ಇದರಲ್ಲಿ ಭಾಗಹಿಸುವ ನಿರೀಕ್ಷೆ ಇದೆ.
ದುರಂತ ನಡೆದ್ರೂ ಎಚ್ಚೆತ್ತುಕೊಳ್ಳದ ಮೆಟ್ರೋ ಅಧಿಕಾರಿಗಳು: ಪಿಲ್ಲರ್ ಗುಣಮಟ್ಟದಲ್ಲಿ ಅನುಮಾನ
ಟ್ರೈನರ್ ವಿಮಾನಕ್ಕೆ ಮತ್ತೆ ಹನುಮಾನ್ ಚಿತ್ರ ಅಂಟಿಸಿದ HAL:
ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ ವಿಮಾನಕ್ಕೆ ಮತ್ತೆ ಹನುಮಾನ್ ಚಿತ್ರ ಹಾಕಲಾಗಿದೆ. ಈ ಹಿಂದೆ ಟ್ವಿಟರ್ ನಲ್ಲಿ ಈ ಬಗ್ಗೆ ಬಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಫ್ಲೈಟ್ ಗೆ ಅಂಟಿಸಿದ್ದ ಹನುಮಾನ್ ಚಿತ್ರವನ್ನು ಹೆಚ್ಎಎಲ್ ತೆರವುಗೊಳಿಸಿತ್ತು. ಇದೀಗ ಮತ್ತೆ ಹನುಮಾನ್ ಚಿತ್ರವನ್ನ ಹೆಚ್ಎಎಲ್ ಹಾಕಿದೆ. ಈ ಹಿಂದೆ ಯುದ್ದ ವಿಮಾನದಲ್ಲಿ ಹಿಂದೂ ದೇವರನ್ನ ಹಾಕಿದ್ದಾರೆ ಎಂದು ಟ್ರೋಲ್ ಆಗಿತ್ತು. ಈ ಹಿನ್ನಲೆ ವಿಮಾನದ ಮೇಲೆ ಹಾಕಿದ್ದ ಹನುಮಾನ್ ಚಿತ್ರ ತೆರವು ಮಾಡಲಾಗಿತ್ತು. ಇದೀಗ ಮತ್ತೆ HAL ಹನುಮಾನ್ ಚಿತ್ರ ಅಂಟಿಸಿದೆ.
Aero India 2023 ಈ ಬಾರಿಯ ಏರ್ ಶೋನಲ್ಲಿತ್ತು ಹಲವು ವಿಶೇಷತೆ, ಸಾಹಸ ಪ್ರದರ್ಶನದ ನಡುವೆ ವಹಿವಾಟು ದಾಖಲೆ!
5 ದಿನಗಳ ಏರ್ ಶೋ ಗೆ ತೆರೆ: 5 ದಿನಗಳ ಬೆಂಗಳೂರು ಏರ್ ಶೋ ಗೆ ತೆರೆ ಬಿದ್ದಿದೆ. ಕಳೆದ 4 ದಿನಗಳಿಂದ ಕೂಡ ಏರ್ ಶೋ ಗೆ ಭರ್ಜರಿ ರೆಸ್ಪಾನ್ಸ್ ಬಂದಿತ್ತು. ಗುರುವಾರ ಒಂದೇ ದಿನ 2 ಲಕ್ಷ ಜನ ಏರ್ ಶೋ ಆಗಮಿಸಿದ್ದರು. ಇಂದು ಕೊನೆಯ ದಿನವಾದ ಕಾರಣ ಸುಮಾರು 2 ವರೆ ಲಕ್ಷ ಜನ ಏರ್ ಶೋ ಗೆ ಸಾಕ್ಷಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ