ಗಿಫ್ಟ್‌, ಕ್ಯಾಶ್‌ಬ್ಯಾಕ್‌ ವೋಚರ್‌ಗೆ ಜಿಎಸ್‌ಟಿ ಇಲ್ಲ: ಹೈಕೋರ್ಟ್‌

Published : Feb 17, 2023, 11:58 AM IST
ಗಿಫ್ಟ್‌, ಕ್ಯಾಶ್‌ಬ್ಯಾಕ್‌ ವೋಚರ್‌ಗೆ ಜಿಎಸ್‌ಟಿ ಇಲ್ಲ: ಹೈಕೋರ್ಟ್‌

ಸಾರಾಂಶ

ಗಿಫ್ಟ್‌, ಕ್ಯಾಶ್‌ಬ್ಯಾಕ್‌ ಮತ್ತು ಇ-ವೋಚರ್‌ಗಳು ಸರಕು ಅಥವಾ ಸೇವೆ ಪೂರೈಕೆಯನ್ನು ಪರಿಗಣಿಸುವ ಸಾಧನವಷ್ಟೇ ಆಗಿರುತ್ತವೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಸಿಜಿಎಸ್‌ಟಿ) ಅಡಿ ವೋಚರ್‌ಗಳು ಹಣದ ವ್ಯಾಖ್ಯಾನದಡಿ ಬರಲಿದ್ದು, ಅವುಗಳನ್ನು ಸರಕು ಮತ್ತು ಸೇವೆಯ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. 

ಬೆಂಗಳೂರು(ಫೆ.17):  ಗಿಫ್ಟ್‌ ಮತ್ತು ಕ್ಯಾಶ್‌ಬ್ಯಾಕ್‌ ವೋಚರ್‌ಗಳು ಸರಕು ಮತ್ತು ಸೇವೆಗಳ ವರ್ಗದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ, ವೋಚರ್‌ಗಳ ವಿತರಣೆ ಹಾಗೂ ಪೂರೈಕೆಗೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿಎಸ್‌ಟಿ) ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ವೋಚರ್‌ಗಳಿಗೂ ಜಿಎಸ್‌ಟಿ ಅನ್ವಯವಾಗಲಿದೆ ಎಂದು ಕರ್ನಾಟಕ ಪೂರ್ವಭಾವಿ ನಿರ್ಣಯ ಪ್ರಾಧಿಕಾರ (ಅಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್‌-ಎಎಆರ್‌) ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಪ್ರೀಮಿಯರ್‌ ಸೇಲ್ಸ್‌ ಪ್ರಮೋಷನ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಗಿಫ್ಟ್‌, ಕ್ಯಾಶ್‌ಬ್ಯಾಕ್‌ ಮತ್ತು ಇ-ವೋಚರ್‌ಗಳು ಸರಕು ಅಥವಾ ಸೇವೆ ಪೂರೈಕೆಯನ್ನು ಪರಿಗಣಿಸುವ ಸಾಧನವಷ್ಟೇ ಆಗಿರುತ್ತವೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಸಿಜಿಎಸ್‌ಟಿ) ಅಡಿ ವೋಚರ್‌ಗಳು ಹಣದ ವ್ಯಾಖ್ಯಾನದಡಿ ಬರಲಿದ್ದು, ಅವುಗಳನ್ನು ಸರಕು ಮತ್ತು ಸೇವೆಯ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ವೋಚರ್‌ಗಳ ವಿತರಣೆ ಮತ್ತು ಪೂರೈಕೆಯು ಪೂರ್ವ ಪಾವತಿಗೆ ಸಮನಾಗಿರುತ್ತದೆ. ಅದು ಸರಕು ಮತ್ತು ಸೇವೆಯ ಪೂರೈಕೆಯಾಗಿರುವುದಿಲ್ಲ. ಆದ್ದರಿಂದ ಅವುಗಳು ಜಿಎಸ್‌ಟಿ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಶಾಲೆಯಿಂದ ಹೊರಗುಳಿದ 21400 ಮಕ್ಕಳ ಪತ್ತೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಪ್ರಕರಣದ ವಿವರ:

ಅರ್ಜಿದಾರ ಸಂಸ್ಥೆಯು ಗಿಫ್ಟ್‌, ಕ್ಯಾಶ್‌ಬ್ಯಾಕ್‌ ಮತ್ತು ಇ-ವೋಚರ್‌ಗಳನ್ನು ವಿತರಕರಿಂದ ಪಡೆದು ತಮ್ಮ ಗ್ರಾಹಕರಿಗೆ ಪೂರೈಸುತ್ತದೆ. ಆ ಗ್ರಾಹಕ ಸಂಸ್ಥೆಗಳು ಅವುಗಳ ಉದ್ಯೋಗಿಗಳಿಗೆ ಉತ್ತೇಜನ ಭಾಗವಾಗಿ ನೀಡುತ್ತದೆ. ಆದರೆ, ಈ ರೀತಿಯ ವೋಚರ್‌ಗಳು ಸರಕು ಮತ್ತು ಸೇವೆ ವ್ಯಾಪ್ತಿಗೆ ಬರಲಿದ್ದು, ಜಿಎಸ್‌ಟಿ ಪಾವತಿಸಬೇಕು ಎಂದು ಎಎಆರ್‌ ಆದೇಶಿಸಿತ್ತು. ಈ ಆದೇಶವನ್ನು ಅರ್ಜಿದಾರ ಸಂಸ್ಥೆ ಕರ್ನಾಟಕ ಪೂರ್ವಭಾವಿ ನಿರ್ಣಯ ಮೇಲ್ಮನವಿ ಪ್ರಾಧಿಕಾರದಲ್ಲಿ (ಎಎಎಆರ್‌) ಪ್ರಶ್ನಿಸಿತ್ತು. ಎಎಆರ್‌ ಅದೇಶವನ್ನು ಮೇಲ್ಮನವಿ ಪ್ರಾಧಿಕಾರ ಎತ್ತಿಹಿಡಿದಿತ್ತು. ಇದರಿಂದ ಅರ್ಜಿದಾರ ಸಂಸ್ಥೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

ವೋಚರ್‌ಗಳನ್ನು ‘ಪಾವತಿ ಸಾಧನ’ವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಪರಿಗಣಿಸಿದೆ. ಹಾಗಾಗಿ, ವೋಚರ್‌ಗಳ ವಿತರಣೆ ಮತ್ತು ಪೂರೈಕೆಗೆ ಜಿಎಸ್‌ಟಿ ವಿಧಿಸಲಾಗದು ಎಂದು ಅರ್ಜಿದಾರ ಸಂಸ್ಥೆ ವಾದಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!