ಡಿನೋಟಿಫಿಕೇಶನ್‌ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದ ಎಚ್‌ಡಿಕೆಗೆ ಕೋರ್ಟ್‌ ಸಮನ್ಸ್‌

By Kannadaprabha NewsFirst Published Feb 17, 2023, 10:26 AM IST
Highlights

ಹಲವು ಬಾರಿ ಸಮನ್ಸ್‌ ನೀಡಿದರೂ ಹಾಜರಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಮುಂದಿನ ವಿಚಾರಣೆ ಹಾಜರಾಗಬೇಕು ಎಂದು ತಿಳಿಸಿದ ನ್ಯಾಯಾಲಯ. 

ಬೆಂಗಳೂರು(ಫೆ.17):  ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಪ್ಪದೇ ಮಾ.21ರಂದು ಹಾಜರಾಗಬೇಕು ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಸೂಚನೆ ನೀಡಿದೆ.

ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗಲು ವಿನಾಯಿತಿ ಕೋರಿದ್ದರು. ಇದಕ್ಕೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿ ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿ ಮಾ.21ಕ್ಕೆ ವಿಚಾರಣೆ ಮುಂದೂಡಿದೆ.

Latest Videos

ಹಳ್ಳಿಗಳಿಗೆ ಹೋದರೆ ಡಬಲ್‌ ಎಂಜಿನ್‌ ವೈಫಲ್ಯ ತಿಳಿಯುತ್ತೆ: ಎಚ್‌ಡಿಕೆ

ಚಾಮರಾಜನಗರದ ಎಂ.ಎಸ್‌.ಮಹಾದೇವಸ್ವಾಮಿ ಅವರು ದೂರು ದಾಖಲಿಸಿದ್ದರು. ಈ ಮೊದಲು ಲೋಕಾಯುಕ್ತ ಪೊಲೀಸರು ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು. ಆದರೆ, ಜನಪ್ರತಿನಿಧಿಗಳ ನ್ಯಾಯಾಲಯವು ಅದನ್ನು ತಿರಸ್ಕರಿಸಿ ವಿಚಾರಣೆ ಹಾಜರಾಗಬೇಕು ಎಂದು ತಿಳಿಸಿತ್ತು. ಹಲವು ಬಾರಿ ಸಮನ್ಸ್‌ ನೀಡಿದರೂ ಹಾಜರಾಗದಿರುವುದಕ್ಕೆ ನ್ಯಾಯಾಲಯವು ಬೇಸರ ವ್ಯಕ್ತಪಡಿಸಿ ಮುಂದಿನ ವಿಚಾರಣೆ ಹಾಜರಾಗಬೇಕು ಎಂದು ತಿಳಿಸಿದೆ.

click me!