
ಮೈಸೂರು (ಡಿ.27): ಸಂಸತ್ ಘಟನೆ ನಂತರ ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಹುಣಸೂರಿನಲ್ಲಿ ನಡೆದ ಹನುಮ ಜಯಂತಿಯಲ್ಲಿ ಭಾಗವಹಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನವರೆಗೂ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದಾರೆ. ನನ್ನ ಭಯೋತ್ಪಾದಕ ಅಂತ ಬಿಂಬಿಸುವ ಪ್ರಯತ್ನ ಕಾಂಗ್ರೆಸಿಗರು ಮಾಡಿದರು. ಮುಸ್ಲಿಮರೆಲ್ಲಾ ಭಯೋತ್ಪಾದಕರು ಅನ್ನೋ ರೀತಿ ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು.
ಸಂಸತ್ ವಿಚಾರದಲ್ಲಿ ನಾನು ಸ್ಪಷ್ಟನೆ ಕೊಟ್ಟ ಬೆನ್ನಲ್ಲೆ ಪ್ರತಾಪ್ ಸಿಂಹ ಸಹೋದರ ಮರಗಳ್ಳ ಅಂತಾ ಕಾಂಗ್ರೆಸ್ ನವರು ಪೋಸ್ಟ್ ಮಾಡಿದ್ದರು ಎಂದು ಟೀಕಿಸಿದರು. ಮರ ಕಡಿತ ಪ್ರಕರಣದ ಬಗ್ಗೆ ಡಿ.16 ರಂದು ಎಫ್ ಐಆರ್ ಆಗಿದೆ. ಅದನ್ನು ಮೊನ್ಮೆ ನನ್ನ ತಮ್ಮನ ಹೆಸರಿನಲ್ಲಿ ತಿರುಚಿದ್ದು ಯಾಕೆ? ಪ್ರತಾಪ್ ಸಿಂಹನನ್ನು ಈ ಕ್ಷೇತ್ರದಲ್ಲಿ ಸೋಲಿಸಲು ಆಗಲ್ಲ ಅಂತಾ ಸಿದ್ದರಾಮಯ್ಯ ಅವರಿಗೆ ಗೊತ್ತು. ನನ್ನ ತಮ್ಮನ ಹೆಸರು ಎಫ್ ಐಅರ್ ನಲ್ಲಿ ಇಲ್ಲ. ಆದರೂ ಅವನ ಹೆಸರು ಯಾಕೆ ತರುತ್ತಿದ್ದಾರೆ. ನನ್ನ ತಮ್ಮಂದಿರು, ತಂಗಿ ಯಾರು ಅಂತಾನೂ ಮೈಸೂರು ಜನ ನೋಡಿಲ್ಲ.
ಯಾರು ಬುರುಡೆ ಬಿಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತು: ಸಿದ್ದುಗೆ ಸಿಂಹ ತಿರುಗೇಟು!
ಚುನಾವಣೆ ವೇಳೆ ನನ್ನ ತಮ್ಮಂದಿರು ಒಂದು ತಿಂಗಳು ಬಂದು ಹೋಗುತ್ತಾರೆ ಅಷ್ಟೇ. ಮೈಸೂರು ಕಡೆ ಅವರು ಮತ್ತೆ ಯಾವತ್ತೂ ತಲೆ ಹಾಕಲ್ಲ ಎಂದು ಅವರು ಹೇಳಿದರು. ಯಾವ ಸಂಸದರು, ಶಾಸಕರ ಸಹೋದದರರು ಕೃಷಿ ಮಾಡಿ ಕೊಂಡು ಜೀವನ ಮಾಡುತ್ತಿದ್ದಾರೆ ಹೇಳಿ? ನನ್ನ ಸಹೋದರರು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಮಿನಿಟ್, ಕಾಂಟ್ರಾಕ್ಟ್ , ವರ್ಗಾವಣೆ ಯಾವುದರಲ್ಲೂ ನನ್ನ ಸಹೋದರರು ಇಲ್ಲ. ಪ್ರತಾಪ್ ಸಿಂಹ ಅವಹೇಳನ ಮಾಡಬೇಕು ಅಂತಾ ಹೀಗೆ ಮಾಡುತ್ತಿದ್ದಾರೆ. ನಿಮ್ಮದೆ ಪೊಲೀಸ್ ಇಲಾಖೆ, ನಿಮ್ಮದೆ ಸರ್ಕಾರ ಇದೆ ತನಿಖೆ ಮಾಡಿ ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್ ಗೆ ನನ್ನ ಮೇಲೆ ಯಾಕೆ ದ್ವೇಷ ನಿಮಗೆ, ಬಡವರ ಮಕ್ಕಳು ರಾಜಕಾರಣ ಮಾಡಬಾರದಾ? 9 ವರ್ಷದಲ್ಲಿ ನಾನು ಏನ್ ಕೆಲಸ ಮಾಡಿದ್ದೇನೆ ಸಿದ್ದರಾಮಯ್ಯ ಅವರು 40 ವರ್ಷದಲ್ಲಿ ಏನ್ ಮಾಡಿದ್ದಾರೆ ಹೇಳಲಿ. ನೀನು ಗೌಡ, ಕುರುಬ, ನೀನು ಲಿಂಗಾಯತ ಅಂತಾ ನಾನು ಅವರ ರೀತಿ ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾತ್ರ ನಾನು ಮಾಡುವುದು. ನಿರಂತರವಾಗಿ ನನ್ನ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತ ಕೂಡಲೆ ಸಿದ್ದರಾಮಯ್ಯ ಕುರ್ಚಿ ಅಲ್ಲುಗಾಡುತ್ತದೆ.
ಪ್ರತಾಪ ಸಿಂಹ ಗುಹೆ ಸೇರಿದ್ರಾ ಅಬ್ಬರಿಸುತ್ತಿದ್ದ ಸಿ.ಟಿ.ರವಿ ಎಲ್ಲಿ: ಸಚಿವ ತಂಗಡಗಿ ಪ್ರಶ್ನೆ
ಹೀಗಾಗಿ ನನ್ನ ಮೇಲೆ ಸತತ ಅಕ್ರಮಣ ಸಾಗಿದೆ. ಸಿದ್ದರಾಮಯ್ಯ ಅವರೆ ನಿಮಗೆ ನಿಜವಾಗಲೂ ತಾಕತ್, ಧಮ್ ಇದ್ದರೆ ಅಭಿವೃದ್ಧಿ ಇಟ್ಟು ಕೊಂಡು ರಾಜಕಾರಣ ಮಾಡಿ. ಈ ತರಹ ದ್ವೇಷದ ರಾಜಕಾರಣ ಮಾಡಬೇಡಿ. ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 28 ಜನ ಸಂಸದರು ಇದ್ದಾರೆ. ಆದರೆ ಪ್ರತಾಪ್ ಸಿಂಹನ ಮಾತ್ರ ಟಾರ್ಗೆಟ್ ಮಾಡುತ್ತಾರೆ ಏಕೆ? ಎಂದು ಅವರು ಪ್ರಶ್ನಿಸಿದರು. ನಾನು ಸೋಮಾರಿ ಸಿದ್ದನ ರೀತಿ ಸುಮ್ಮನೆ ಕುಳಿತು ಕೊಂಡು ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇನೆ. ಹೀಗಾಗಿ ನಾನೇ ಟಾರ್ಗೆಟ್ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ