ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.
ದಾವಣಗೆರೆ (ಡಿ.27): ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ 'ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ 40 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪವನ್ನು ಮಾಡಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಈ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬೆಳಗಾವಿ ಅಧಿವೇಶನದ ಸಮಯವನ್ನು ತಿಂದು ಹಾಕಿದರು. ರಾಜ್ಯದಲ್ಲಿ ಉಂಟಾಗಿರುವ ಬರದ ವಿಚಾರವನ್ನು ಚರ್ಚೆ ಮಾಡದೆ ಯಡಿಯೂರಪ್ಪ ವಿಜಯೇಂದ್ರ ವಿರುದ್ದ ಮಾತನಾಡಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಎಲ್ಲರ ಮೇಲೆಯೂ ಗೂಬೆ ಕೂರಿಸುತ್ತಿದ್ದಾರೆ ಎಮದು ಯತ್ನಾಳ್ ಅವರ ವಿರುದ್ಧ ಕಿಡಿಕಾರಿದರು.
undefined
ಪ್ರಯಾಣಿಕರಿಗೆ ಅಭಯ ಕೊಟ್ಟ ಕೆಎಸ್‌ಆರ್‌ಟಿಸಿ: ಅಪಘಾತ ಪರಿಹಾರ ಮೊತ್ತ 10 ಲಕ್ಷ ರೂ.ಗೆ ಹೆಚ್ಚಳ!
ಸ್ವತಃ ಯತ್ನಾಳ್ ಅವರು ತಮಗೆ ಕೋವಿಡ್ ಬಂದಾಗ 8 ಲಕ್ಷ ರೂ. ಖರ್ಚು ಆಗಿದೆ ಎಂದು ಹೇಳಿದ್ದಾರೆ. ನೀವು ಐಶಾರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಎಂದು ಹೋಗಿರಬಹುದು. ಆದರೆ, ಕೋವಿಡ್ ಚಿಕಿತ್ಸೆ ಪಡೆದಾಗ ನೀವೇನು ಯಡಿಯೂರಪ್ಪನವರಿಗೆ 8 ಲಕ್ಷ ರೂ. ನೀಡಿದ್ರಾ? ನಮಗೂ ಕೋವಿಡ್ ಬಂತು ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ನೀವು ಕೊಟ್ಟ ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟ್ ಮಾಡ್ತಾರೆ ಎಂದರೆ ಹೊಂದಾಣಿಕೆ ಇದರಲ್ಲೇ ಗೊತ್ತಾಗುತ್ತದೆ. ಭ್ರಷ್ಟಾಚಾರ ಮಾಡಿದ್ದಾರೆ ಎಂದು ದಾಖಲೆ ಕೊಡುತ್ತೇನೆ ಎಂದು ಹೇಳುತ್ತಾರೆ ಎಂದು ತಿಳಿಸಿದರು.
200 ಸಂಚಿಕೆ ಪೂರೈಸಿದ ಭೂಮಿಗೆ ಬಂದ ಭಗವಂತ: ಹೊರಗೆ ಹಾಕೊಳ್ಳೋ ರಾಜಾ ಚೆಡ್ಡಿ ಎಲ್ಲಿ ಸಿಗುತ್ತೆಂದು ಕೇಳಿದ ಅಭಿಮಾನಿ!
ಯತ್ನಾಳ್ ಅವರೇ ನೀವು ಸುಖಾಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ಬಹಿರಂಗ ಚರ್ಚೆ ಬನ್ನಿ. ದೀಪಾ ಆರುವಾಗ ಜೋರಾಗಿ ಉರಿಯುತ್ತದೆಯಂತೆ. ಹಾಗೇ ಅವರ ಅಂತ್ಯ ಕಾಲ ಬಂದಾಗ ಹೀಗೆ ಮಾತನಾಡುತ್ತಾರೆ. ಯತ್ನಾಳ್ ಅವರು ಈಗ ಆರುವ ದೀಪವಾಗಿದ್ದಾರೆ ಎಂದು ಹೇಳಿದರು. ಜೊತೆಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಧಾರ್ಮಿಕ ಕ್ಷೇತ್ರದ ಮೇಲೆ ಕೇಸರಿ ಧ್ವಜ ಹಾಕಬೇಡಿ ಎಂದು ಹೇಳಿದ್ದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ ಅವರು, ಅಲ್ಪಸಂಖ್ಯಾತರ ಮನೆಯಲ್ಲಿ ಸಂಬಂಧ ಬೆಳೆಸಿದ್ದಕ್ಕೆ ಇಡೀ ಸರ್ಕಾರವನ್ನು ಮುಸ್ಲಿಮರ ಮಾಡ್ತಿರಾ? ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದನ್ನು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.