ಬಿಬಿಎಂಪಿ ಕೆಲಸಕ್ಕೆ ಬಾಂಗ್ಲಾ ವಲಸಿಗರನ್ನು ನೇಮಿಸಬೇಡಿ: ಸಂಸದರ ಪತ್ರ

Published : Oct 30, 2019, 12:41 PM ISTUpdated : Oct 30, 2019, 01:04 PM IST
ಬಿಬಿಎಂಪಿ ಕೆಲಸಕ್ಕೆ ಬಾಂಗ್ಲಾ ವಲಸಿಗರನ್ನು ನೇಮಿಸಬೇಡಿ: ಸಂಸದರ ಪತ್ರ

ಸಾರಾಂಶ

ಬೆಂಗಳೂರು ಮಹಾನಗರ ಪಾಲಿಕೆಯ ಕೆಲವು ಗುತ್ತಿಗೆದಾರರು, ಅಕ್ರಮ ಬಾಂಗ್ಲಾ ವಲಸಿಗರನ್ನು ಪಾಲಿಕೆಯ ಕೆಲಸಗಳಲ್ಲಿ ನಿಯೋಜಿಸಿದ್ದಾರೆ ಎಂಬ ಮಾಧ್ಯಮಗಳಲ್ಲಿ ಪ್ರಕಟಿತ ವರದಿ ಆಘಾತಕಾರಿ ಸಂಗತಿಯಾಗಿದೆ. 

ಬೆಂಗಳೂರು (ಅ. 30): ಬಿಬಿಎಂಪಿ ಗುತ್ತಿಗೆ ಕಾರ್ಯಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ನಿಯೋಜಿಸಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ.ಸಿ. ಮೋಹನ್ ಮನವಿ ಮಾಡಿದ್ದಾರೆ.

"

ಬೆಂಗಳೂರು ಮಹಾನಗರ ಪಾಲಿಕೆಯ ಕೆಲವು ಗುತ್ತಿಗೆದಾರರು, ಅಕ್ರಮ ಬಾಂಗ್ಲಾ ವಲಸಿಗರನ್ನು ಪಾಲಿಕೆಯ ಕೆಲಸಗಳಲ್ಲಿ ನಿಯೋಜಿಸಿದ್ದಾರೆ ಎಂಬ ಮಾಧ್ಯಮಗಳಲ್ಲಿ ಪ್ರಕಟಿತ ವರದಿ ಆಘಾತಕಾರಿ ಸಂಗತಿಯಾಗಿದೆ. ಅಲ್ಲದೆ ಅಕ್ರಮ ವಲಸಿಗರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್‌ನಂತಹ ಮಹತ್ವದ ಸರ್ಕಾರಿ ದಾಖಲೆಗಳನ್ನು ಹೊಂದಿರು ವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಸಂಸದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಉಗ್ರರು ಸಿಕ್ಕ ರಾಮನಗರದಲ್ಲೀಗ ಬಾಂಗ್ಲಾತಂಕ!

ಇಂತಹ ಅಕ್ರಮ ವಲಸಿಗರನ್ನು ಬಾಂಗ್ಲಾದೇಶದಿಂದ ಬೆಂಗಳೂರಿಗೆ ಕರೆತಂದು ಪಾಲಿಕೆಯ ಗುತ್ತಿಗೆ ಕೆಲಸಗಳಲ್ಲಿ ನಿಯೋಜಿಸಲು ಏಜೆಂಟರುಗಳು ಕೂಡ ಸಕ್ರಿಯರಾಗಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈಗಾಗಲೇ ಕಳೆದ 4-5 ವರ್ಷಗಳಲ್ಲಿ ಬೆಂಗಳೂರಿನಲ್ಲಿ 22 ಕ್ಕೂ ಹೆಚ್ಚು ಉಗ್ರ ಅಡಗುತಾಣಗಳು ಸಕ್ರಿಯವಾಗಿವೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಈ ಉಗ್ರರ ಅಡಗುತಾಣಗಳಲ್ಲಿ ಜಮಾತ್ -ಉಲ್-ಮುಜಾಹಿದ್ದೀನ್ ಬಾಂಗ್ಲಾ (ಜೆಎಂಬಿ) ಸಂಘಟನೆಗೆ ಸೇರಿದ ಭಯೋತ್ಪಾದಕರು ಅಡಗಿದ್ದಾರೆ ಎಂದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು ಇವರ ಉದ್ದೇಶವಾಗಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕ ಉಗ್ರರಿಗೆ ಸುರಕ್ಷಿತ ಪ್ರದೇಶ ಎನ್ನುವ ಕುಖ್ಯಾತಿಗೆ ಒಳಗಾಗಿದೆ. ಅಲ್ಲದೆ, ಈ ಅಕ್ರಮ ನಿವಾಸಿಗಳು, ಕೊಲೆ, ಸುಲಿಗೆ, ದರೋಡೆ, ಡ್ರಗ್ಸ್ ಜಾಲದಂತಹ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಸಹ ಭಾಗಿಯಾಗಿದ್ದಾರೆ.

ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಸೇರಿದಂತೆ ಇನ್ನಿತರ ರಾಜ್ಯಗಳ ನಾಗರಿಕರು ಎಂದು ರಾಮನಗರಕ್ಕೆ ಬರುವ ವಲಸಿಗರು ಹೇಳಿಕೊಳ್ಳುತ್ತಾರೆ. ಆದರೆ ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳನ್ನು ಅವರು ಮಾತನಾಡುವ ಶೈಲಿಯ ಮೂಲಕ ಅವರ ಮೂಲ ಅರಿಯುವುದು ಕಷ್ಟವಾಗಿದೆ. ಕಟ್ಟಡ ಕಾರ್ಮಿಕರಾಗಿ, ಇಟ್ಟಿಗೆ ಕಾರ್ಖಾನೆ, ನೂಲು ಬಿಚ್ಚಣಿಕೆ ಕೇಂದ್ರಗಳು ಸೇರಿದಂತೆ ಕಡಿಮೆ ಕೂಲಿಗೆ ಕಾರ್ಮಿಕರನ್ನು ನಿರೀಕ್ಷಿಸುವ ಕ್ಷೇತ್ರಗಳಲ್ಲಿ ಸ್ಥಳೀಯ ಕಾರ್ಮಿಕರು ನಿಗದಿತ ಪ್ರಮಾಣದ ವೇತನ, ಕೂಲಿಯನ್ನು ಕೇಳುತ್ತಾರೆ.

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಸಾಕ್ಷ್ಯ ಕೊಟ್ಟರೂ ನಿರ್ಲಕ್ಷ್ಯ!

ಆದರೆ, ಅಕ್ರಮ ವಲಸಿಗರು ಅತ್ಯಂತ ಕಡಿಮೆ ಕೂಲಿಗೆ ಕೆಲಸಕ್ಕೆ ಬರುತ್ತಾರೆ. ಕೆಲವು ವಲಸಿಗರಿಗೆ ಕನಿಷ್ಠ ಕೂಲಿ ಮೊತ್ತದ ಯಾವ ಜ್ಞಾನವೂ ಇರುವುದಿಲ್ಲ. ಕಾರ್ಖಾನೆ ಮಾಲಿಕರು, ಮೇಸ್ತ್ರಿಗಳಿಗೆ ಹಣ ಉಳಿತಾಯಕ್ಕೆ ಕಮ್ಮಿ ಕೂಲಿ ನಿರೀಕ್ಷಿಸುವ ಕಾರ್ಮಿಕರೇ ಬೇಕು. ವಲಸಿಗರಿಗೆ ಕೆಲಸ ಮತ್ತು ಉಳಿದುಕೊಳ್ಳಲು ಇಲ್ಲಿ ಜಾಗ ಬೇಕು. ಈ ಎರಡು ಅವಕಾಶಗಳು ಹೇರಳವಾಗಿರುವ ಕಾರಣ ಅಕ್ರಮ ವಲಸಿಗರು ಇಲ್ಲಿ ಬಂದು ನೆಲೆಸುವುದು ಹೆಚ್ಚುತ್ತಿದೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ