ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಕಳೆದ ಮೂರು ದಿನಗಳಿಂದ ಸಿಡಿದ ಪಟಾಕಿಯಿಂದಾಗಿ 100ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಾಯವಾಗಿದ್ದು, ನಾಲ್ವರಿಗೆ ದೃಷ್ಟಿಬರುವ ಸಾಧ್ಯತೆಗಳು ಬಹುತೇಕ ಕಡಿಮೆ ಎನ್ನಲಾಗಿದೆ.
ಬೆಂಗಳೂರು(ಅ.30): ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಕಳೆದ ಮೂರು ದಿನಗಳಿಂದ ಸಿಡಿದ ಪಟಾಕಿಯಿಂದಾಗಿ 100ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಾಯವಾಗಿದ್ದು, ನಾಲ್ವರಿಗೆ ದೃಷ್ಟಿಬರುವ ಸಾಧ್ಯತೆಗಳು ಬಹುತೇಕ ಕಡಿಮೆ ಎನ್ನಲಾಗಿದೆ.
ಭಾನುವಾರ ಮತ್ತು ಸೋಮವಾರ 47 ಮಂದಿ ಗಾಯಗೊಂಡಿದ್ದರೆ, ಮಂಗಳವಾರ 99 ಮಂದಿಯ ಕಣ್ಣಿಗೆ ಪೆಟ್ಟಾಗಿದೆ. ಬಾಗಲೂರು ಬಳಿಯ ಜೈರಾಮ್ (9) ಮತ್ತು ಭುವನೇಶ್ವರಿ ನಗರದ ಮನೋಜ್ (8) ಎಂಬುವರು ಹೂಕುಂಡ ಹಚ್ಚಲು ಹೋಗಿ ಮುಖವನ್ನು ಸುಟ್ಟುಕೊಂಡಿದ್ದು, ವಿಕ್ಟೋರಿಯಾದ ಮಹಾಬೋಧಿ ಸುಟ್ಟಗಾಯಗಳ ಕೇಂದ್ರದಲ್ಲಿ ದಾಖಲಾಗಿದ್ದಾರೆ.
ನವ ಪತ್ರಕರ್ತರಿಗೆ ಉಚಿತ ಆನ್‌ಲೈನ್ ಕೋರ್ಸ್.
ನಗರದ ನಾನಾ ಕಣ್ಣಿನ ಆಸ್ಪತ್ರೆಗಳಲ್ಲಿ ಕೆಲವರು ಒಳರೋಗಿಗಳಾಗಿ, ಹಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳಲ್ಲಿ ಶೇ.90ರಷ್ಟುಮಕ್ಕಳೇ ಇದ್ದು, ಹಲವರು ತಮ್ಮದಲ್ಲದ ತಪ್ಪಿಗೆ ನೋವು ಅನುಭವಿಸುವಂತಾಗಿದೆ.
ಮೂಲತಃ ರಾಜಸ್ಥಾನ ಮೂಲದ ಚಿಕ್ಕಗೊಲ್ಲರಹಟ್ಟಿಯ ನಿವಾಸಿಯಾದ ಪವನ್(22) ಮಂಗಳವಾರ ಬೆಳಗ್ಗೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಆಟಂಬಾಂಬ್‌ನ್ನು ಕಬ್ಬಿಣದ ಖಾಲಿ ಡಬ್ಬವನ್ನು ಮುಚ್ಚಿ ಸಿಡಿಸಲು ಯತ್ನಿಸಿದ್ದಾನೆ. ಎರಡನೇ ಬಾರಿ ಬಾಂಬ್ ಸಿಡಿಸಲು ಪ್ರಯತ್ನಿಸಿ, ಬೆಂಕಿ ಹಚ್ಚಿರುವ ಸಂಬಂಧ ಪರಿಶೀಲಿಸಲು ಹತ್ತಿರಕ್ಕೆ ಹೋದಾಗ ಪಟಾಕಿ ಸಿಡಿದೆ. ಈ ವೇಳೆ ಕಬ್ಬಣದ ಡಬ್ಬದ ಚೂರು ಬಲಗಣ್ಣಿಗೆ ಬಿದಿದೆ. ಪರಿಣಾಮ ಕಣ್ಣಿನ ದೃಷ್ಟಿಕಳೆದುಕೊಂಡಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ಕಣ್ಣಿಗೆ ಹಾನಿದವರ ಸಂಖ್ಯೆ
ಮಿಂಟೋ ಕಣ್ಣಿನ ಆಸ್ಪತ್ರೆ 26
ನಾರಾಯಣ ನೇತ್ರಾಲಯ 31
ಶಂಕರ ಕಣ್ಣಿನ ಆಸ್ಪತ್ರೆ 16
ಶೇಖರ್ ಕಣ್ಣಿನ ಆಸ್ಪತ್ರೆ 07
ಮೋದಿ ಕಣ್ಣಿನ ಆಸ್ಪತ್ರೆ 04
ನೇತ್ರಧಾಮ 03
ವಿಕ್ಟೋರಿಯಾ 12
ಒಟ್ಟು 99