
ಬೆಂಗಳೂರು(ಅ.30): ಟೀ, ಕಾಫಿ ಕುಡಿದ ನಂತರ ಕಪ್ ಇಟ್ಟು ಬಿಡುತ್ತೇವೆ, ಮನೆಯಲ್ಲಾದರೆ ತೊಳೆಯುತ್ತೇವೆ, ಇನ್ನು ಪೇಪರ್ ಕಪ್ ಆದರೆ ಎಸೆಯುತ್ತೇವೆ.. ಇನ್ನುಮುಂದೆ ಹಾಗಲ್ಲ. ಟೀ, ಕಾಫಿ ಕುಡಿದು ಕಪ್‌ನ್ನು ತಿನ್ನಬಹುದು. ಅಚ್ಚರಿಯಾದ್ರೂ ಇದು ಸತ್ಯ. ತಿನ್ನಲು ಸಾರ್ಧಯವಿರುವ ಆರೋಗ್ಯದಾಯಕ ಕಪ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಟೀ, ಕಾಫಿ ಹಾಗೂ ಇನ್ನಿತರ ಪಾನೀಯ ಸೇವಿಸಿದ ಬಳಿಕ ಸೇವಿಸಬಹುದಾದ ಧಾನ್ಯಗಳಿಂದ ತಯಾರಿಸಿದ ‘ಈಟ್ ಕಪ್’ ಅನ್ನು ಜಿನೋಮ್‌ಲ್ಯಾಬ್ಸ್ ಬಯೋ ಪ್ರೈವೇಟ್ ಲಿಮಿಟೆಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ದೀಪಾವಳಿ: ಬೆಂಗಳೂರಲ್ಲಿ ಒಂದೇ ದಿನ 99 ಮಂದಿಗೆ ಕಣ್ಣಿಗೆ ಹಾನಿ.
ಈಟ್ ಕಪ್ ಅನ್ನು ನೈಸರ್ಗಿಕ ಧಾನ್ಯದ ಉತ್ಪನ್ನಗಳಿಂದ ತಯಾರಿಸಲಾಗಿದ್ದು, ತಿನ್ನಲು ಯೋಗ್ಯವಾಗಿದೆ. ಗರಿಗರಿಯಾಗಿ ಸ್ವಾದಿಷ್ಟರುಚಿ ನೀಡಲಿದೆ. ಕಪ್‌ನಲ್ಲಿ ನಾರಿನಂಶ ಹೆಚ್ಚಾಗಿದ್ದು ಒಳ್ಳೆಯ ಪೂರಕ ಆಹಾರವೂ ಆಗಿದೆ. ಅಲ್ಲದೇ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಹಾಗೂ ಪೇಪರ್ ಕಪ್‌ಗಳಿಗೆ ಅತ್ಯುತ್ತಮ ಪರ್ಯಾಯವಾಗಿದೆ. ಒಂದು ಕಪ್‌ಗೆ 25 ರುಪಾಯಿಗಳಾಗಿದ್ದು, http://eatcup.com/ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಸಂಸ್ಥೆಯ ಕಾರ್ಯಾಕಾರಿ ನಿರ್ದೇಶಕ ಸುರೇಶ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ