ಬದುಕಿನ ಸಂದೇಶವುಳ್ಳ ಚಲನಚಿತ್ರಗಳಿಂದ ಸಮಾಜಕ್ಕೆ ಉಪಯುಕ್ತ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Oct 16, 2023, 1:30 AM IST

ಬದುಕಿನ ಸಂದೇಶವುಳ್ಳ ಚಲನಚಿತ್ರಗಳು ಬಂದರೇ ಸಮಾಜ, ನಾಡಿಗೆ ಬಹಳ ಉಪಯುಕ್ತ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 


ಬಿ. ಶೇಖರ್ ಗೋಪಿನಾಥಂ

ಮೈಸೂರು (ಅ.16): ಬದುಕಿನ ಸಂದೇಶವುಳ್ಳ ಚಲನಚಿತ್ರಗಳು ಬಂದರೇ ಸಮಾಜ, ನಾಡಿಗೆ ಬಹಳ ಉಪಯುಕ್ತ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ಕಲಾಮಂದಿರದಲ್ಲಿ ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಚಿತ್ರರಂಗವು ವಿಶ್ವದರ್ಜೆಯ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದೆ. ಚಲನಚಿತ್ರಗಳು ಬಹಳ ಪ್ರಭಾವ ಇರುವ ಮಾಧ್ಯಮವಾಗಿವೆ. ಜೀವನದ ಮೌಲ್ಯಗಳನ್ನು ನಾಡಿಗೆ ತಿಳಿಸುವ ಕೆಲಸ ಮಾಡುತ್ತವೆ ಎಂದು ಹೇಳಿದರು. ಬಹಳ ಜನ ಓದಿಗಿಂತ ಚಲನಚಿತ್ರಗಳನ್ನು ನೋಡಿಯೇ ಹೆಚ್ಚು ಪ್ರಭಾವಿತರಾಗುತ್ತಾರೆ. ಹೀಗಾಗಿ, ಚಲನಚಿತ್ರಗಳು ನಾಡಿಗೆ ಅಗತ್ಯವಾಗಿವೆ. 

Latest Videos

undefined

ಇದೇ ವೇಳೆ ಸಿನಿಮಾಗಳು ಬದುಕಿನ ಮೌಲ್ಯ ಒಳಗೊಂಡಿದ್ದರೆ ಸಮಾಜಕ್ಕೆ, ನಾಡಿಗೆ ಹೆಚ್ಚು ಉಪಯುಕ್ತ. ನಮ್ಮಲ್ಲಿ ಬಂದು ಹೋಗಿರುವ ಅನೇಕ ಉತ್ತಮ ಚಲನಚಿತ್ರಗಳು ಬಹಳಷ್ಟು ದಿನ ಪ್ರದರ್ಶನ ಕಂಡಿವೆ ಎಂದು ಅವರು ತಿಳಿಸಿದರು. ದಸರಾ ಚಲನಚಿತ್ರೋತ್ಸವದಲ್ಲಿ ಕನ್ನಡ ಸೇರಿದಂತೆ ದೇಶ ವಿದೇಶಗಳ ಅನೇಕ ಪ್ರಶಸ್ತಿ ಪಡೆದ ಸದಭಿರುಚಿಯ ಚಲನಚಿತ್ರಗಳ ಪ್ರದರ್ಶನವಾಗುತ್ತಿದ್ದು, ಸಿನಿಮಾ ಪ್ರಿಯರು ಸದಾವಕಾಶ ಬಳಸಿಕೊಳ್ಳಬೇಕು ಎಂದ ಅವರು, ನಮ್ಮ ಸರ್ಕಾರವು ಚಿತ್ರರಂಗಕ್ಕೆ ಹಿಂದೆಯೂ ಸಹಾಯ, ಸಹಕಾರ ನೀಡಿದ್ದು, ಮುಂದೆಯೂ ಸಹಾಯ, ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಕಲಬುರಗಿ- ಮಂಗಳೂರು ವಿಮಾನ ಸಂಚಾರ ಬಗ್ಗೆ ಚರ್ಚಿಸುವೆ: ಶೋಭಾ ಕರಂದ್ಲಾಜೆ

ನರಸಿಂಹರಾಜು ಜನ್ಮ ಶತಮಾನೋತ್ಸವ: ಈ ವರ್ಷದ ದಸರಾ ಚಲನಚಿತ್ರೋತ್ಸವವನ್ನು ಜನ್ಮ ಶತಮಾನೋತ್ಸವ ಕಂಡಿರುವ ದಿವಂಗತ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಿಗೆ ಅರ್ಪಿಸಿರುವುದನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಚಲನಚಿತ್ರರಂಗ ಕಂಡ ಅತ್ಯಂತ ಅಪರೂಪದ ಹಾಸ್ಯ ನಟ. ಅಂದಿನ ದಿನಗಳಲ್ಲಿ ನರಸಿಂಹರಾಜು ಅವರು ಇಲ್ಲದಿದ್ದರೆ ಅದು ಸಿನಿಮಾ ಎನಿಸಿಕೊಳ್ಳುತ್ತಿರಲಿಲ್ಲ ಎಂದು ಸ್ಮರಿಸಿದರು. ಅಪರೂಪರ ಹಾಸ್ಯನಟರಾದ ನರಸಿಂಹರಾಜು ಅವರಿಗೆ ಅವರೆ ಸಾಟಿ. ಸಾಧುಕೋಕಿಲ ಸಹ ಹಾಸ್ಯ ನಟ, ಹಾಡುಗಾರ, ಸಂಗೀತ ನಿರ್ದೇಶಕ, ಹೀರೋ ಆಗಿ ಸಹ ಚಿತ್ರ ಮಾಡಿದ್ದು, ಈಗ ನಮ್ಮ ಜೊತೆ ಇದ್ದಾರೆ ಎಂದರು. ಇದೇ ವೇಳೆ ನರಸಿಂಹರಾಜು ಅವರ ಪುತ್ರಿ ಹಾಗೂ ನಟಿ ಸುಧಾ ನರಸಿಂಹಮೂರ್ತಿ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪ, ಶಾಸಕರಾದ ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಡಿ. ರವಿಶಂಕರ್, ಎ.ಆರ್. ಕೃಷ್ಣಮೂರ್ತಿ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಸಂಗೀತ ನಿರ್ದೇಶಕ ಸಾಧುಕೋಕಿಲ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್. ಸುರೇಶ್, ನಟ ಡಾರ್ಲಿಂಗ್ ಕೃಷ್ಣ, ನಟಿಯರಾದ ಮಿಲನ ನಾಗರಾಜ್, ಮಾನ್ವಿತ ಕಾಮತ್, ವೈಭವಿ ಶಾಂಡಿಲ್ಯ, ಮಯೂರಿ ಮೊದಲಾದವರು ಇದ್ದರು. ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಎಂ.ಕೆ. ಸವಿತಾ ಸ್ವಾಗತಿಸಿದರು.

click me!