25 ಬೆರಳುಗಳಿರುವ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ!

Published : Jul 20, 2024, 06:06 AM ISTUpdated : Jul 20, 2024, 09:58 AM IST
25 ಬೆರಳುಗಳಿರುವ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ!

ಸಾರಾಂಶ

ಹುಟ್ಟಿದ ಪ್ರತಿಯೊಂದು ಮಗುವಿಗೂ 20 ಬೆರಳುಗಳಿರುವುದು ಸಾಮಾನ್ಯ. ಆದರೆ, 25 ಬೆರಳುಗಳಿರುವ ಗಂಡು ಮಗುವೊಂದು ಜನ್ಮತಾಳಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ರಬಕವಿ-ಬನಹಟ್ಟಿ (ಜು.20): ಹುಟ್ಟಿದ ಪ್ರತಿಯೊಂದು ಮಗುವಿಗೂ 20 ಬೆರಳುಗಳಿರುವುದು ಸಾಮಾನ್ಯ. ಆದರೆ, 25 ಬೆರಳುಗಳಿರುವ ಗಂಡು ಮಗುವೊಂದು ಜನ್ಮತಾಳಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ() ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ(Sunshine Multispeciality Hospital, Rabkavi)ಯಲ್ಲಿ ಶುಕ್ರವಾರ ಭಾರತಿ ಎಂಬುವವರು ಜನ್ಮ ನೀಡಿದ ನವಜಾತ ಶಿಶುವಿನ ಬಲಗೈಯಲ್ಲಿ 6, ಎಡಗೈಯಲ್ಲಿ 7 ಮತ್ತು ಎರಡೂ ಕಾಲುಗಳಲ್ಲಿ ತಲಾ 6 ಬೆರಳುಗಳಿವೆ. ಇದರಿಂದ ಕುಟುಂಬಸ್ಥರು ಸಂತೋಷಪಟ್ಟಿದ್ದು, ಮಗುವನ್ನು ಕುಂದರಗಿಯ ಭುವನೇಶ್ವರಿ ದೇವಿ(Kundaragi bhuvaneshwari) ಕೃಪೆಯೆಂದು ಹೇಳಿಕೊಂಡಿದ್ದಾರೆ. ಆದರೆ, ವೈದ್ಯರು ಅಪರೂಪದ ಕ್ರೋಮೋಸೋಮ್‌ನಿಂದ ೨೫ ಬೆರಳುಗಳು ಇವೆ ಎಂದು ಹೇಳಿದ್ದಾರೆ.

ಹಾಸ್ಟೆಲ್‌ನಲ್ಲಿ ಓದುತ್ತಲೇ ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ

ನನ್ನ ಪತ್ನಿ ಪ್ರತಿ ವಾರ ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಬೇಡಿಕೊಂಡಿದ್ದಳು. ಬೇಡಿಕೆಯ 4ನೇ ವಾರದಲ್ಲಿಯೇ ಗರ್ಭಿಣಿಯಾಗುವ ಅವಕಾಶ ದೊರೆಯಿತು. ಅಂಬಲಿ ಪ್ರಸಾದದ ಮಹಿಮೆಯೆಂದು ಮಗುವಿನ ತಂದೆ ಗುರಪ್ಪ ‘ಕನ್ನಡಪ್ರಭ’ಕ್ಕೆ ಮಾಹಿತಿ ಹಂಚಿಕೊಂಡರು.

ಮದ್ವೆಯಾದ ಎರಡನೇ ದಿನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ, ವರನ ಮನೆಯವರಿಗೆ ಶಾಕ್‌!

ಮಗು ಹೆರಿಗೆ ಮಾಡಿಸಿದ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ವೈದ್ಯರಾದ ಡಾ.ಪಾರ್ವತಿ ಹಿರೇಮಠ(Obstetrician and Gynecologist Dr. Parvati Hiremath) ಮಾತನಾಡಿ, ಅಪರೂಪದಲ್ಲಿ ಅಪರೂಪವಾಗಿ ಕ್ರೋಮೋಸೋಮ್‌ಗಳ ಅಸಮತೋಲನತೆಯಿಂದ ಇಂತಹ ಮಗುವಿನ ಜನನವಾಗುತ್ತದೆ. 25 ಬೆರಳುಗಳನ್ನು ಹೊಂದಿದ ಗಂಡು ಮಗುವಿನೊಂದಿಗೆ ತಾಯಿಯೂ ಕ್ಷೇಮವಾಗಿದ್ದಾಳೆಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ