ನಾನು ನಿಮ್ಮ ಮೇಲಿನ ದ್ವೇಷಕ್ಕಾಗಿ ಅಥವಾ ನಿಮ್ಮ ವಿರುದ್ಧ ಎಲೆಕ್ಷನ್ ನಿಂತಿದ್ದೆ ಅನ್ನೋದಕ್ಕಾಗ್ಲಿ ಹೆಳ್ತಾಯಿಲ್ಲ. ನಿಮ್ಮ ಮೇಲೆ ಗೌರವವಿದೆ ನೀವು ವಿಭಿನ್ನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ರಿ, ನೀವು ಅದೇ ತರ ಇರ್ಬೇಕು ಅನ್ನೋದನ್ನ ಬಯಸುತ್ತೇವೆ. ಆದ್ರೆ ನಾನು ಆ ತರ ಇರುವುದಿಲ್ಲ ನಾನು ಹತ್ತರಲ್ಲಿ ಹನ್ನೊಂದು ಆಗಿರ್ತೀನಿ ಅಂದ್ರೆ ನಾನೇನು ಮಾಡೋಕೆ ಆಗೊಲ್ಲ ಎಂದು ತಿಳಿಸಿದ ಕೇಂದ್ರ ಸಚಿವ ವಿ.ಸೋಮಣ್ಣ
ಚಾಮರಾಜನಗರ(ಜು.19): ಸಿದ್ದರಾಮಯ್ಯನವರು ವಿಚಲಿತರಾಗಿದ್ದಾರೆ. ಯಾಕೆ ಸಿದ್ದರಾಮಯ್ಯನವರು ಹೀಗೆ ಮಾತನಾಡ್ತಾರೆ ಅಂತ ಗೊತ್ತಾಗ್ತಯಿಲ್ಲ. ಅವರು ಏನಾದ್ರು ಮಾಡಿಕೊಳ್ಳಲಿ ಇವರನ್ನ ಯಾರಾದ್ರು ಹಿಡಿದುಕೊಂಡಿದ್ದಾರಾ?. ನೀವು ಮುಖ್ಯಮಂತ್ರಿ ನಿಮ್ಮದೇನು ಅಂತ ಹೇಳಲಿ ಅದರ ಬಗ್ಗೆ ತೀರ್ಮಾನ ಮಾಡಲಿ. ನೀವು ಕಳೆದ ಬಾರಿ 5 ವರ್ಷ ಮುಖ್ಯಮಂತ್ರಿ ಆಗಿದ್ದಾಗ ಈ ರೀತಿ ಆರೋಪ ಬಂದಿತ್ತಾ?. ಈ ಅಲಿಗೇಷನ್ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಲಿ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ತಿರುಗೇಟು ಕೊಟ್ಟಿದ್ದಾರೆ.
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿಯ 21 ಹಗರಣ ಬಯಲಿಗೆ ಎಳೆಯುತ್ತೆನೆಂದು ಸವಾಲ್ ಹಾಕಿದ ವಿಚಾರದ ಬಗ್ಗೆ ಇಂದು(ಶುಕ್ರವಾರ) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, ಅದೇನು ಹಳ್ಳಿಗಾದೆ ಆತರ ಆದ್ರೆ ಈಗ ಆ ಗಾದೆನ ನಾನು ಹೇಳೊಲ್ಲ. ನೀವು 14 ಸೈಟು ತೆಗೆದು ಕೊಂಡಿದ್ದೀರಲ್ಲಾ ಅದನ್ನ ವಾಪಸ್ಸು ಮಾಡಿ. ಒಬ್ಬ ನ್ಯಾಯಾಧೀಶರನ್ನ ತನಿಖೆಗೆ ನೇಮಕ ಮಾಡಿ ಆಗ ನೀವು ಇತಿಹಾಸದ ಪುಟ ಸೇರ್ಕೊತೀರ. ಸತ್ಯ ಯಾವತ್ತು ಸತ್ಯಾನೆ, ಸತ್ಯಾನ ಮರೆ ಮಾಚೋಕೆ ಆಗೊಲ್ಲ. ಸಿದ್ದರಾಮಯ್ಯನಂತವರಿಗೆ ಪಾಪ ಈಗ ಮುಜುಗರ ಆಗಿದೆ. ಅವರು ಈ ತರ ಅಲ್ಲಾ ಮಾಡಿದವರಲ್ಲಾ. ಎಲ್ಲೋ ಒಂದು ಕಡೆ ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತಾರಲ್ಲ ಹಾಗಾಗಿದೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
undefined
ಮುಡಾ ಹಗರಣದ ಬಳಿಕ ಸಿಎಂ ಸಿದ್ದರಾಮಯ್ಯ ಮೆತ್ತಗಾಗಿದ್ದಾರೆ: ಶಾಸಕ ಟಿಎಸ್ ಶ್ರೀವತ್ಸ
ನಾನು ನಿಮ್ಮ ಮೇಲಿನ ದ್ವೇಷಕ್ಕಾಗಿ ಅಥವಾ ನಿಮ್ಮ ವಿರುದ್ಧ ಎಲೆಕ್ಷನ್ ನಿಂತಿದ್ದೆ ಅನ್ನೋದಕ್ಕಾಗ್ಲಿ ಹೆಳ್ತಾಯಿಲ್ಲ. ನಿಮ್ಮ ಮೇಲೆ ಗೌರವವಿದೆ ನೀವು ವಿಭಿನ್ನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ರಿ, ನೀವು ಅದೇ ತರ ಇರ್ಬೇಕು ಅನ್ನೋದನ್ನ ಬಯಸುತ್ತೇವೆ. ಆದ್ರೆ ನಾನು ಆ ತರ ಇರುವುದಿಲ್ಲ ನಾನು ಹತ್ತರಲ್ಲಿ ಹನ್ನೊಂದು ಆಗಿರ್ತೀನಿ ಅಂದ್ರೆ ನಾನೇನು ಮಾಡೋಕೆ ಆಗೊಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿಯವರ ಎಷ್ಟು ಹಗರಣ ಇದೆಯೊ ಏನಿದಿಯೊ ಅದನ್ನೆಲ್ಲಾ ಬಯಲಿಗೆ ಎಳೆಯಲಿ ಅದರ ಜೊತೆ ನಿಮ್ಮದು ಆಚೆ ಬರಲಿ. ನಿಮ್ಮ ಹಗರಣ ಮುಚ್ಚಿಕೊಳ್ಳೊಕೆ ಇನ್ನೊಬ್ರದ್ದು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಬೇಡಿ. ನಿಮಗೆ ಯಾರು ಈ ಭಾಗ್ಯಗಳನ್ನ ಮಾಡಿ ಅಂತ ನಾವು ಏನಾದ್ರು ಹೇಳಿದ್ವಾ?. ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದು ಬೇರೆ ಏನೇನೊ ಮಾತನಾಡೋದು ಸರಿಯಲ್ಲ. ನಾನು ಸಿದ್ದರಾಮಯ್ಯ ಸಾಹೇಬ್ರನ್ನ ವಿನಂತಿ ಮಾಡಿಕೊಳ್ತೀನಿ ನೀವು ವಿಭಿನ್ನ ರಾಜಕಾರಣಿ ಹಾಗೆ ಇದ್ದು ಬಿಡಿ ಎಂದು ಹೇಳಿದ್ದಾರೆ.
ಕೇವಲ 10-15 ಸೈಟ್‌ಗೆ ಸಿದ್ದರಾಮಯ್ಯ ಈ ಮಟ್ಟಕ್ಕೆ ಯೋಜನೆ ಮಾಡ್ತಾರೆ ಅಂತ ಗೊತ್ತಿರಲಿಲ್ಲ: ಸೋಮಣ್ಣ
ಮಲೆ ಮಹದೇಶ್ವರ ಬೆಟ್ಟಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ
ಮಲೆ ಮಹದೇಶ್ವರ ಬೆಟ್ಟಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಇಂದು ಭೇಟಿ ನೀಡಿದ್ದಾರೆ. ಮನೆದೇವರು ಮಲೆ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ಮಹದೇಶ್ವರ ಸನ್ನಿಧಿಗೆ ಆಗಮಿಸಿದ್ದಾರೆ ಸೋಮಣ್ಣ.
ಈ ವೇಳೆ ಮಾತನಾಡಿದ ವಿ. ಸೋಮಣ್ಣ, ನನ್ನ ಮನೆದೇವರು ಮಹದೇಶ್ವರನ ಮೇಲೆ ನನಗೆ ನಂಬಿಕೆ ಇದೆ. ಚಾಮರಾಜನಗರ, ವರುಣಾದಲ್ಲಿ ಸೋತ ನಂತರ ಸೋಮಣ್ಣನ ಕಥೆ ಮುಗೀತು ಅಂತ ಹೇಳ್ತಿದ್ರು. ಒಳ್ಳೆತನಕ್ಕೆ ,ಒಳ್ಳೆ ನಡವಳಿಕೆಗೆ, ಕೆಲಸಗಾರನಿಗೆ ಭಗವಂತನ ಆಶೀರ್ವಾದ ಇರುವಾಗ ಯಾರಿಗೂ ಹೆದರಬೇಕಾದ ಅವಶ್ಯಕತೆ ಇಲ್ಲ. ಮಾದಪ್ಪ ನನ್ನ ಕೈಬಿಡಲಿಲ್ಲ, ನಮ್ಮ ನಾಯಕರು ಕೈ ಬಿಡಲಿಲ್ಲ. ಇದಕ್ಕೆ ಕಾರಣ ಮಾದಪ್ಪ ಹಾಗೂ ನಾನು ನಂಬಿರೋ ಅಜ್ಜ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.