
ಬೆಂಗಳೂರು (ಆ.17) : ರಾಜಧಾನಿ ಬೆಂಗಳೂರಿನಲ್ಲಿ ಮೂರು ದಿನ ನಡೆಯಲಿರುವ ‘ಜಿ-20 ಡಿಜಿಟಲ್ ಇನ್ನೋವೇಷನ್ ಅಲಯನ್ಸ್ ಸಮ್ಮಿಟ್(G20-Digital Innovation Alliance summit)ನ್ನು’ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಖಾತೆ ಸಚಿವರಾದ ರಾಜೀವ್ ಚಂದ್ರಶೇಖರ್(MoS Rajeev Chandrasekhar) ಅವರು ಗುರುವಾರ ಉದ್ಘಾಟಿಸಲಿದ್ದಾರೆ.
ಜಿ-20 ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಗುಂಪು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ ಹಾಗೂ ಸ್ಪರ್ಧೆಗೆ ಡಿಜಿಟಲ್ ಆವಿಷ್ಕಾರಗಳ ಕೊಡುಗೆಗಳ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ.
ಬಲಿಷ್ಠ ದೇಶ ಕಟ್ಟುವ ಪಣ; ಮೋದಿ ಕನಸು ನನಸಾಗಿಸೋಣ: ಆರ್‌ಸಿ
ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಲಿರುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಈ ವೇಳೆ ಜಿ-20 ಸದಸ್ಯ ದೇಶಗಳ ಪ್ರತಿನಿಧಿಗಳು, 29 ದೇಶಗಳಿಂದ 174 ನವ್ಯೋದ್ಯಮಗಳು ಭಾಗವಹಿಸಿವೆ. ಆ.18 ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಈ ವೇಳೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿರುವ 30 ನವ್ಯೋದ್ಯಮಗಳಿಗೆ ಪ್ರಶಸ್ತಿ ವಿತರಿಸಲಾಗುತ್ತದೆ.
ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್, ಡಿಜಿಟಲ್ ಎಕಾನಮಿ ಸೆಕ್ಯೂರಿಟಿ, ಡಿಜಿಟಲ್ ಸ್ಕಿಲ್ಲಿಂಗ್ ವಿಭಾಗಗಳನ್ನು ಕೇಂದ್ರವಾಗಿಟ್ಟುಕೊಂಡು ಸಮಾವೇಶ ನಡೆಯಲಿದೆ. ಆರು ವಿಭಾಗಗಳಾದ ಎಜು-ಟೆಕ್, ಹೆಲ್ತ್-ಟೆಕ್, ಅಗ್ರಿ-ಟೆಕ್, ಫಿನ್ -ಟೆಕ್, ಸೆಕ್ಯೂರ್‌್ಡ ವಿಭಾಗಗಳ ನವ್ಯೋದ್ಯಮಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿದುಬಂದಿದೆ.
ಉಡುಪಿ ವಿಡಿಯೋ ಘಟನೆ: ಸಿದ್ದರಾಮಯ್ಯ ಸರ್ಕಾರದಿಂದ ತುಷ್ಟೀಕರಣ, ರಾಜೀವ್ ಚಂದ್ರಶೇಖರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ