ಬೀಗರ ಊಟದಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಮಂದಿ ವಾಂತಿ ಭೇದಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣ ಕುಶಾಲನಗರ ಸಮೀಪದ ಕೊಪ್ಪದಲ್ಲಿ ಗುರುವಾರ ಸಂಜೆ ನಡೆದಿದೆ. ಮದು ಮಕ್ಕಳೂ ಆಹಾರ ಸೇವಿಸಿ ಅನಾರೋಗ್ಯಕೀಡಾಗಿದ್ದು, ಪೋಷಕರ ಸಹಿತ ಪಿರಿಯಾಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಶಾಲನಗರ (ಏ.26): ಬೀಗರ ಊಟದಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಮಂದಿ ವಾಂತಿ ಭೇದಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣ ಕುಶಾಲನಗರ ಸಮೀಪದ ಕೊಪ್ಪದಲ್ಲಿ ಗುರುವಾರ ಸಂಜೆ ನಡೆದಿದೆ. ಮದು ಮಕ್ಕಳೂ ಆಹಾರ ಸೇವಿಸಿ ಅನಾರೋಗ್ಯಕೀಡಾಗಿದ್ದು, ಪೋಷಕರ ಸಹಿತ ಪಿರಿಯಾಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪದ ಖಾಸಗಿ ರೆಸಾರ್ಟ್‌ನಲ್ಲಿ ಬೀಗರ ಊಟ ನಡೆದಿದ್ದು, ಸಮಾರಂಭದಲ್ಲಿ ಸಾವಿರಕ್ಕೂ ಅಧಿಕ ಅತಿಥಿಗಳು ಪಾಲ್ಗೊಂಡಿದ್ದರು. ಸಂಜೆ ಸುಮಾರು 5 ಗಂಟೆ ವೇಳೆಗೆ ಆಹಾರ ಸೇವಿಸಿದ ಮಂದಿಯಲ್ಲಿ ವಾಂತಿ ಭೇದಿ ಕಂಡುಬಂತು. ವೃದ್ಧರು, ಮಹಿಳೆ ಯರು, ಮಕ್ಕಳ ಸಹಿತ ಅಸ್ವಸ್ಥಗೊಂಡವರನ್ನು ಕುಶಾಲನಗರ, ಪಿರಿಯಾಪಟ್ಟಣ ಸೇರಿ ಪರಿ ಸರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು 300ಕ್ಕೂ ಮಂದಿಗೆ ಕುಶಾಲನಗರದ ಹೆಚ್ಚು ಆಸ್ಪತ್ರೆಗಳಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಶೇ.10ರಷ್ಟು ಮಂದಿ ಹೆಚ್ಚು ಆತಂಕಕ್ಕೆ ಈಡಾಗಿದ್ದರು ಎಂದು ತಿಳಿದು ಬಂದಿದೆ. ಬೀಗರೂಟದಲ್ಲಿ ಅಧಿಕಾರಿಗಳು, ಜನಪ್ರತಿ ನಿಧಿಗಳೂ ಕೂಡಾ ಪಾಲ್ಗೊಂಡಿದ್ದರು. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಕೂಡಾ ಪಾಲ್ಗೊಂಡಿದ್ದರು. ಸಚಿವರು ವಾಗಿದ್ದಾರೆಎಂದು ಅವರ ಆಪ್ತಸಹಾಯಕರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕರ್ನಾಟಕ Election 2024 Live: ರಾಜ್ಯದ 14 ಜಿಲ್ಲೆಗಳಲ್ಲೂ ಚುರುಕುಗೊಂಡ ಮತದಾನ
ಐಸ್‌ಕ್ರೀಂ ತಿಂದವರಿಗೆ ಸಮಸ್ಯೆ?: ಸಮಾರಂಭದಲ್ಲಿ ಶಾಖಾಹಾರಿ ಹಾಗೂ ಮಾಂಸಾಹಾರಿ ಎರಡೂ ರೀತಿಯ ಊಟ ಮಾಡಿದವರಿಗೂ ಅನಾರೋಗ್ಯ ಉಂಟಾಗಿದೆ. ಮುಖ್ಯವಾಗಿ ಐಸ್‌ಕ್ರೀಂ ಅಥವಾ ಸಿಹಿ ಸೇವಿಸಿದವರಲ್ಲಿ ಸಮಸ್ಯೆ ಕಂಡುಬಂದಿರು ವುದಾಗಿ ತಿಳಿದುಬಂದಿದೆ.