ಲೋಕಸಭೆ ಚುನಾವಣೆಯ 2ನೇ ಹಂತ ಹಾಗೂ ಕರ್ನಾಟಕದ ಮೊದಲ ಹಂತ ಆರಂಭವಾಗಿದೆ. ಇದರ ನಡುವೆಯೇ ಕೇಂದ್ರ ಚುನಾವಣಾ ಆಯೋಗ ಹಾಗೂ ಹವಮಾನ ಇಲಾಖೆ ಹೀಟ್‌ವೇವ್ ಕೆಲುವು ರಾಜ್ಯಗಳಲ್ಲಿ ಸಮಸ್ಯೆ ಒಡ್ಡುವ ಸಾಧ್ಯತೆ ಇದೆ ಎಂದಿದೆ.
ಬೆಂಗಳೂರು (ಏ.26): ಬೆಂಗಳೂರಿನಲ್ಲಿ ಬೆಳಗ್ಗೆಯೇ ಕೆಲವೊಂದು ಕಡೆ ಉತ್ತಮ ಮತದಾನವಾಗಿದೆ. ಅದಕ್ಕೆ ಕಾರಣ ಬಿಸಿಲು. ಇದರ ನಡುವೆ ಕೇಂದ್ರ ಚುನಾವಣಾ ಆಯೋಗ ಹಾಗೂ ಹವಾಮಾನ ಇಲಾಖೆ ಹೀಟ್‌ವೇವ್‌ನ ಎಚ್ಚರಿಕೆ ನೀಡಿದೆ. 2ನೇ ಹಂತದಲ್ಲಿ ದೇಶಾದ್ಯಂತ 88 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಮತದಾನ ನಡೆಯಲಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಮತಗಟ್ಟೆಗೆ ಛತ್ರಿ ಹಿಡಿದು ಬಂದು ನಿಂತಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಹವಾಮಾನ ಮುನ್ಸೂಚನೆಯು ಸಾಮಾನ್ಯವಾಗಿದೆ ಎಂದು ಹೇಳಲಾಗಿದ್ದು, ಹಲವಾರು ರಾಜ್ಯಗಳಲ್ಲಿ ಶಾಖದ ಅಲೆಗಳು ಮುಂದುವರಿಯಲಿದೆ. ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ಈ ಬಗ್ಗೆ ಮಾಹಿತಿ ನೀಡಿದ್ದು “ಹವಾಮಾನ ಪರಿಸ್ಥಿತಿಗಳು ಸಾಮಾನ್ಯ ವ್ಯಾಪ್ತಿಯಲ್ಲಿರಬಹುದು ಎಂದು ಊಹಿಸಲಾಗಿದೆ, ಮತದಾರರು ತಮ್ಮ ಮತಗಳನ್ನು ಆರಾಮವಾಗಿ ಚಲಾಯಿಸಬಹುದು. ಮತದಾರರ ಅನುಕೂಲಕ್ಕಾಗಿ, ಬಿಸಿ ವಾತಾವರಣವನ್ನು ಎದುರಿಸಲು ಸೌಲಭ್ಯಗಳನ್ನು ಒಳಗೊಂಡಂತೆ ಎಲ್ಲಾ ಮತಗಟ್ಟೆಗಳಲ್ಲಿ ಹೆಚ್ಚಿನ ವ್ಯವಸ್ಥೆಗಳನ್ನು ಮಾಡಲಾಗಿದೆ' ಎಂದು ತಿಳಿಸಿದೆ.
ಹೀಟ್‌ವೇವ್ ಪರಿಸ್ಥಿತಿ ಹೆಚ್ಚಿರುವ ಕ್ಷೇತ್ರದಲ್ಲಿ ಮತದಾರರಿಗೆ ಅವಕಾಶ ಕಲ್ಪಿಸಲು ಬಿಹಾರದ ಬಂಕಾ, ಮಾಧೇಪುರ, ಖಗರಿಯಾ ಮತ್ತು ಮುಂಗರ್ ಕ್ಷೇತ್ರಗಳಾದ್ಯಂತ ಹಲವಾರು ಮತದಾನ ಕೇಂದ್ರಗಳಲ್ಲಿ ಮತದಾನದ ಸಮಯವನ್ನು ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಪಿಐಬಿ ಹೇಳಿಕೆಯಲ್ಲಿ ಸೇರಿಸಲಾಗಿದೆ.
"ವಯೋವೃದ್ಧರು ಮತ್ತು ವಿಕಲಚೇತನರು ಸೇರಿದಂತೆ ಪ್ರತಿಯೊಬ್ಬ ಮತದಾರರು ತಮ್ಮ ಮತವನ್ನು ಸುಲಭವಾಗಿ ಚಲಾಯಿಸಬಹುದು ಎಂದು ಖಚಿತಪಡಿಸಿಕೊಳ್ಳಲು ನೀರು, ಶೆಡ್, ಶೌಚಾಲಯಗಳು, ರಾಂಪ್‌ಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುತ್‌ನಂತಹ ಖಚಿತವಾದ ಕನಿಷ್ಠ ಸೌಲಭ್ಯಗಳು ಜಾರಿಯಲ್ಲಿವೆ. ಬಿಸಿ ವಾತಾವರಣವನ್ನು ಎದುರಿಸಲು ಕ್ರಮಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.
ಕರ್ನಾಟಕ Election 2024 Live: ಬೆಳಗ್ಗೆ 9ರ ಹೊತ್ತಿಗೆ ರಾಜ್ಯಾದ್ಯಂತ ಶೇ.9.21ರಷ್ಟು ಮತದಾನ ...
ಮುಂದಿನ ಐದು ದಿನಗಳಲ್ಲಿ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ತೀವ್ರ ಶಾಖದ ಅಲೆಗಳು ಇರಬಹುದು ಎಂದು ತಿಳಿಸಿದೆ.
LIVE: ಚಾಮರಾಜನಗರ 2024 Elections: 'ಚುನಾವಣೆ ಪರ್ವ ದೇಶದ ಗರ್ವ' ಸೀರೆ ಧರಿಸಿ ಡಿಸಿ ಮತದಾನ...