ಯಾದಗಿರಿ: ಸಿಡಿಲು ಬಡಿದು ದೇವಸ್ಥಾನಕ್ಕೆ ಹಾನಿ!

By Ravi JanekalFirst Published May 20, 2024, 7:56 AM IST
Highlights

ಸಿಡಿಲು ಬಡಿದು ದೇವಸ್ಥಾನದ ಶಿಖರ ಹಾನಿಗೀಡಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಪರಮಾನಂದೇಶ್ವರ ದೇವಸ್ಥಾನದ ಶಿಖರಕ್ಕೆ ಹಾನಿಯಾಗಿದೆ

ಯಾದಗಿರಿ (ಮೇ.20): ಸಿಡಿಲು ಬಡಿದು ದೇವಸ್ಥಾನದ ಶಿಖರ ಹಾನಿಗೀಡಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.

ಪರಮಾನಂದೇಶ್ವರ ದೇವಸ್ಥಾನದ ಶಿಖರಕ್ಕೆ ಹಾನಿಯಾಗಿದೆ. ದೇವಸ್ಥಾನದ ಮೇಲ್ಭಾಗದಿಂದ ಕೆಳಭಾಗದವರೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಅದೇ ವೇಳೆ ದೇವಸ್ಥಾನದ ಒಳಗೆ ಮಲಗಿದ್ದ ವೃದ್ಧೆಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

Latest Videos

ಕರ್ನಾಟಕದಲ್ಲಿ ಮುಂದುವರಿದ ವರುಣನ ಅಬ್ಬರ: ಸಿಡಿಲಿಗೆ ಕುರಿಗಾಹಿ ಬಲಿ 

ದೇವದುರ್ಗ: ಸಿಡಿಲು ಬಡಿದು ಇಬ್ಬರ ಸ್ಥಿತಿ ಗಂಭೀರ

ಸಿಡಿಲು ಬಡಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ. ಜಾಲಹಳ್ಳಿ ಸಮೀಪದ ಪೈದೊಡ್ಡಿ ಗ್ರಾಮಸ್ಥರಾದ ಹನುಮಂತಿ ಶೇಖರಪ್ಪ ನಾಯಕ ಚದ್ರಿರ್ ಹಾಗೂ ಪರಮಣ್ಣ ದುರಗಪ್ಪ ನಾಯಕ ಎನ್ನುವರಿಗೆ ಗಾಯಗಳಾಗಿವೆ.

ಕಲಬುರಗಿ: ಎತ್ತಿನಬಂಡಿಯಲ್ಲಿ ಮನೆಗೆ ಬರುವಾಗ ಸಿಡಿಲು ಬಡಿದು ಬಾಲಕ ದುರ್ಮರಣ!

ನಿತ್ಯದಂತೆ ಕುರಿ ಮೇಯಿಸಿಕೊಂಡು ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ ಸಮಯದಲ್ಲಿ ಗ್ರಾಮದ ಸಮೀಪದಲ್ಲಿರುವ ಕೆರೆಯ ದಂಡೆಯಲ್ಲಿ ಇದ್ದಾಗ ಮಳೆ ಸುರಿದ ಪರಿಣಾಮ ಇಬ್ಬರು ಮರದ ಕೆಳಗೆ ಹೋಗಿ ನಿಂತಾಗ ಗುಡುಗು, ಸಿಡಿಲು ಬಡಿದಿದೆ. ಸಿಡಿಲಿನ ಬೆಂಕಿಗೆ ಮಹಿಳೆಯ ಸೀರೆ ಸುಟ್ಟಿದ್ದು, ಎರಡು ಕಾಲು ಸ್ವಾಧೀನ ಕಳೆದುಕೊಂಡಿದ್ದಾರೆ. ಪ್ರಜ್ಞೆ ಕಳೆದುಕೊಂಡ ಶೇಖರ ನಾಯಕ ಗಂಭೀರ ಸ್ಥಿತಿಯಲ್ಲಿದ್ದು, ಸ್ಥಳೀಯ ಸರ್ಕಾರಿ ವೈದ್ಯಧಿಕಾರಿ ಡಾ.ಆರ್.ಎಸ್ ಹುಲಿಮನಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಜಿಲ್ಲಾ ಕೇಂದ್ರ ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

click me!