ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ಸಿಟಿ ರವಿ ಬಂಧನವನ್ನು ಖಂಡಿಸಿ ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರ ನಡೆ ಅನುಮಾನ ಹುಟ್ಟಿಸಿದೆ ಮತ್ತು ರಾಜ್ಯ ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಕೊಪ್ಪಳ (ಡಿ.20): ಸಿಟಿ ರವಿ ಓರ್ವ ಸಂಭಾವಿತ ರಾಜಕಾರಣಿ. ಕಾಂಗ್ರೆಸ್ ಸರ್ಕಾರ ಉತ್ತಮ ರಾಜಕಾರಣಿಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಸಿಟಿ ರವಿ ಅವರ ಪ್ರಾಣಕ್ಕೆ ಅಪಾಯ ತರುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ಸಿಟಿ ರವಿ ಬಂಧನ ವಿಚಾರವಾಗಿ ಕೊಪ್ಪಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ಸಿಟಿ ರವಿಯವರನ್ನು ಬಂಧಿಸುವ ಮೂಲಕ ಬಿಜೆಪಿ ಪಕ್ಷದ ಕಾರ್ಯಕರ್ತರು ಕುಗ್ಗುವಂತೆ ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಬಂದಿದೆ. ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿಲ್ಲ ಎಂದು ವಿಧಾನ ಪರಿಷತ್ ಸಭಾಪತಿಗಳೇ ಹೇಳಿದ್ದಾರೆ. ಎಲ್ಲ ಆಡಿಯೋ ವಿಡಿಯೋ ಚೆಕ್ ಮಾಡಿದ್ರೂ ಯಾವುದೇ ರೆಕಾರ್ಡ್ ಸಾಕ್ಷ್ಯ ಸಿಕ್ಕಿಲ್ಲ ಎಂದಿದ್ದಾರೆ. ಆದರೆ ಯಾವುದೋ ವಿಡಿಯೋ ತೋರಿಸಿ ಸಿ.ಟಿ ರವಿ ಮೇಲೆ ಆರೋಪಿಸಿ ಬಂಧಿಸಲಾಗಿದೆ ಎಂದು ಕಿಡಿಕಾರಿದರು.
undefined
ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಿಟಿ ರವಿ ಆಶ್ಲೀಲ ಪದ ಬಳಕೆ ಮಾಡಿದ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ: ಬಸವರಾಜ ಹೊರಟ್ಟಿ
ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಅವರನ್ನ ಕೊಲೆಗಡುಕ ಎಂದಿದ್ದಾರೆ. ಹಾಗಾದ್ರೆ ಸಿಟಿ ರವಿ ಯಾರ ಕೊಲೆ ಮಾಡಿದ್ದಾರೆ? ಸಿಟಿ ರವಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಸದನದ ಒಳಗೆ ನುಗ್ಗಿ ಗೂಂಡಾಗಳ ರೀತಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಹಾಗಾದ್ರೆ ಇವರ ಮೇಲೆ ಸರ್ಕಾರ ಕ್ರಮ ಏನು? ಸಿಟಿ ರವಿಯವರನ್ನ ಬಂಧಿಸಿದ ಬಳಿಕ ಪೊಲೀಸರು ಟೆರರಿಸ್ಟ್ ರೀತಿ ರಾತ್ರಿಯಲ್ಲಿ ಎರಡು ಮೂರು ಜಿಲ್ಲೆಯಾದ್ಯಂತ ಜೀಪಿನಲ್ಲಿ ಓಡಾಡಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಯಾರೋಂದಿಗೆ ಪೊಲೀಸರು ಮಾತನಾಡಿದ್ದಾರೆ. ಪೊಲೀಸರ ಈ ನಡೆ ಅನುಮಾನ ಹುಟ್ಟಿಸಿದೆ. ಯಾರ ಅಣತಿಯಂತೆ ಪೊಲೀಸರು ಈ ರೀತಿ ಮಾಡುತ್ತಿದ್ದಾರೆ? ರಾತ್ರಿಯೆಲ್ಲ ಓಡಾಡಿಸಿ ಹಿಂಸೆ ಕೊಡುವ ಅವಶ್ಯಕತೆ ಏನಿತ್ತು? ಒಬ್ಬ ಜನಪ್ರತಿನಿಧಿ ಮೇಲೆ ಈ ರೀತಿ ದರ್ಪ ದೌರ್ಜನ್ಯ ನಡೆಸುವ ಅಧಿಕಾರ ಪೊಲೀಸರಿಗೆ ಕೊಟ್ಟವರು ಯಾರು? ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ಪೊಲೀಸರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು.
ಹೆಬ್ಬಾಳ್ಕರ್ ಸುದ್ದಿಗೋಷ್ಠಿ: ಸಿಟಿ ರವಿ ಆ ಪದ ಬಳಕೆಯಿಂದ ನನಗೆ ನೋವಾಗಿದೆ, ಮಾಧ್ಯಮಗಳ ಮುಂದೆ ಸಚಿವೆ ಕಣ್ಣೀರು!
ಸಿಟಿ ರವಿ ಅವರಿಗೆ ಕೊಲೆಗಡುಕ ಅಂದವರನ್ನು ಪೊಲೀಸರು ಬಂಧಿಸಬೇಕು. ಸಿಟಿ ರವಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಬೇಕು. ಕೆಲ ಪೊಲೀಸ್ ಅಧಿಕಾರಿಗಳು ಅಧಿಕಾರದಲ್ಲಿದ್ದವರ ಚೇಲಾಗಳಂತೆ ವರ್ತಿಸಿ ಪೊಲೀಸ್ ಇಲಾಖೆಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ ಎಂದು ಕಿಡಿಕಾರಿದರು.