Religious Conversion ಚರ್ಚ್‌ನಿಂದ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದ ಮತಾಂತರಿಗಳ ಪ್ರಶ್ನಿಸಿದ ಶಾಸಕ ಗೂಳಿಹಟ್ಟಿ!

By Kannadaprabha News  |  First Published Dec 20, 2021, 2:00 AM IST
  • ಆಸೆ, ಆಮಿಷ ತೋರಿಸಿ ಎಗ್ಗಿಲ್ಲದೆ ನಡೆಯುತ್ತಿದೆ ಮತಾಂತರ
  • ಹೊಸದುರ್ಗದ ಪ್ರತ್ಯಕ್ಷ ವರದಿ ನೀಡಿದ ಶಾಕಸ ಗೂಳಿಹಳ್ಳಿ
  • ವಿಡಿಯೋ ಮೂಲಕ ಗೂಳಿಹಟ್ಟಿ ರಾಜ್ಯದ ಮತಾಂತರ ಬಹಿರಂಗ

ಹೊಸದುರ್ಗ(ಡಿ.20):  ಮತಾಂತರಗೊಂಡಿರುವ(religious conversion) ಜನರು ಪಟ್ಟಣದ ಚರ್ಚ್(christian church) ಒಂದರಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದವರನ್ನು ರಸ್ತೆಯಲ್ಲಿ ನಿಲ್ಲಿಸಿ ಯಾವ ಊರು, ಯಾವ ಜಾತಿ, ನಿಮ್ಮ ಹೆಸರೇನು ಎಂದು ಶಾಸಕ ಗೂಳಿಹಟ್ಟಿಶೇಖರ್‌(gulihatti shekar) ಪ್ರಶ್ನಿಸಿರುವ ವಿಡಿಯೋವೊಂದು ಸ್ವತಃ ಶಾಸಕರೇ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು ಅದು ವೈರಲ್‌ ಆಗಿದೆ.

ಶಾಸಕ ಗೂಳಿಹಟ್ಟಿಶೇಖರ್‌ ಭಾನುವಾರ 12ಗಂಟೆ ಸುಮಾರಿಗೆ ಜಾನಕಲ್‌ ಗ್ರಾಮಕ್ಕೆ ಹೋಗುವಾಗ ಹಿರಿಯೂರು ರಸ್ತೆಯಲ್ಲಿರುವ ಶಾಂತಿನಗರದ ಚಚ್‌ರ್‍ವೊಂದರಿಂದ ಜನ ಸಾಲು ಗಟ್ಟಿಬರುತ್ತಿದ್ದನ್ನು ಗಮನಿಸಿದ ಶಾಸಕರು ತಮ್ಮ ಕಾರನ್ನು ನಿಲ್ಲಿಸಿ ರಸ್ತೆಯಲ್ಲಿ ಬರುತ್ತಿದ್ದ ಮಹಿಳೆಯೊಬ್ಬರನ್ನು ನಿಮ್ಮದು ಯಾವ ಊರು, ಎಷ್ಟುವರ್ಷದಿಂದ ಬರುತ್ತಿದ್ದೀರಾ, ನಿಮಗೆ ಇಲ್ಲಿಗೆ ಬಂದ ಮೇಲೆ ಒಳ್ಳೆಯದಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ಆಕೆ ನನ್ನದು ಹೊಸದುರ್ಗ, ಹಲವು ವರ್ಷಗಳಿಂದ ಬರುತ್ತಿದ್ದೇನೆ, ನನಗೆ ಕಾಯಿಲೆ ಆಗಿತ್ತು. ಇಲ್ಲಿಗೆ ಬಂದ ಮೇಲೆ ಚನ್ನಾಗಿದ್ದೇನೆ ಎಂದು ಉತ್ತರಿಸಿದ್ದಾಳೆ.

Latest Videos

undefined

Anti Conversion Bill: ಲವ್ ಜಿಹಾದ್‌ಗೆ ಬ್ರೇಕ್, ಮತಾಂತರಕ್ಕೆ ನಿಷೇಧ, ಸರ್ಕಾರದ ಮೆಗಾಪ್ಲ್ಯಾನ್.?

ಇನ್ನೊಂದು ಯುವ ದಂಪತಿಯನ್ನು ಪ್ರಶ್ನಿಸಿದಾಗ ನನ್ನದು ಶಾಂತಿನಗರ, ನಾವು ಬೋವಿ ಸಮುದಾಯಕ್ಕೆ ಸೇರಿದವರು ಸುಮಾರು 8 ವರ್ಷಗಳಿಂದ ಬರುತ್ತಿದ್ದೇವೆ, ನಾವು ಕ್ರಿಶ್ಚಿಯನ್‌ ಜಾತಿ ಕನ್ವರ್ಟ್‌ ಆಗಿದ್ದೇವೆ ಎಂದು ಉತ್ತರಿಸಿದ್ದಾರೆ. ಆಗ ಶಾಸಕರು ಸರಿ ಬಿಡಮ್ಮ ಎಂದು ಸುಮ್ಮನಾಗಿದ್ದಾರೆ. ಶಾಸಕರು ಜನರನ್ನು ಪ್ರಶ್ನಿಸುತ್ತಿದ್ದನ್ನು ಗಮನಿಸಿದ ಮತಾಂತರಿಗಳು ನಿಲ್ಲುವಂತೆ ಹೇಳಿದರೂ ಕೇಳದಂತೆ ಹೊಗಿದ್ದಾರೆ.

ವಿಡಿಯೋ ವೈರಲ್‌(Viral Video) ಆಗಿದ್ದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಜಾನಕಲ್‌ಗೆ ಹೋಗುವಾಗ ಚಚ್‌ರ್‍ ಕಡೆಯಿಂದ ಹೊರಬರುತ್ತಿದ್ದ ಜನರನ್ನು ನೋಡಿದೆ. ಅಲ್ಲಿ ಮಹಿಳೆಯೊಬ್ಬರು ಹಣೆಯಲ್ಲಿ ಕುಂಕುಮ ಇಟ್ಟುಕೊಂಡಿದ್ದರು. ಆಕೆಯನ್ನು ಯಾವ ಊರು ತಾಯಿ ನಿಮ್ಮದು ಎಂದಾಗ ಮಲ್ಲಪ್ಪನಹಳ್ಳಿ ಎಂದರು. ಎಷ್ಟುವರ್ಷದಿಂದ ಬರುತ್ತಿದ್ದೀಯ ಎಂದು ಕೇಳಿದ್ದಕ್ಕೆ ಇವತ್ತು ಇನ್ನೂ ಮೊದಲ ದಿನ ಎಂದರು. ಯಾರು ನಿನ್ನನ್ನು ಕರೆದುಕೊಂಡು ಬಂದರು ಎಂದಿದ್ದಕ್ಕೆ ಅಲ್ಲಿಯೇ ಇದ್ದ ಮಹಿಳೆಯೋರ್ವರನ್ನು ತೋರಿಸಿ ಚಚ್‌ರ್‍ನಲ್ಲಿ ಬಂದು ಪ್ರಾರ್ಥನೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ಎಂದು ಇವರು ಕರೆದುಕೊಂಡು ಬಂದರು ಎಂದು ತಿಳಿಸಿದರು.

Anti Conversion Bill Karnataka ಪರ ವಿರೋಧದ ನಡುವೆ ಡಿ.22 ಅಥವಾ 23ಕ್ಕೆ ಮತಾಂತರ ನಿಷೇಧ ಕಾಯ್ದೆ ಮಂಡನೆ?

ಇಷ್ಟೆಲ್ಲಾ ರಾಜ್ಯದಲ್ಲಿ ಮತಾಂತರ ವಿರುದ್ಧದ ಕೂಗು ಹೇಳುತ್ತಿದ್ದರೂ ಅಸಾಯಕತೆಯ ಹಿಂದೂಗಳ(Hindu) ಮನಪರಿವರ್ತನೆಯ ಕೆಲಸವನ್ನು ಕ್ರಿಶ್ಚಿಯನ್‌ ಮಿಷನರಿಗಳು(christian missionary) ನಿಲ್ಲಿಸದಿರುವುದು ಮುಂದೊಂದು ದಿನ ಅಪಾಯದ ಸಂಕೇತ ಎಂದು ತಿಳಿಸಿದರು.

ಮತಾಂತರಕ್ಕೆ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಹಿಂದೂಗಳಿಗೆ ಮಾರಕ
ಅನಾರೋಗ್ಯ ಪೀಡಿತರು ಹಿಂದೂ ದೇವಾಲಯಗಳಿಗೆ ಹೋದರೆ ಅದು ಮೂಡನಂಬಿಕೆಯಾಗುತ್ತದೆ, ಅದೇ ಚಚ್‌ರ್‍ಗೆ ಹೋದರೆ ಧಾರ್ಮಿಕ ನಂಬಿಕೇನಾ? ಎಂದು ಶಾಸಕ ಗೂಳಿಹಟ್ಟಿಶೇಖರ್‌ ಪ್ರಶ್ನಿಸಿದ್ದಾರೆ. ಚಚ್‌ರ್‍ನಿಂದ ಹೊರಬಂದ ಮತಾಂತರಿಗಳನ್ನು ಪ್ರಶ್ನಿಸುವ ವಿಡಿಯೋ ವೈರಲ್‌ ಆದ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಸಹೋದರ ಸಂಸ್ಥೆ ಕನ್ನಡಪ್ರಭದೊಂದಿಗೆ ಮಾತನಾಡಿ, ಚಚ್‌ರ್‌ಳಿಗೆ ಹೋದರೆ ಕಾಯಿಲೆ ವಾಸಿಯಾಗುವುದಾದರೆ ಆಸ್ಪತ್ರೆಗಳೇಕೆ ಬೇಕು? ಕಾಯಿಲೆಯಿಂದ ನರಳುತ್ತಿರುವವರು ಹಿಂದೂ ದೇವಾಲಯಗಳಿಗೆ ಹೋದರೆ ಮೂಡನಂಬಿಕೆ ಹೆಸರಿನಲ್ಲಿ ಕೇಸು ಹಾಕುತ್ತಾರೆ, ಆದರೆ ಇವರನ್ನು ಪ್ರಶ್ನಿಸುವವರು ಯಾರೂ ಇಲ್ಲವಾಗಿದ್ದಾರೆ ಎಂದು ಅಸಮಾದಾನ ವ್ಯಕ್ತ ಪಡಿಸಿದರು. ರಾಜ್ಯದಲ್ಲಿ ಮತಾಂತರದ ವಿರುದ್ಧ ಕೂಗು ಹೆಚ್ಚುತ್ತಿದ್ದರೂ ಹೊಸದುರ್ಗ ತಾಲೂಕಿನಲ್ಲಿ ದಿನೇ ದಿನೇ ಮತಾಂತರ ಹೆಚ್ಚಾಗುತ್ತಿದೆ. ಸಂಕಷ್ಟದಲ್ಲಿರುವ ಅನಾರೋಗ್ಯದ ಜನರನ್ನು ಗುರಿಯಾಗಿಸಿಕೊಂಡು ಅವರಿಗೆ ಆಸೆ ಆಮಿಷಗಳನ್ನು ನೀಡುವ ಮೂಲಕ ಹೊಸ ಹೊಸ ಜನರನ್ನು ಚಚ್‌ರ್‍ಗಳಿಗೆ ಕರೆತರುವ ಕೆಲಸವನ್ನು ಈ ಮತಾಂತರಿಗಳು ಕ್ರಿಯಾಶೀಲರಾಗಿದ್ದಾರೆ. ಇವರಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳು ಹಿಂದೂಗಳಿಗೆ ಮಾರಕವಾಗಲಿವೆ ಎಂದು ಕಳವಳ ವ್ಯಕ್ತ ಪಡಿಸಿದರು.

click me!