
ಶಿವಮೊಗ್ಗ: ಶಾಸಕ ಚನ್ನಬಸಪ್ಪ ಅವರು ಚಾಮುಂಡೇಶ್ವರಿ ದೇವಿ, ಮೈಸೂರು ದಸರಾ ಮತ್ತು ಕಾಂಗ್ರೆಸ್ ನೀತಿಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚಾಮುಂಡೇಶ್ವರಿ ತಾಯಿ ಕನ್ನಡ ನಾಡಿನ ಭುವನೇಶ್ವರಿ ರೂಪವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ದುಷ್ಟರ ಸಂಹಾರಕ್ಕಾಗಿ ಪಣತೊಟ್ಟವಳು ಚಾಮುಂಡೇಶ್ವರಿ. ಮೈಸೂರು ದಸರಾವನ್ನು ಅವರು ಕನ್ನಡ ನಾಡಿನ ಅಭಿಮಾನ ಹಬ್ಬವೆಂದು ಗುರುತಿಸಿದರು. ನಾಡ ಹಬ್ಬವು ಇಂದಿಗೆ ವಿಶ್ವವಿಖ್ಯಾತಿಯನ್ನೂ ಪಡೆದಿದೆ. ಆದರೆ ರಾಜ್ಯದಲ್ಲಿ ಇತ್ತೀಚೆಗೆ ಅನೇಕ ದುರ್ಭಾಗ್ಯಕರ ಘಟನೆಗಳು ನಡೆದಿವೆ. ಕೆಲವು ದುಷ್ಟ ಕೂಟಗಳು ನಮ್ಮ ರಾಜ್ಯದಲ್ಲಿ ಇದೆ. ಮಹಿಷಾಸುರನ ಮನಸ್ಥಿತಿ ಹೊಂದಿರುವ ದುಷ್ಟ ಕೂಟ ಒಂದು ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹವರು ಮಹಿಷಾಸುರ ಜಯಂತಿಯನ್ನೂ ಆಚರಿಸುತ್ತಾರೆ. ಇದು ಯಾರಿಗೂ ಬೇಕಿಲ್ಲದ ವಿಷಯ, ಆದರೆ ಕೆಲವರು ಬಲವಂತವಾಗಿ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಸಾಹಿತಿ, ಭಾನು ಮುಸ್ತಾಕ್ ಗೆ ನಾವು ಗೌರವ ಕೊಡುತ್ತೇನೆ. ಅವರು ವಿಗ್ರಹ ಆರಾಧಕರು ಅಲ್ಲ. ಅವರ ಜೊತೆ ನಮ್ಮ ಸಂಬಂಧ ಅವಶ್ಯಕತೆ ಇಲ್ಲ. ದಸರಾದಲ್ಲಿ ತುಷ್ಟಿಕರಣದ ನೀತಿಗೆ ಜಾಗ ಇಲ್ಲ. ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಬಾಗಿನ ಕೊಡಿ. ಚಾಮುಂಡೇಶ್ವರಿ ದಸರಾ ಉದ್ಘಾಟನೆ ಮಾಡಿಸುವುದು ರಾಜ್ಯಕ್ಕೆ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.
ಚಾಮುಂಡೇಶ್ವರಿ ದೇವಿಯ ಆರಾಧನೆಗೆ ಸಂಬಂಧಿಸಿದಂತೆ ಶಾಸಕ ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿ, ಚಾಮುಂಡೇಶ್ವರಿ ಹಿಂದೂ ಸಮಾಜದ ಆರಾಧ್ಯ ದೈವತೆ. ಆಕೆ ಹಿಂದೂ ಸಮಾಜದ ಆಸ್ತಿಯಲ್ಲದೆ ಮತ್ತಾರಾದರೂ ಸಮುದಾಯದ ಆಸ್ತಿಯೇ? ಚಾಮುಂಡೇಶ್ವರಿ ಹಿಂದೂ ಸಮಾಜದ ಆಸ್ತಿಯಲ್ಲದೇ ಮುಸ್ಲಿಮರ ಆಸ್ತಿಯೇ? ಕ್ರಿಶ್ಚಿಯನ್ನರ ಆಸ್ತಿಯೇ ? ಚಾಮುಂಡೇಶ್ವರಿ ದೇವಿಯನ್ನು ಯಾರಿಗೂ ಅಡ ಇಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಗಂಭೀರವಾಗಿ ಪರ್ಯಾಲೋಚನೆ ಮಾಡಬೇಕು. ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಯಾರು ಹಿಂದೂಗಳು ಸಿಗಲಿಲ್ಲವೇ ? ಹಿಂದೂ ಸಮಾಜ ಸಹಿಷ್ಣುತೆ ಹೊಂದಿದೆ ಅಂತ ಮೀರಿದರೆ ಏನು ಬೇಕಾದರೂ ಮಾಡಿದರೆ ಜಯಿಸಿ ಕೊಳ್ಳಬಹುದು ಅಂತ ನೀವು ಅಂದುಕೊಂಡರೆ ಅನುಭವಿಸಬೇಕಾಗುತ್ತದೆ. ಒಂದು ಹಂತ ಮೀರಿದರೆ ನಿಮ್ಮ ಅದೋಗತಿ ನೀವೇ ತೋಡಿ ಕೊಳ್ಳಬೇಕಾಗುತ್ತದೆ. ವಿಶ್ವವಿಖ್ಯಾತ ದಸರಾ ಹಬ್ಬದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕತ್ವ ಹೊರಟಿದೆ. ಚಾಮುಂಡೇಶ್ವರಿ ದೇವಿಯ ಮೆರವಣಿಗೆಯನ್ನು ಹಿಂದೂಗಳೇ ಮುನ್ನಡೆಸಬೇಕು. ದಸರಾದಲ್ಲಿ ತುಷ್ಟೀಕರಣದ ನೀತಿಗೆ ಯಾವುದೇ ಸ್ಥಾನವಿಲ್ಲ ಎಂದು ಆರೋಪಿಸಿದರು.
ಚನ್ನಬಸಪ್ಪ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಧಾರಾಳ ಟೀಕೆಗಳನ್ನು ಹೊರಹಾಕಿದರು. ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದಕ್ಕೆ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಕಾಂಗ್ರೆಸ್ ನಲ್ಲಿ ಎದುರಾಯಿತು. ಡಿಕೆಶಿ ‘ನಮಸ್ತೆ ಸದಾ ವತ್ಸಲೆ’ ಎಂಬ ಪ್ರಾರ್ಥನೆ ಹೇಳಿದಾಗ ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಆದರೆ ಇದೇ ದೇಶಭಕ್ತಿ ಗೀತೆ. ಇದನ್ನು ದೇಶದ್ರೋಹಿ ಗೀತೆ ಎಂದು ತೋರಿಸುವುದು ಕಾಂಗ್ರೆಸ್‌ನ ದುಷ್ಟ ನೀತಿ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅವರು ಇನ್ನೂ ಮುಂದೆ, ಕಾಂಗ್ರೆಸ್ ಸ್ಥಾಪಕ ಎ.ಓ. ಹ್ಯೂಮ್ ಈ ದೇಶದವನಲ್ಲ. ಆದ್ದರಿಂದ ಕಾಂಗ್ರೆಸ್‌ಗೆ ನಿಜವಾದ ದೇಶಭಕ್ತಿ ಹೇಗೆ ಬರುತ್ತದೆ? ದೇಶಭಕ್ತರನ್ನು ಅವಗಣನೆ ಮಾಡುವ ಸಂಘಟನೆ ಯಾವತ್ತೂ ಉಳಿಯುವುದಿಲ್ಲ. ಕಾಂಗ್ರೆಸ್ ಅಂತ್ಯ ಬಹಳ ಸಮೀಪದಲ್ಲಿದೆ” ಎಂದು ಎಚ್ಚರಿಸಿದರು.
ಹಿಂದೂ ಸಮಾಜದ ಬಗ್ಗೆ ಮಾತನಾಡಿದ ಚನ್ನಬಸಪ್ಪ, “ಹಿಂದೂ ಸಮಾಜ ಸಹಿಷ್ಣುತೆಯೇ ಆದರ್ಶ. ಆದರೆ ಈ ಸಹಿಷ್ಣುತೆಯನ್ನು ದುರ್ಬಲತೆ ಎಂದು ಅರ್ಥಮಾಡಿಕೊಂಡು ದುಷ್ಟ ಶಕ್ತಿಗಳು ಏನು ಬೇಕಾದರೂ ಮಾಡಿದರೆ ಅದು ಅವರಿಗೆ ಖಂಡಿತ ಅನುಭವವಾಗುತ್ತದೆ. ಒಂದು ಹಂತ ಮೀರಿದರೆ ಅವರದೇ ಆದೋಗತಿ ಅವರ ಕೈಯಿಂದಲೇ ಆಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ