ಬೆಂಗಳೂರು: ತಮಿಳುನಾಡು ನಾಲ್ಕುಬಸ್‌ಗಳ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು!

By Kannadaprabha News  |  First Published Sep 13, 2023, 5:48 AM IST

ಬಾಗಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ(ಕೆ.ಆರ್‌.ಮಾರ್ಕೆಟ್‌ ಫ್ಲೈ ಓವರ್‌) ಡೌನ್‌ ರ್‍ಯಾಂಪ್‌ ಮೇಲೆ ಕಿಡಿಗೇಡಿಗಳು ತಮಿಳುನಾಡು ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳ ಮೇಲೆ ಕಲ್ಲು ತೂರಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.


ಬೆಂಗಳೂರು (ಸೆ.13) :  ಬಾಗಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ(ಕೆ.ಆರ್‌.ಮಾರ್ಕೆಟ್‌ ಫ್ಲೈ ಓವರ್‌) ಡೌನ್‌ ರ್‍ಯಾಂಪ್‌ ಮೇಲೆ ಕಿಡಿಗೇಡಿಗಳು ತಮಿಳುನಾಡು ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳ ಮೇಲೆ ಕಲ್ಲು ತೂರಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಘಟನೆಯಲ್ಲಿ ತಮಿಳುನಾಡು ಸಾರಿಗೆಯ ನಾಲ್ಕು ಬಸ್‌ಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ. ಈ ಸಂಬಂಧ ಬಸ್‌ಗಳ ಚಾಲಕರು ನೀಡಿದ ದೂರಿನ ಮೇರೆಗೆ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

 

ಕೆಲಸದ ಕೊನೆ ದಿನ ಭಾವುಕರಾಗಿ ಬಸ್‌ನ್ನು ತಬ್ಬಿ ಮುತ್ತಿಕ್ಕಿದ ಚಾಲಕ: ವಿಡಿಯೋ ವೈರಲ್

ಸೋಮವಾರ ಮುಂಜಾನೆ 2.45ರ ಸುಮಾರಿಗೆ ಕೆ.ಆರ್‌.ಮಾರ್ಕೆಟ್‌ ಕಡೆಯಿಂದ ಮೇಲ್ಸೇತುವೆಯಲ್ಲಿ ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣಕ್ಕೆ ತಮಿಳುನಾಡು ಸಾರಿಗೆ ಬಸ್‌ಗಳು ಹೋಗುತ್ತಿದ್ದವು. ಈ ವೇಳೆ ಎದುರಿನಿಂದ ದ್ವಿಚಕ್ರ ವಾಹನದಲ್ಲಿ ಬಂದಿರುವ ಇಬ್ಬರು ದುಷ್ಕರ್ಮಿಗಳು ನಾಲ್ಕು ಬಸ್‌ಗಳ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಒಂದು ಬಸ್‌ನ ಕಿಟಕಿ ಗಾಜು, ಕನ್ನಡಿ ಸೇರಿದಂತೆ ಸಣ್ಣಪುಟ್ಟ ಹಾನಿಯಾಗಿದೆ.

ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು, ರಾಜ್ಯಕ್ಕೆ ತೀವ್ರ ಹಿನ್ನಡೆ ಬೆನ್ನಲ್ಲೇ ಸಿಎಂ ಸಿದ್ದು ತುರ್ತು ಸಭೆ!

ಇದು ಕಾವೇರಿ ನೀರಿನ ವಿಚಾರವಾಗಿ ನಡೆದ ಘಟನೆಯಲ್ಲ. ಸೋಮವಾರ ಖಾಸಗಿ ವಾಹನಗಳ ಸಂಘಟನೆಗಳ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ತಮಿಳುನಾಡು ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಿರುವ ಸಾಧ್ಯತೆಯಿದೆ. ದುಷ್ಕರ್ಮಿಗಳ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!