ಬೆಂಗಳೂರು: ನಿತ್ಯ ಸೈಬರ್‌ ಅಪರಾಧ ಬಗ್ಗೆಪೊಲೀಸರಿಂದ ಜಾಗೃತಿ ಟಿಪ್ಸ್‌

Published : Sep 13, 2023, 05:36 AM IST
ಬೆಂಗಳೂರು: ನಿತ್ಯ ಸೈಬರ್‌ ಅಪರಾಧ ಬಗ್ಗೆಪೊಲೀಸರಿಂದ ಜಾಗೃತಿ ಟಿಪ್ಸ್‌

ಸಾರಾಂಶ

ಇತ್ತೀಚೆಗೆ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಸೈಬರ್‌ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ‘ಸೈಬರ್‌ ವಂಚಕರಿಂದ ದೂರವಿರಲು, ದಿನಕ್ಕೊಂದು ಸೈಬರ್‌ ಸಲಹೆ’ ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ.ಈ ಅಭಿಯಾನದಡಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರು ದಿನಕ್ಕೊಂದು ಸೈಬರ್‌ ಸಲಹೆ ನೀಡಲಿದ್ದಾರೆ.

ಬೆಂಗಳೂರು (ಸೆ.13) :  ಇತ್ತೀಚೆಗೆ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಸೈಬರ್‌ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ‘ಸೈಬರ್‌ ವಂಚಕರಿಂದ ದೂರವಿರಲು, ದಿನಕ್ಕೊಂದು ಸೈಬರ್‌ ಸಲಹೆ’ ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ.ಈ ಅಭಿಯಾನದಡಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರು ದಿನಕ್ಕೊಂದು ಸೈಬರ್‌ ಸಲಹೆ ನೀಡಲಿದ್ದಾರೆ.

ಈ ಅಭಿಯಾನದ ಬಗ್ಗೆ ಮಾತನಾಡಿರುವ ದಯಾನಂದ್‌, ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ದೇಶದಲ್ಲಿ ಸೈಬರ್‌ ಅಪರಾಧಗಳ ಹಾವಳಿ ಹೆಚ್ಚಾಗಿದೆ. ಅಂಕಿ-ಅಂಶಗಳ ಪ್ರಕಾರ ದೇಶದ ಪ್ರತಿ ಮೂರನೇ ವ್ಯಕ್ತಿ ಸೈಬರ್‌ ಅಪರಾಧಿಗಳಿಗೆ ಶಿಕಾರಿ ಆಗುತ್ತಿದ್ದಾನೆ. ಬಹಳಷ್ಟು ಜನರು ತಮ್ಮ ದುಡಿಮೆಯ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸೈಬರ್‌ ಅಪರಾಧಗಳಿಂದ ದೂರು ಇರಬೇಕಾದಲ್ಲಿ ಜನರಿಗೆ ಸೂಕ್ತ ಅರಿವು ಮತ್ತು ತಿಳಿವಳಿಕೆ, ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಓದಿದ್ದು ಬಿಟೆಕ್ ಮಾಡ್ತಿದ್ದ ಕೆಲಸ ಮಾತ್ರ ಸೈಬರ್ ಹ್ಯಾಕ್: ಗಿಪ್ಟ್‌ ವೋಚರ್‌ಗೆ ಕನ್ನ ಹಾಕುವುದೇ ಕಾಯಕ

ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅಭಿಯಾನದ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಒಂದು ಸೈಬರ್‌ ಸಂಬಂಧಿತ ಸಲಹೆ ನೀಡುತ್ತೇವೆ. ಈ ಸಲಹೆಗಳನ್ನು ಅಳವಡಿಸಿಕೊಂಡಲ್ಲಿ ಸೈಬರ್‌ ಅಪರಾಧಗಳಿಗೆ ತಿಲಾಂಜಲಿ ಇಡಬಹುದು. ಹೀಗಾಗಿ ಸಾರ್ವಜನಿಕರು ಸೈಬರ್‌ ಶುಚಿತ್ವ ಅರಿಯಿರಿ, ಸೈಬರ್‌ ಅಪರಾಧಗಳಿಂದ ದೂರವಿರಿ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!