
ಕಲಬುರಗಿ (ಅ.15): ಬಸವೇಶ್ವರ ಭಾವಚಿತ್ರ ಸುಟ್ಟ ಪ್ರಕರಣ ವಿಚಾರಕ್ಕೆ ಕಾಂಗ್ರೆಸ್ ಲಿಂಗಾಯತರು, ಬಿಜೆಪಿ ಲಿಂಗಾಯತರು ಪರಸ್ಪರ ಬಡಿದಾಡಿಕೊಂಡು ನಗೆಪಾಟಲಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಬಸವ ಜಯಂತಿಯಂದು ಅಖಿಲ ಭಾರತ ವೀರಶೈವ ಲಿಂಗಾಯತ ಟ್ರಸ್ಟ್ ವತಿಯಿಂದ ಹಲರ್ಕಟಿ ಗ್ರಾಮದಲ್ಲಿ ಬಸವೇಶ್ವರರ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ರಾತ್ರಿ ಕಿಡಿಗೇಡಿಗಳು ಅಲ್ಲಲ್ಲಿ ಸುಟ್ಟುಹಾಕಿದ್ದರು. ಬಸವೇಶ್ವರರ ಭಾವಚಿತ್ರ ಸುಟ್ಟ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಇಂದು ಚಿತ್ತಾಪುರ ಪಟ್ಟಣದಲ್ಲಿ ಲಿಂಗಾಯತ ಸಮಾಜದಿಂದ ಪ್ರತಿಭಟನೆ ನಡೆದಿತ್ತು.
ಹಾಡಹಗಲಲ್ಲೇ ಅಧ್ಯಕ್ಷನ ಕಥೆ ಮುಗಿಸಿದ್ರು..! 30 ವರ್ಷದ ವೈಷಮ್ಯ ಕೊಲೆಯಿಂದ ಪುನಾರಂಭ..!
ಈ ವಿಚಾರಕ್ಕೆ ಕಾಂಗ್ರೆಸ್ ಲಿಂಗಾಯತರು, ಬಿಜೆಪಿ ಲಿಂಗಾಯತರು ಮಧ್ಯೆ ವಾಗ್ವಾದ. ಪ್ರತಿಭಟನೆ ವೇಳೆ ರಾಜಕೀಯ ಪಕ್ಷಗಳನ್ನು ದೂಷಿಸಬೇಡಿ ಎಂದ ಕಾಂಗ್ರೆಸ್ ಬೆಂಬಲಿತ ಲಿಂಗಾಯತರು. ಈ ವಿಚಾರ ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಬೆಂಬಲಿತ ಲಿಂಗಾಯತರು ಮತ್ತು ಬಿಜೆಪಿ ಬೆಂಬಲಿತ ಲಿಂಗಾಯತರ ನಡುವೆ ತೀವ್ರ ವಾಗ್ವಾದ. ಪರಸ್ಪರ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋದ ಲಿಂಗಾಯತ ಮುಖಂಡರು. ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತವಾಗಿದೆ.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ ಎನ್ನಿರಯ್ಯ ಎಂಬ ಸಂದೇಶ ನೀಡಿದ್ದ ಮಹಾತ್ಮ ಬಸವೇಶ್ವರ ಹೆಸರಿನಲ್ಲೇ ಕಾಂಗ್ರೆಸ್-ಬಿಜೆಪಿ ಲಿಂಗಾಯತರು ಪರಸ್ಪರ ಕಿತ್ತಾಡಿಕೊಂಡಿರುವುದು ನಗೆಪಾಟಲಿಗೀಡಾಗಿದೆ.
ಕಲಬುರಗಿ: ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ ಆಪ್ತನ ಭೀಕರ ಹತ್ಯೆ, ಶವದ ಸುತ್ತ ಕುಣಿದು ವಿಕೃತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ