ದಸರಾ ನೆಪದಲ್ಲೇ ಖಾಸಗಿ ಬಸ್‌ಗಳ ದರ್ಬಾರ್‌: ಟಿಕೆಟ್‌ ದರ 3 ಪಟ್ಟು ಹೆಚ್ಚಳ, ಕಂಗಾಲಾದ ಪ್ರಯಾಣಿಕರು..!

Published : Oct 15, 2023, 10:03 AM IST
ದಸರಾ ನೆಪದಲ್ಲೇ ಖಾಸಗಿ ಬಸ್‌ಗಳ ದರ್ಬಾರ್‌: ಟಿಕೆಟ್‌ ದರ 3 ಪಟ್ಟು ಹೆಚ್ಚಳ, ಕಂಗಾಲಾದ ಪ್ರಯಾಣಿಕರು..!

ಸಾರಾಂಶ

ಅಕ್ಟೋಬರ್ 21ರಿಂದ 24ರ ಸಾಲು ಸಾಲು ರಜೆಯಿದೆ. ಹೀಗಾಗಿ ಅ. 20ರಂದು ಊರಿಗೆ ತೆರಳಲು ಜನರು ಈಗಾಗಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ದೊಡ್ಡ ಶಾಕ್ ನೀಡಿದ ಖಾಸಗಿ ಬಸ್ ಮಾಲೀಕರು. 

ಬೆಂಗಳೂರು(ಅ.15):  ದಸರಾ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳು ಸುಲಿಗೆಗೆ ಇಳಿದಿವೆ. ಹೌದು, ದಸರಾ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಬಸ್‌ ಟಿಕೆಟ್ ದರವನ್ನು ಖಾಸಗಿ ಬಸ್‌ಗಳು ದುಪ್ಪಟ್ಟು ಮಾಡಿವೆ. 
ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಯಾಗಿದೆ. ಎಸಿ ವೋಲ್ವೋ ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 

ಅಕ್ಟೋಬರ್ 21ರಿಂದ 24ರ ಸಾಲು ಸಾಲು ರಜೆಯಿದೆ. ಹೀಗಾಗಿ ಅ. 20ರಂದು ಊರಿಗೆ ತೆರಳಲು ಜನರು ಈಗಾಗಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ಖಾಸಗಿ ಬಸ್ ಮಾಲೀಕರು ದೊಡ್ಡ ಶಾಕ್ ನೀಡಿದ್ದಾರೆ. 

ಕಾವೇರಿ ಬಂದ್‌ - ವೀಕೆಂಡ್‌ ಮಸ್ತಿಗಾಗಿ ಊರಿಗೆ ಹೊರಟವರಿಗೆ ಶಾಕ್‌! ಖಾಸಗಿ ಬಸ್ ದರ 3 ಪಟ್ಟು ಹೆಚ್ಚಳ

ಖಾಸಗಿ ಬಸ್ ಗಳ ದಸರಾ ದರ್ಬಾರ್ 

1. ಬೆಂಗಳೂರು-ಶಿವಮೊಗ್ಗ
ಅಕ್ಟೋಬರ್ 16 ದರ  ₹450-₹650
ಅಕ್ಟೋಬರ್ 20 ದರ ₹1150-₹1400
2. ಬೆಂಗಳೂರು- ಹುಬ್ಬಳಿ
ಅಕ್ಟೋಬರ್ 16 ದರ ₹600-₹850
 ಅಕ್ಟೋಬರ್ 20 ದರ  ₹1600-₹2000
3. ಬೆಂಗಳೂರು-ಮಂಗಳೂರು
ಅಕ್ಟೋಬರ್ 16 ದರ     ₹650-₹900
 ಅಕ್ಟೋಬರ್ 20 ದರ     ₹1600-₹2000
4. ಬೆಂಗಳೂರು - ಉಡುಪಿ
ಅಕ್ಟೋಬರ್ 16 ದರ        ₹700-₹850
 ಅಕ್ಟೋಬರ್ 20 ದರ     ₹1600-₹1900
5. ಬೆಂಗಳೂರು-ಧಾರವಾಡ
ಅಕ್ಟೋಬರ್ 16 ದರ           ₹650-₹850
 ಅಕ್ಟೋಬರ್ 20 ದರ        ₹1500-₹2100
6. ಬೆಂಗಳೂರು-ಬೆಳಗಾವಿ
ಅಕ್ಟೋಬರ್ 16 ದರ           ₹700-₹900
 ಅಕ್ಟೋಬರ್ 20 ದರ        ₹1500-₹2100
7. ಬೆಂಗಳೂರು - ದಾವಣಗೆರೆ
ಅಕ್ಟೋಬರ್ 16 ದರ           ₹450-₹650
 ಅಕ್ಟೋಬರ್ 20 ದರ        ₹1300-₹1650
8. ಬೆಂಗಳೂರು - ಚಿಕ್ಕಮಗಳೂರು
ಅಕ್ಟೋಬರ್ 16 ದರ           ₹600-₹650
 ಅಕ್ಟೋಬರ್ 20 ದರ        ₹1250-₹1500
9. ಬೆಂಗಳೂರು - ಹಾಸನ
ಅಕ್ಟೋಬರ್ 16 ದರ           ₹650-₹850
 ಅಕ್ಟೋಬರ್ 20 ದರ        ₹1600-₹1850
ಬೆಂಗಳೂರಿನಿಂದ ಹೊರರಾಜ್ಯಕ್ಕೆ
1. ಬೆಂಗಳೂರು-ಚೆನೈ
ಅಕ್ಟೋಬರ್ 16 ದರ     ‌‌‌  ₹620-₹850
ಅಕ್ಟೋಬರ್ 20 ದರ    ₹1800-₹2100
2. ಬೆಂಗಳೂರು- ಹೈದರಾಬಾದ್ 
ಅಕ್ಟೋಬರ್ 16 ದರ           ₹1300-₹1900
 ಅಕ್ಟೋಬರ್ 20 ದರ        ₹2800-₹3300
3. ಬೆಂಗಳೂರು-ಕೊಯಮತ್ತೂರು
ಅಕ್ಟೋಬರ್ 16 ದರ           ₹700-₹1100
 ಅಕ್ಟೋಬರ್ 20 ದರ        ₹2300-₹2800
4. ಬೆಂಗಳೂರು - ಮುಂಬೈ 
ಅಕ್ಟೋಬರ್ 16 ದರ           ₹1300-₹1600
 ಅಕ್ಟೋಬರ್ 20 ದರ        ₹2300-₹2700
5. ಬೆಂಗಳೂರು-ಗೋವಾ 
ಅಕ್ಟೋಬರ್ 16 ದರ           ₹1000-₹1300
 ಅಕ್ಟೋಬರ್ 20 ದರ        ₹2800-₹3100

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ