: ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲವೆಂಬ ಸಿಟ್ಟಿಗೆ ಯುವತಿಯ ತಂದೆ ಶ್ರಮವಹಿಸಿ ಬೆಳೆದಿದ್ದ 850 ಅಡಕೆ ಗಿಡ ನಾಶ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೈಸೂರು (ಆ.10) : ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲವೆಂಬ ಸಿಟ್ಟಿಗೆ ಯುವತಿಯ ತಂದೆ ಶ್ರಮವಹಿಸಿ ಬೆಳೆದಿದ್ದ 850 ಅಡಕೆ ಗಿಡ ನಾಶ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಶೋಕ್ ಎಂಬಾತ ಅಡಕೆ ಸಸಿಗಳನ್ನು ಕಿತ್ತುಹಾಕಿರುವ ಭೂಪ. ಗ್ರಾಮದ ವೆಂಕಟೇಶ ಎಂಬಾತ ತನ್ನ ಮಗಳನ್ನು ಅಶೋಕ ಎಂಬಾತನಿಗೆ ಮದುವೆ ಮಾಡಿಕೊಡಲು ಮಾತುಕತೆ ನಡೆದಿತ್ತು. ಆದರೆ ಯುವತಿ ಅಶೋಕ ನಡತೆ ಸರಿಯಿಲ್ಲ ಎಂದು ಅವನೊಂದಿಗೆ ಮದುವೆಯಾಗಲು ನಿರಾಕರಿಸಿದ್ದಳು. ಮದುವೆಗೆ ಒಪ್ಪದ್ದಕ್ಕೆ ಯುವತಿ ಕುಟುಂಬದ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಅಶೋಕ್. ಈ ಹಿಂದೆಯೂ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿ ನಾಶ ಮಾಡಿದ್ದಾನೆಂಬ ಆರೋಪವಿದೆ. ಆದರೆ ಇದೀಗ ಮತ್ತೆ
undefined
ಮಾನ್ವಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮೈನಿಂಗ್ ಅಧಿಕಾರಿಗಳ ಮೇಲೆ ಮರಣಾಂತಿಕ ಹಲ್ಲೆ!
ಹುಡುಗ ಸರಿಯಿಲ್ಲ ಎಂದು ಮದುವೆಗೆ ಒಪ್ಪದ ವೆಂಕಟೇಶ್ ಪುತ್ರಿ. ಇದರಿಂದ ಆರಂಭಗೊಂಡ ದ್ವೇಷ. ಇದೀಗ ನಿನ್ನೆ ರಾತ್ರಿ ಜಮೀನಿಗೆ ನುಗ್ಗಿ ಅಡಕೆ ಗಿಡಗಳ ನಾಶ ಮಾಡಿದ್ದಾನೆಂದು ಯುವತಿಯ ತಂದೆ ವೆಂಕಟೇಶ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈ ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ
ಮೈಸೂರು : ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ನಗರದ ದೇವರಾಜ ಪೊಲೀಸ್ ಠಾಣೆ ಸಿಬ್ಬಂದಿಯು, ಆರೋಪಿಯಿಂದ . 4.50 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ದಾಸಪ್ಪ ವೃತ್ತದಿಂದ ಕೆಆರ್‌ಎಸ್ ರಸ್ತೆಯಲ್ಲಿರುವ ರೈಲ್ವೆ ಕೆಳ ಸೇತುವೆ ಬಳಿ ವಾಹನ ತಪಾಸಣೆ ಮಾಡುವಾಗ ಇಬ್ಬರು ಆರೋಪಿಗಳು ಒಂದು ಪ್ಲಾಸ್ಟಿಕ್ ಚೀಲವನ್ನು ಸ್ಕೂಟರ್ ಮುಂದೆ ಇಟ್ಟುಕೊಂಡು ಬರುತ್ತಿದ್ದರು. ಈ ವೇಳೆ ವಾಹನ ತಪಾಸಣೆಗೆ ಮುಂದಾದಾಗ ಇಬ್ಬರೂ ಸ್ಕೂಟರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಈ ಪೈಕಿ ಓರ್ವನನ್ನು ಬಂಧಿಸಲಾಗಿದೆ.
ಆರೋಪಿಯಿಂದ . 4.50 ಲಕ್ಷ ಮೌಲ್ಯದ 9ಕೆಜಿ 350 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಸ್ಕೂಟರ್ ಅನ್ನು ವಶಕ್ಕೆಪಡೆಯಲಾಗಿದೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು-ಮೈಸೂರು ಹೈವೇನಲ್ಲಿ ಬಸ್‌ಗಳ ಒನ್‌ವೇ ಸಂಚಾರಕ್ಕೆ ಲಗಾಮು..!
ಡಿಸಿಪಿಗಳಾ ಮುತ್ತುರಾಜ್, ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಟಿ.ಬಿ. ಶಿವಕುಮಾರ್, ಎಸ್‌ಐ ಪ್ರಭು, ಸಿಬ್ಬಂದಿ ಮಧುಕೇಶ್, ಸೋಮಶೆಟ್ಟಿ, ಸುರೇಶ್, ವೇಣುಗೋಪಾಲ್, ನಂದೀಶ್, ಪ್ರದೀಪ್ ಮತ್ತು ಮಾರುತಿಪವನ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.