ಆಸ್ಪತ್ರೆಯಲ್ಲಿರುವ ಆನಂದ್ ಸಿಂಗ್ ಜೊತೆ ಜಮೀರ್ ಸೀಕ್ರೆಟ್ ಚರ್ಚೆ

Published : Jan 31, 2019, 12:09 PM IST
ಆಸ್ಪತ್ರೆಯಲ್ಲಿರುವ ಆನಂದ್ ಸಿಂಗ್ ಜೊತೆ ಜಮೀರ್ ಸೀಕ್ರೆಟ್ ಚರ್ಚೆ

ಸಾರಾಂಶ

ಕಂಪ್ಲಿ ಶಾಸಕ ಗಣೇಶ್ ರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ಆನಂದ್ ಸಿಂಗ್ ಜೊತೆ ಸಚಿವರೋರ್ವರು ಸಂಧಾನಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಸಚಿವ ಜಮೀರ್ ಅಹಮದ್ ಆನಂದ್ ಸಿಂಗ್ ಜೊತೆ ಸಂಧಾನ ಯತ್ನ ನಡೆಸುತ್ತಿದ್ದಾರೆ. 

ಬೆಂಗಳೂರು : ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್ ರಿಂದ ಹಲ್ಲೆಗೊಳಗಾಗಿರುವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಗೆ  ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.  

11ನೇ ದಿನ ಆನಂದ್ ಸಿಂಗ್ ಗೆ ಚಿಕಿತ್ಸೆ ನಡೆಯುತ್ತಿದ್ದು, ಇದೇ ವೇಳೆ ಇನ್ನೊಂದು ವಿಚಾರ ಬಯಲಾಗಿದೆ.  ಕಾಂಗ್ರೆಸ್ ಸಚಿವರೋರ್ವರು ನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಸೀಕ್ರೆಟ್ ಚರ್ಚೆ ನಡೆಸುತ್ತಿದ್ದಾರೆ. 

ಶಾಸಕ ಆನಂದ್ ಸಿಂಗ್ ಜೊತೆ  ಸಚಿವ ಜಮೀರ್ ಅಹಮದ್ ನಿತ್ಯ ಸಂಪರ್ಕದಲ್ಲಿದ್ದು,  ಪ್ರತಿನಿತ್ಯ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಕಂಪ್ಲಿ ಶಾಸಕ ಗಣೇಶ್ ಬೆನ್ನಿಗೆ ನಿಂತು ಜಮೀರ್, ಆನಂದ್ ಸಿಂಗ್ ಜೊತೆಗೆ ರಾಜಿ ಸಂಧಾನದ ಹೊಣೆ ಹೊತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. 

ಗಣೇಶ್ ಬಂಧನಕ್ಕೆ ತೆರಳಿದ್ದ ಪೊಲೀಸರು ವಾಪಸ್ !

ಆರೋಗ್ಯ ವಿಚಾರಣೆ ಬಳಿಕ ಆನಂದ್ ಸಿಂಗ್ ಬಳಿ ಮಾತನಾಡಿದ ಜಮೀರ್ ಘಟನೆ ಬಗ್ಗೆ ಈಗ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ಆಶ್ವಾಸನೆ ನೀಡಿದ್ದು, ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಿ ಗಣೇಶ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. 

ಮೊದಲು ಹೊಡೆದದ್ದೇ ಆನಂದ್ ಸಿಂಗ್!: ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಆದರೆ ಆಸ್ಪತ್ರೆಯಲ್ಲಿರುವ ಶಾಸಕ ಆನಂದ್ ಸಿಂಗ್ ಮಾತ್ರ ಯಾವ ಸಂಧಾನ ಯತ್ನಕ್ಕೂ ಕೂಡ ಪ್ರತಿಕ್ರಿಯೆ ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!