ಮುಡಾ ವಿಚಾರದಲ್ಲಿ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಪ್ರೇರಿತವಾಗಿ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಧಾರವಾಡ (ಆ.19): ಮುಡಾ ವಿಚಾರದಲ್ಲಿ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಪ್ರೇರಿತವಾಗಿ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಇಂದು ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವ ಯಾವುದೇ ಕಾನೂನು ಅವಕಾಶ ಇರಲಿಲ್ಲ. ಆದರೂ ಕೇಂದ್ರ ಬಿಜೆಪಿಯವರ ಒತ್ತಡದಿಂದ ತರಾತುರಿಯಲ್ಲಿ ಒಪ್ಪಿಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯರ ಮೇಲೆ ಕೇಸ್ ಮಾಡಿದ್ರೆ ರಾಜ್ಯದ ಏಳು ಕೋಟಿ ಜನ ಸಹಿಸೊಲ್ಲ: ಎಂಬಿ ಪಾಟೀಲ್
ಬಿಜೆಪಿಯವರ ಉದ್ದೇಶ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸೋದು. ಸಿದ್ದರಾಮಯ್ಯ ಅವರಿಗೆ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಯಾವ ಆಧಾರದ ಮೇಲೆ ಸಿಎಂ ರಾಜೀನಾಮೆ ಕೊಡಬೇಕು? ಪ್ರಧಾನಿ ವಿರುದ್ಧ ರಾಷ್ಟ್ರಪತಿ ಪ್ರಾಸಿಕ್ಯೂಷನ್ ಕೊಟ್ರೆ ಅವರು ರಾಜೀನಾಮೆ ಕೊಡ್ತಾರೆ. ಎಲ್ಲದಕ್ಕೂ ಒಂದು ನಿಯಮ ಅಂತಾ ಇದೆ. ಪ್ರಾಸಿಕ್ಯೂಷನ್ ಕೊಡಲು ಕೇಂದ್ರ ಮಾರ್ಗಸೂಚಿ ಇದೆ. ಮುಡಾ ಹಗರಣದಲ್ಲಿ ಲ್ಯಾಂಡ್ ವ್ಯಾಜ್ಯ ಇದೆಯಾ? ಅದರಲ್ಲೇನೂ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಸೈಟು ಕೊಟ್ಟಿರೋದು. ಬೊಮ್ಮಾಯಿ ಸಿಎಂ ಆಗಿ ಅಧಿಕಾರದಲ್ಲಿದ್ದಾಗಲೇ 125 ಸೈಟ್ ಕೊಟ್ಟಿದ್ದಾರೆ. ಇವರೇ ಸೈಟ್ ಕೊಟ್ಟು ಈಗ ಅಕ್ರಮ ಎನ್ನುತ್ತಿದ್ದಾರೆ. ನಮ್ಮ ಸಮಯದಲ್ಲಿ ಅಕ್ರಮ ಆಗಿದೆ ಅಂತಾ ಅವರೇ ಹೇಳಿದ್ದಾರೆ. ಈ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರ ಬಗ್ಗೆ ಒಂದೇ ಒಂದು ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
'ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ'; ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾ ಹೇಳಿಕೆಗೆ ಆರ್‌ವಿ ದೇಶಪಾಂಡೆ ಬೇಸರ
ರಾಜೀನಾಮೆ ಕೇಳಲು ಬಿಜೆಪಿ ನೈತಿಕತೆ ಇಲ್ಲ. ಅವರಿಗೆ ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 17 ರಾಜ್ಯಗಳಲ್ಲಿ ಉಗ್ರರ ದಾಳಿ ನಡೆದಿವೆ. ಆದರೂ ಅವನ್ನೆಲ್ಲ ಬಿಜೆಪಿ ಮುಚ್ಚಿಟ್ಟಿದೆ. ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ಮೀಸಲಾತಿ ತಂದಿಲ್ಲ. ಹಿಂದೂತ್ವ ಐಡಿಯಾಲಾಜಿ ಸಂವಿಧಾನ ಮೂಲಕ ತರಲು ಪ್ರಯತ್ನ ಮಾಟುತ್ತಿದ್ದಾರೆ ಎಂದು ಆರೋಪಿಸಿದರು.