ಸಿಎಂ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ಸಂಕಷ್ಟ ತಂದಿಟ್ಟ ಪ್ರದೀಪ್ ಕುಮಾರ್‌ಗೆ ಬೆದರಿಕೆ!

By Sathish Kumar KHFirst Published Aug 19, 2024, 8:00 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ದೂರು ನೀಡಿದ್ದ ವಕೀಲ ಪ್ರದೀಪ್ ಕುಮಾರ್ ಅವರಿಗೆ ಅನಾಮಧೇಯ ಬೆದರಿಕೆ ಕರೆಗಳು ಬರುತ್ತಿವೆ.

ಬೆಂಗಳೂರು (ಆ.19): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡ) ಹಗರಣದ ಕುರಿತು ಕೆಲವು ದಾಖಲೆಗಳ ಸಮೇತ ರಾಜ್ಯಾಪಲಾರಿಗೆ ದೂರು ಕೊಟ್ಟು ಪ್ರಾಸಿಕ್ಯೂಷನ್‌ಗೆ ಆದೇಶ ಹೊರಡಿಸಲು ಕಾರಣವಾದ ಪ್ರದೀಪ್ ಕುಮಾರ್ ಅವರಿಗೆ ಪೊಲೀಸರು ಹಾಗೂ ಪತ್ರಕರ್ತರು ಎಂದೆಲ್ಲಾ ಹೇಳಿಕೊಂಡು ಅನಾಮಧೇಯ ಬೆದರಿಕೆ ಕರೆಗಳು ಬರುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ವಕೀಲ ಪ್ರದೀಪ್ ಕುಮಾರ್ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ. ಪ್ರದೀಪ್ ಕುಮಾರ್ ದೂರು ಸೇರಿದಂತೆ ಮೂವರ ದೂರನ್ನು ಆಧರಿಸಿ ರಾಜ್ಯಪಾಲರು ಸಿಎಂ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಆದರೆ, ಈಗ ಸಿದ್ದರಾಮಯ್ಯ ವಿರುದ್ದ ದೂರು ನೀಡಿದ್ದ ಪ್ರದೀಪ್ ಕುಮಾರ್‌ಗೆ ಬೆದರಿಕೆ ಕರೆಗಳ ಕಾಟ ಶುರುವಾಗಿದೆ. ನಾವು ಪೋಲೀಸರು, ನಾವು ಪತ್ರಕರ್ತರು, ನಾವು ಅಧಿಕಾರಿಗಳು ಎಂದೆಲ್ಲಾ ಹೇಳಿಕೊಂಡು ನಾನಾ ಹೆಸರಿನಲ್ಲಿ ಅನಾಮಧೇಯ ಮೊಬೈಲ್ ಕರೆಗಳು ಬರುತ್ತಿವೆ.

Latest Videos

ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್; ನಾಳೆ ಬರಲಿದ್ದ ತೀರ್ಪಿಗೆ ತಡೆಕೊಟ್ಟ ಹೈಕೋರ್ಟ್

ಪ್ರದೀಪ್ ಕುಮಾರ್ ದೂರಿನಲ್ಲಿ ಉಲ್ಲೇಖ ಮಾಡಿದ್ದ ಮನೆಯ ವಿಳಾಸಕ್ಕೂ ಕೆಲವು ಪೋಲಿಸರು ಹೋಗಿದ್ದರಂತೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಅಧಿಕಾರಿಗಳು ಎಂದು ಹೇಳಿಕೊಂಡು ಕೆಲವರು ಪ್ರದೀಪ್ ಕುಮಾರ್ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಇನ್ನು ಅವರ ಮನೆಗೆ ಭೇಟಿ ನೀಡಿದ ಪೊಲೀಸರು ಮನೆಯ ವಿಳಾಸ ಕನ್ಪರ್ಮ್ ಮಾಡಿಕೊಳ್ಳಲು ಬಂದಿದ್ದೇವೆ ಎಂದು ಸಬೂಬು ಹೇಳಿ ಹೋಗಿದ್ದಾರಂತೆ. ಪತ್ರಕರ್ತ ಎಂಬ ಹೆಸರಿನಲ್ಲಿ ಮತ್ತೊಬ್ಬನಿಂದ ಕರೆ ಮಾಡಿದ್ದಾರೆ. ಜೊತೆಗೆ, ನಿಮ್ಮ ಮನೆಯ ವಿಳಾಸ ಕನ್ಫರ್ಮ್ ಆಗುತ್ತಿಲ್ಲ ಎಂದು ವಿಚಾರಣೆ ಮಾಡಿದ್ದಾರಂತೆ. ಹೀಗೆ, ಸಿಎಂ ವಿರುದ್ಧ ದೂರು ಕೊಟ್ಟ ಪ್ರದೀಪ್‌ಗೆ ಅನಾಮಿಕ ಬೆದರಿಕೆ ಕರೆಗಳು ಬರುತ್ತಿದ್ದು, ತಾನು ರೋಸಿ ಹೋಗಿದ್ದೇನೆ ಎಂದು ಮಾಧ್ಯಮಗಳ ಮುಂದೆ ತಮಗಾಗುತ್ತಿರುವ ತೊಂದರೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡ) ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಹಗರಣ ಮಾಡಿದ್ದಾರೆಂದು ಆರೋಪ ಕೇಳಿಬಂದಿತ್ತು. ಇದನ್ನು ಸಿಎಂ ಸಿದ್ದರಾಮಯ್ಯ ಎಷ್ಟೇ ವಿರೋಧ ಮಾಡಿದರೂ, ಸಂಕಷ್ಟ ಕೊರಳಿಗೆ ಸುತ್ತಿಕೊಂಡೇ ಬಿಟ್ಟಿತು. ನಂತರ, ಮುಡ ಹಗರಣದ ಬಗ್ಗೆ ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಟಿ.ಜೆ. ಅಬ್ರಾಹಂ, ಪ್ರದೀಪ್ ಕುಮಾರ್ ಹಾಗೂ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಈ ಮೂವರೂ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಅವರಿಗೆ ಕೆಲವು ದಾಖಲೆಗಳ ಸಮೇತ ದೂರನ್ನು ನೀಡಿದ್ದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ನೀಡಲು ರಾಜ್ಯಪಾಲರು ಶೋಕಾಷ್ ನೋಟೀಸ್ ಜಾರಿ ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ಸಚಿವ ಸಂಪುಟವು ಪ್ಯಾಸಿಕ್ಯೂಷನ್ ರದ್ದುಗೊಳಿಸುವಂತೆ ಹಾಗೂ ಮುಂದುವರಿಸಿದಲ್ಲಿ ಕಾನೂನು ಹೋರಾಟ ಮಾಡುವುದಾಗಿ ನಿರ್ಣಯ ಕೈಗೊಂಡು ರಾಜ್ಯಾಪಾಲರಿಗೆ ವರದಿ ನೀಡಿದ್ದರು.

ಬೆಂಗಳೂರಿನಲ್ಲಿ ಆ.23ರವರೆಗೆ ಭಾರೀ ಮಳೆ: ನಾಳೆ ಯೆಲ್ಲೋ ಅಲರ್ಟ್ ಘೋಷಣೆ

ಸಿಎಂ ಸಿದ್ದರಾಮಯ್ಯ ಪರವಾಗಿ ನಿಂತ ಸಚಿವ ಸಂಪುಟದ ನಿರ್ಣಯವನ್ನು ಲೆಕ್ಕಿಸದೇ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶ ಹೊರಡಿಸಿದರು. ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ರಿಟ್ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್, ಸಿಎಂ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್ ವಿಚಾರಣೆಯ ತೀರ್ಪು ಬರುವುದಕ್ಕೂ ಮುನ್ನವೇ ರಿಟ್ ಅರ್ಜಿ ಇತ್ಯರ್ಥ ಆಗಬೇಕು. ಈ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಯಾವುದೇ ತೀರ್ಪು ನೀಡದಂತೆ ಸೂಚನೆ ನೀಡಿದೆ. ಜೊತೆಗೆ, ಆ.29ಕ್ಕೆ ಸಿಎಂ ಸಿದ್ದರಾಮಯ್ಯ ಅವರ ರಿಟ್ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.

click me!