ನಿನ್ನೆ ಸಚಿವ ಸಂತೋಷ್ ಲಾಡ್ ಕನಸಲ್ಲಿ ಶ್ರೀರಾಮ ಬಂದಿದ್ದನಂತೆ! ಕನಸಲ್ಲಿ ಹೇಳಿದ್ದೇನು?

By Ravi Janekal  |  First Published Jan 13, 2024, 12:38 PM IST

ನನ್ನ ಕನಸಿನಲ್ಲಿ ರಾಮ ಬಂದಿದ್ದ. ನಾನು ಎಲ್ಲರಿಗೂ ಇರುವ ರಾಮ ಎಂದು ಹೇಳಿದ್ದಾನೆ. ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾನು ಈ ತರದ ರಾಮನಲ್ಲ. ಬಿಜೆಪಿಯವರಿಗೆ ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಬೇಡಿ ಅಂತಾ ಹೇಳಿದರು. ಎಂದು ಕನಸಿನಲ್ಲಿ ಶ್ರೀರಾಮಚಂದ್ರ ಬಂದ ಬಗ್ಗೆ ಸಚಿವ ಸಂತೋಷ್ ಲಾಡ್ ತಿಳಿಸಿದರು.


ಧಾರವಾಡ (ಜ.13): ನನ್ನ ಕನಸಿನಲ್ಲಿ ರಾಮ ಬಂದಿದ್ದ. ನಾನು ಎಲ್ಲರಿಗೂ ಇರುವ ರಾಮ ಎಂದು ಹೇಳಿದ್ದಾನೆ. ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾನು ಈ ತರದ ರಾಮನಲ್ಲ. ಬಿಜೆಪಿಯವರಿಗೆ ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಬೇಡಿ ಅಂತಾ ಹೇಳಿದರು. ಎಂದು ಕನಸಿನಲ್ಲಿ ಶ್ರೀರಾಮಚಂದ್ರ ಬಂದ ಬಗ್ಗೆ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಶ್ರೀರಾಮ ಮತ್ತೇನಾದ್ರೂ ಹೇಳಿದ್ರ ಎಂಬ ಮಾಧ್ಯಮದವರ ಪ್ರಶ್ನೆಗೆ ಮತ್ತೆ ಶ್ರೀರಾಮ ಕನಸಿನಲ್ಲಿ ಬಂದರೂ ಬರಬಹುದು ಬಂದಾಗ ಮುಂದಿನ ಎಪಿಸೋಡ್ ಹೇಳುವ ಎಂದರು.

Tap to resize

Latest Videos

ಅಪಘಾತ ಸಂತ್ರಸ್ತರನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸೇರಿಸಿದ ಸಂತೋಷ್ ಲಾಡ್; ಸಚಿವರ ನಡೆಗೆ ವ್ಯಾಪಕ ಮೆಚ್ಚುಗೆ

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯವರು ರಾಮನ ಬಗ್ಗೆ ಮಾತನಾಡುತ್ತಾರೆ. ಇಷ್ಟು ವರ್ಷ ಬಿಟ್ಟು ಈಗ್ಯಾಕೆ ರಾಮ ಮಂದಿರ ಬಂತು? ಇಷ್ಟೊಂದು ದೊಡ್ಡ ರಾಮ ಮಂದಿರ ಏಕೆ, ಬೇರೆ ಗುಡಿಗಳಿಲ್ವಾ? ರಾಮಮಂದಿರ ವಿಚಾರ ಇಟ್ಟುಕೊಂಡು ಚುನಾವಣೆಯಲ್ಲಿ ಮತ ಸೆಳೆಯಲು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಮಮಂದಿರ ಅರ್ಧ ನಿರ್ಮಾಣವಾಗಿದೆ. ಪೂರ್ಣವಾಗಿ ರಾಮಮಂದಿರ ಕಟ್ಟದೇ ಲೋಕಸಭಾ ಚುನಾವಣೆ ಹಿನ್ನೆಲೆ ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿದ್ದಾರೆ. ಅಪೂರ್ಣವಾಗಿರುವ ರಾಮಮಂದಿರದ ಉದ್ಘಾಟನೆಗೆ ಶಂಕರಾಚಾರ್ಯ ಸ್ವಾಮೀಜಜಿ ವಿರೋಧ ಮಾಡಿದ್ದಾರೆ.  ಗುಡಿ ಸಂಪೂರ್ಣ ಮುಗಿಯುವವರೆಗೂ ಮೂರ್ತಿ ಪ್ರತಿಷ್ಠಾನೆ ಮಾಡಲು ಬರುವುದಿಲ್ಲ. ರಾಮ ಮಂದಿರ ಹೋರಾಟದಲ್ಲಿ ಮೋದಿ ಪಾತ್ರ ಏನು ಅಂತಾ ಕೇಳಿದ್ದಾರೆ. ಶಂಕರಾಚಾರ್ಯರು ಹೇಳಿಕೆ ಬಗ್ಗೆ ಬಿಜೆಪಿ ಅವರನ್ನೇ ಕೇಳಬೇಕು. ಆದರೆ ಬಿಜೆಪಿ ಅವರು ಶಂಕರಾಚಾರ್ಯರ ಹೇಳಿಕೆ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ಧಾರವಾಡದಲ್ಲಿ ಕಾರ್ಮಿಕ ಇಲಾಖೆ ಐತಿಹಾಸಿಕ ಕಾರ್ಯಕ್ರಮ: 550 ತ್ರಿಚಕ್ರ ವಾಹನ ನೀಡಿದ ಸಚಿವ ಸಂತೋಷ್ ಲಾಡ್..!

ರಾಮಮಂದಿರಕ್ಕೆ ಹೋಗಲು ಆಹ್ವಾನ ಬೇಕಿಲ್ಲ:

ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡುವಲ್ಲಿ ಬಿಜೆಪಿಯವರು ತಾರತಮ್ಯ ಮಾಡಿದ್ದಾರೆ. ರಾಮಮಂದಿರಕ್ಕೆ ಹೋಗಲು ಆಹ್ವಾನ ಬೇಕೆನ್ರಿ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅದಕ್ಕಾಗಿ ನಾವು ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಮುಂದೆ ಹೋಗಬಹುದು. ಸಿಎಂ ಸಿದ್ದರಾಮಯ್ಯನವರು ಸಹ ಇದನ್ನೇ ಹೇಳಿದ್ದಾರೆ. 

click me!