Santosh Lad: ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಚಾಲನೆ, ಸಂತೋಷ ಲಾಡ್‌ರಿಂದ ಪೂಜೆಗೆ ಹಿಂದೇಟು!

Published : May 27, 2025, 01:08 PM ISTUpdated : May 27, 2025, 01:11 PM IST
Santosh lad

ಸಾರಾಂಶ

ಧಾರವಾಡದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ವಾಹನಗಳಿಗೆ ಸಚಿವ ಸಂತೋಷ ಲಾಡ್ ಚಾಲನೆ. ಆದರೆ, ಕಾರ್ಯಕ್ರಮದ ಪೂಜೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದು ಚರ್ಚೆಗೆ ಗ್ರಾಸ.

ಧಾರವಾಡ (ಮೇ.27): ಧಾರವಾಡದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸಂಚಾರಿ ಆರೋಗ್ಯ ತಪಾಸಣೆ ವಾಹನಗಳಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು. ಧಾರವಾಡ ಜಿಲ್ಲೆಗೆ ಒಟ್ಟು ಮೂರು ವಾಹನಗಳು ಮಂಜೂರಾಗಿದ್ದು, ಈ ವಾಹನಗಳು ಕಾರ್ಮಿಕರ ಇದ್ದಲ್ಲಿಯೇ ಹೋಗಿ 20 ಬಗೆಯ ಆರೋಗ್ಯ ತಪಾಸಣೆ ನಡೆಸಲಿವೆ. ಸರ್ಕ್ಯೂಟ್ ಹೌಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತಿತರರು ಭಾಗವಹಿಸಿದ್ದರು.

ಕರ್ಪೂರ, ಅಗರಬತ್ತಿ ಬೆಳಗಲು ಸಂತೋಷ ಲಾಡ್ ಹಿಂದೇಟು?

ಕಾರ್ಯಕ್ರಮದ ಆರಂಭದಲ್ಲಿ ನಡೆಯಬೇಕಿದ್ದ ಸಾಂಪ್ರದಾಯಿಕ ಪೂಜೆಯಲ್ಲಿ ಸಚಿವ ಸಂತೋಷ ಲಾಡ್ ಭಾಗವಹಿಸಲು ಹಿಂದೇಟು ಹಾಕಿದ್ದು ಗಮನ ಸೆಳೆಯಿತು. ಕಾರ್ಮಿಕ ಇಲಾಖೆ ಅಧಿಕಾರಿಗಳು ಪೂಜೆಗೆ ಆಹ್ವಾನಿಸಿದರೂ, ಲಾಡ್ ದೂರವೇ ಕೈಕಟ್ಟಿಕೊಂಡು ನೋಡುತ್ತಾ ನಿಂತು, ಶಾಸಕ ಎನ್.ಎಚ್. ಕೋನರಡ್ಡಿಯವರಿಗೆ ಕರ್ಪೂರ ಬೆಳಗಲು ಮತ್ತು ಇಡುಗಾಯಿ ಒಡೆಯಲು ಸೂಚಿಸಿದರು. ಕೋನರಡ್ಡಿಯವರು ಕರ್ಪೂರ ಬೆಳಗಿ, ಲಾಡ್‌ಗೆ ಕೊಡಲು ಮುಂದಾದಾಗ, 'ಸ್ವಲ್ಪ ನೀವೇ ಬೆಳಗಿ' ಎಂದು ಕೇಳಿಕೊಂಡರೂ, ಲಾಡ್ ಕರ್ಪೂರ ಬೆಳಗಲು ಒಪ್ಪದೆ, ಕಾಯಿ ಒಡೆಯುವಂತೆ ಹೇಳಿದರು. ಕೊನೆಗೆ ಕೋನರಡ್ಡಿಯವರೇ ಇಡುಗಾಯಿ ಒಡೆದರು. ಲಾಡ್ ಪೂಜೆಗೆ ಕೈ ಜೋಡಿಸದೇ ಕೇವಲ ಹಸಿರು ನಿಶಾನೆ ತೋರಿಸಿದರು.

ಈ ಘಟನೆಯಿಂದ ಸಚಿವ ಸಂತೋಷ ಲಾಡ್ ಅವರ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ನಿಲುವು ಚರ್ಚೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌