Congress vs BJP: ಸುಳ್ಳು ಹೇಳೋದ್ರಲ್ಲಿ ಬಿಜೆಪಿಯವರು ನಿಸ್ಸೀಮರು: ಪ್ರಿಯಾಂಕ್ ಖರ್ಗೆ

Published : May 27, 2025, 12:09 PM ISTUpdated : May 27, 2025, 12:14 PM IST
Karnataka Minister and Congress leader Priyank Kharge. (Photo/ANI)

ಸಾರಾಂಶ

ಬಿಜೆಪಿ ಮತ್ತು ಅದರ ಐಟಿ ಸೆಲ್ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುಳ್ಳು ಸುದ್ದಿ ಹರಡುವುದರಲ್ಲಿ ಮಾಸ್ಟರ್ ಎಂದು ಟೀಕಿಸಿದರು

ಬೆಂಗಳೂರು (ಮೇ.27): ಸುಳ್ಳು ಸುದ್ದಿ ಹರಡುವುದರಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಸುಳ್ಳು ಹೇಳೋದ್ರಲ್ಲಿ ಅವರು ನಿಸ್ಸೀಮರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಅದರ ಐಟಿ ಸೆಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸರ್ಕಾರದ ಯೋಜನೆಗಳ ಬಗ್ಗೆ ಟೀಕೆ ಮಾಡುವಾಗ ಬಿಜೆಪಿಯವರು ಸರಿಯಾದ ಅಂಕಿ-ಅಂಶಗಳನ್ನು ಇಟ್ಟುಕೊಂಡು ಮಾತನಾಡಬೇಕು, ಇಲ್ಲವಾದರೆ ಸುಳ್ಳು ಆರೋಪಗಳಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುಳ್ಳು ಸುದ್ದಿಗಳನ್ನು ಹರಡುವುದು ಬಿಜೆಪಿಯ ಐಟಿ ಸೆಲ್‌ನಿಂದ ಬರುತ್ತಿದೆ. 'ಆಪರೇಷನ್ ಸಿಂದೂರ್' ಕಾರ್ಯಾಚರಣೆ ಬಗ್ಗೆ ಏನೆಲ್ಲ ಸುಳ್ಳು ಹೇಳಿದ್ರು? ಬಿಜೆಪಿಯವರದು ಸುಳ್ಳುಗಳ ಇತಿಹಾಸವೇ ಇದೆ. ಇವರೆಲ್ಲ ಹಿಟ್ಲರ್ ವಂಶದ ಸನಾತನಿಗಳಂತೆ ವರ್ತಿಸುತ್ತಾರೆ. ಸತ್ಯ ಹೇಳಲು ಇವರಿಗೆ ಸಾಧ್ಯವಿಲ್ಲ, ಎಂದು ಖರ್ಗೆ ಕಿಡಿಕಾರಿದ್ದಾರೆ. ಬಿಜೆಪಿಯವರು ತಮ್ಮ ಆರೋಪಗಳಿಗೆ ಸಾಕ್ಷ್ಯ ಇದ್ದರೆ ಕೋರ್ಟ್‌ಗೆ ಹೋಗಲಿ ಎಂದು ಸವಾಲು ಹಾಕಿದರು.

ನ್ಯಾಯಮೂರ್ತಿ ಕುನ್ಹಾ ಕಮಿಟಿಯ ವರದಿಯನ್ನು ಉಲ್ಲೇಖಿಸಿದ ಖರ್ಗೆ, ನಾವು 40% ಭ್ರಷ್ಟಾಚಾರದ ಆರೋಪವನ್ನು ದಾಖಲೆ ಸಮೇತ ಎತ್ತಿದ್ದೆವು. ಆಗ ಬಿಜೆಪಿಯವರು ಯಾಕೆ ಹೋರಾಟ ಮಾಡಲಿಲ್ಲ? ನಾವು ಪುರಾವೆಗಳೊಂದಿಗೆ ಮಾತನಾಡುತ್ತೇವೆ, ಇವರಂತೆ ಸುಳ್ಳು ಆರೋಪಗಳನ್ನು ಮಾಡುವುದಿಲ್ಲ. ಸರ್ಕಾರವು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕಾನೂನು ತರಲಿದೆ. ಅವರ ಜಾಹೀರಾತುಗಳಲ್ಲಿ ಮಿಸ್ ಇನ್ಫಾರ್ಮೇಶನ್ ತುಂಬಿರುವುದಾಗಿ ಟೀಕಿಸಿದ ಖರ್ಗೆ, ಎಲ್ಲ ಸುಳ್ಳುಗಳಿಗೆ ಕಡಿವಾಣ ಹಾಕುತ್ತೇವೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಆಕ್ರೊಶ:

ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು,ಜೆಜೆಎಂ ಯೋಜನೆಗೆ 3000 ಕೋಟಿ ರೂ. ಬರಬೇಕಿತ್ತು, ಆದರೆ ಕೇವಲ 117 ಕೋಟಿ ಮಾತ್ರ ಬಂದಿದೆ. ಮನರೇಗಾಕ್ಕೆ 500 ಕೋಟಿ ಬರಬೇಕಿತ್ತು, ಆದರೆ ಕೇಂದ್ರದಿಂದ ಸರಿಯಾದ ಅನುದಾನ ಬಂದಿಲ್ಲ. ಬಿಜೆಪಿಯವರು ರಾಜ್ಯಕ್ಕೆ ಅನುದಾನ ಕೇಳಿದರೆ 'ನೀವೇ ಕೊಡಿ' ಎಂದು ಹೇಳುತ್ತಾರೆ ಎಂದು ಆರೋಪಿಸಿದರು.

ಬಿಜೆಪಿ ಎಂಎಲ್‌ಸಿ ರವಿಕುಮಾರ ವಿವಾದ:

ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್‌ರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ರವಿಕುಮಾರ್ ಮನುಸ್ಮೃತಿಯ ಮನಸ್ಥಿತಿಯವರು. ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದವರು. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಅವಕಾಶವಿದೆಯೇ? ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಬಗ್ಗೆ ಮಾತನಾಡ್ತಾರೆ ಮತ್ತು ಐಎಎಸ್ ಅಧಿಕಾರಿ ಸೋಫಿಯಾ ಖುರೇಷಿಯವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ವಿಜಯ್ ಶಾ ಸೋಫಿಯಾ ಖುರೇಷಿಯನ್ನ ಭಯೋತ್ಪಾದಕರ ಸಹೋದರಿ ಅಂದ್ರಲ್ಲ. ಅವರ್ಯಾರು ಬಿಜೆಪಿ ಮಂತ್ರಿ ತಾನೇ? ಅವರ ಮೇಲೆ ಏನು ಕ್ರಮ ಆಯ್ತು? ಮಧ್ಯಪ್ರದೇಶದ ಡಿಸಿಎಂ ದೇವುಡಾ ಏನು ಹೇಳಿದ್ರು, ಅವರ ಬಗ್ಗೆ ಏನಾದ್ರೂ ಕ್ರಮ ಕೈಗೊಂಡ್ರಾ? ಬಡತನದಿಂದ ಐಎಎಸ್ ಆಗಿ ಸೇವೆ ಮಾಡ್ತಿದ್ದಾರೆ. ಅತ್ಯುತ್ತಮ ಸೇವೆ ಅಂತ ಪದಕ ಕೊಟ್ಟಿದ್ದಾರೆ. ಅವರೇನು ಪಾಕಿಸ್ತಾನದವರ? ಅವರ ಬಗ್ಗೆ ಹೀನಾಯವಾಗಿ ಮಾತನಾಡ್ತಾರೆ. ನಮ್ಮ ರಾಜ್ಯದಲ್ಲಿ ಹೆಣ್ಣುಮಗಳು ಸೇವೆ ಸಲ್ಲಿಸ್ತಿದ್ದಾರೆ. ರವಿಕುಮಾರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅದಕ್ಕೆ ಅವರು ಕ್ಷಮೆಯನ್ನೂ ಕೋರಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌