
ಬೆಂಗಳೂರು (ಮೇ.27): ಕೆಎಸ್‌ಡಿಎಲ್‌ನ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವ ವಿಚಾರ ಇನ್ನೂ ತಣ್ಣಗಾಗಿಲ್ಲ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಮನ್ನಾ ಭಾಟಿಯಾ ನೇಮಕದ ಬಗ್ಗೆ ವಿವಾದಿತ ಮಾತನಾಡಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಿ ನಟಿ ತಮ್ಮನ್ನಾ ಅವರನ್ನು ನೇಮಕ ಮಾಡಿದ್ದರ ಹಿಂದೆ ರಾಜ್ಯ ಹಿತದೃಷ್ಟಿ ಇದೆಯೋ? ಅಥವಾ ರಾಜಕಾರಣಿಗಳ ಹಿತದೃಷ್ಟಿ ಇದೆಯೋ ಅನ್ನೋದು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಒಂದು ವರ್ಷದ ಬಳಿಕ 60 ಲಕ್ಷ ಆದರೂ ಲಾಭ ಆಗಿರಬೇಕಲ್ಲ. ಆದರೆ, ತಮನ್ನಾ ಭಾಟಿಯಾಗೆ 6.5 ಕೋಟಿ ನೀಡಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಗೆ ತಮನ್ನಾ ಭಾಟಿಯಾನೇ ಹಾಕಬೇಕು ಎಂದು ಹೇಳಿಲ್ಲ. ಅರ್ಹ ಇದ್ದವರನ್ನ ಪರಿಗಣಿಸಿ. ನಟಿಯನ್ನೇ ಹಾಕಬೇಕು ಎಂದೂ ಹೇಳುತ್ತಿಲ್ಲ. ಮಾರ್ಕೆಟಿಂಗ್ ದೃಷ್ಟಿಯಿಂದ ಯೋಚಿಸಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮನ್ನಾ ಅರ್ಹ ಎಂದು ವಿಜಯೇಂದ್ರ ಹೇಳಿದ್ದಾರೆ.
ತಮನ್ನಾ ಅವರನ್ನು ನೇಮಕ ಮಾಡಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ. ತಮನ್ನಾ ಬದಲು ಕನ್ನಡ ನಟಿಯರು ಉಚಿತವಾಗಿಯೇ ರಾಯಭಾರಿ ಆಗುತ್ತಿದ್ದರು. ಹೀಗಿರುವಾಗ ತಮನ್ನಾಗೆ ಕೋಟಿ ಕೋಟಿ ಸಂಭಾವನೆ ಕೊಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಇದೇ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದು, ತಮ್ಮ ಸಂಬಂಧಿ ಹಾಗೂ ನಟ ಶಿವರಾಜ್ ಕುಮಾರ್ ತಮಿಳಿನ ಜೈಲರ್ ಸಿನಿಮಾದಲ್ಲಿ ನಟಿಸಿಲ್ಲವೇ? ಎನ್ನುವ ಮೂಲಕ ಟಾಂಗ್ ನೀಡಿದ್ದರು.
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರಿಂದಾಗಿ ಮಗು ಸಾವು ಕಂಡ ಪ್ರಕರಣದ ಬಗ್ಗೆ ಮಾತನಾಡಿದ ವಿಜಯೇಂದ್ರ, ಎಲ್ಲಾ ಇಲಾಖೆಗೂ ಟ್ಯಾಕ್ಸ್ ಕಲೆಕ್ಷನ್ ಟಾರ್ಗೆಟ್ ನೀಡಿದ್ದಾರೆ. ಅದೇ ರೀತಿ ಪೊಲೀಸ್ ಇಲಾಖೆಗೂ ನೀಡಿದ್ದಾರೆ. ಅದರ ಪರಿಣಾಮದಿಂದಲೇ ನಿನ್ನೆ ಮಂಡ್ಯದಲ್ಲಿ ಮಗು ಸಾವಾಗಿದೆ ಎಂದಿದ್ದಾರೆ.
ಸರ್ಕಾರದ ಮೇಲೆ ಟೀಕೆ ಮಾಡಿದ ವಿಜಯೇಂದ್ರ, 'ಆಡಳಿತ ಪಕ್ಷ, ವಿಪಕ್ಷ ವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹಿಂದೆ ನಮ್ಮ ಶಾಸಕ ಭರತ್ ಶೆಟ್ಟಿ ನೇಲೆ fir ಹಾಕಿದ್ದರು. ಈಗ ರವಿಕುಮಾರ್ ಮೇಲೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಚಾರ್ಜ್ ಶೀಟ್ ನಾವು ಬಿಡುಗಡೆ ಮಾಡಿದ್ದೇವು. ಸರ್ಕಾರದ ದುಡ್ಡನ್ನು ಪೋಲು ಮಾಡಿ ಜಾತ್ರೆ ಮಾಡಲು ಹೊರಟಿದ್ದರು' ಎಂದು ದೂರಿದ್ದಾರೆ.
ಅದರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅವರಿಗೆ ಮಾನ ನಷ್ಟ ಆದ್ರೆ ತಾನೆ ಮಾನನಷ್ಟ ಮೊಕದ್ದಮೆ ಹಾಕೋಕೆ. ನೀವು ಎರಡು ವರ್ಷದಲ್ಲಿ ಏನು ಮಾಡಿದ್ದೀರಿ. ಕೃಷ್ಣ ಮೇಲ್ದಂಡೆ ಯೋಜನೆ ಏನು ಮಾಡಿದ್ದೀರಿ. ಐದು ಸಾವಿರ ಕೋಟಿ ನೀಡಿ, ಯೋಜನೆ ಮುಗಿಸುತ್ತೇನೆ ಎಂದಿದ್ದರು. ಸಿದ್ದರಾಮಯ್ಯ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ನೀಡಿಲ್ಲ ಎನ್ನುತ್ತಾರೆ. ಕೇಂದ್ರ ಯಾಕೆ ಕೊಡಬೇಕು, ನೀವು ಕೊಟ್ಟ ಮಾತು ಈಡೇರಿಸಿ ಎಂದಿದ್ದಾರೆ.
ಮುಂಗಾರು ಮಳೆಗೆ ಯಾವ ತಯಾರಿ ಮಾಡಿಕೊಂಡಿದ್ದೀರಿ. ಬೀಜಗಳ ಸ್ಟಾಕ್ ಇದೆಯಾ.? ಏನು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ