'ಹೆಚ್ಚಿನ ಲಾಭಕ್ಕಾಗಿ ಮಾಲೀಕರೇ ಮದ್ಯದಂಗಡಿ ಕಳ್ಳತನ ಮಾಡುತ್ತಿದ್ದಾರೆ'

By Suvarna News  |  First Published Apr 19, 2020, 7:32 PM IST

ಕೊರೋನಾ ಲಾಕ್‌ಡೌನ್‌ ನಂತರ ಕರ್ನಾಟಕದಲ್ಲಿ ಮದ್ಯವ್ಯಸನಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಇದರ ಮಧ್ಯೆ ಮದ್ಯದಂಗಡಿ ಕಳ್ಳತನ ಪ್ರಕರಣಗಳು ಸಹ ಮಿತಿ ಮೀರಿ ಹೋಗಿದೆ. ಆದ್ರೆ, ಇದರ ಹಿಂದೆ ಮಾಲೀಕರ ಕೈವಾಡವಿದೆ ಎಂದು ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.


ಬೆಳಗಾವಿ, (ಏ.19): ಕೋವಿಡ್-19 ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್‌ ಡೌನ್ ಆಗಿದೆ. ಈ ವೇಳೆ ಮದ್ಯಪ್ರೀಯರು ಮದ್ಯಕ್ಕಾಗಿ ಪರಿತಪಿಸುವಂತಾಗಿವೆ.

ಅಲ್ಲಲ್ಲಿ ಅಕ್ರಮವಾಗಿ ತ್ರಿಬಲ್ ದರಕ್ಕೆ ಮಾಡಿ ಕೆಲವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಮದ್ಯದಂಗಡಿಗಳ ಕಳ್ಳತನ ಜೋರಾಗಿವೆ. ಇದೇ ಸಿಕ್ಕದ್ದೇ ಚಾನ್ಸ್‌ ಎಂದು ಲಾಭಕ್ಕಾಗಿ ಮಾಲೀಕರೇ ರೀತಿ ಮಾಡುತ್ತಿದ್ದಾರಾ ಎನ್ನುವ ಮಾತುಗಳು ಸಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.

Latest Videos

undefined

ಮದ್ಯ ಕಳುವಾದರೆ ಶಾಪ್‌ ಮಾಲೀಕರೆ ಹೊಣೆ!

ಆದ್ರೆ, ಇದೀಗ ಖುದ್ದು ಸಚಿವರೇ ರಾಜ್ಯದಲ್ಲಿ ಮದ್ಯದಂಗಡಿ ಕಳ್ಳತನದ ಹಿಂದೆ ಮಾಲೀಕರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಅಂಗಡಿಗಳು ಕಳ್ಳತನವಾಗುತ್ತಿವೆ. ಇಲ್ಲಿ  ಹೆಚ್ಚಿನ ಲಾಭಕ್ಕಾಗಿ ಮದ್ಯ ಅಂಗಡಿ ಮಾಲೀಕರೇ ಮದ್ಯವನ್ನ ಕಳ್ಳತನ ಮಾಡಿಸಿ, ಹೆಚ್ಚಿನ ದರಕ್ಕೆ ಅದನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕರ್ನಾಟಕ ಅಬಕಾರಿ ಇಲಾಖೆಯಿಂದ ಹೊರ ಬಿತ್ತು ಮತ್ತೊಂದು ಹೊಸ ಆದೇಶ..!

ಕೊರೋನಾ ವೈರಸ್ ಹತೋಟಿಗೆ ಬರುವವರೆಗೂ ಮದ್ಯದ ಅಂಗಡಿ ಪ್ರಾರಂಭಿಸಬೇಡಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದೇನೆ. ಅದಕ್ಕೆ ಸಿಎಂ ಯಡಿಯೂರಪ್ಪ ಕೂಡ ಸ್ಪಂದಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೊರೋನಾ ನಿಯಂತ್ರಣಕ್ಕೆ ತರಲು ರಾಜ್ಯದಲ್ಲಿ ಎಲ್ಲಾ ಸಚಿವರು, ಶಾಸಕರು ಕೆಲಸ ಮಾಡುತ್ತಿದ್ದಾರೆ. ತಬ್ಲಿಘಿ ಜಮಾತ್‍ನಿಂದ ಬೆಳಗಾವಿ ಜಿಲ್ಲೆಯಲ್ಲಿ  ವೈರಸ್ ಹಬ್ಬಿದೆ. ರಾಜ್ಯದಲ್ಲಿ ಇನ್ನು 15 ದಿನಗಳಲ್ಲಿ ಇದು ಹತೋಟಿಗೆ ಬರಲಿದೆ ಎಂದು ಹೇಳಿದರು.

click me!