ಸಚಿನ್ ಪಾಂಚಾಳ ಪ್ರಕರಣಕ್ಕೂ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ: ತನಿಖೆಗೆ ಮೊದಲೇ ಕ್ಲೀನ್ ಚಿಟ್ ಕೊಟ್ಟ ಸಚಿವ ಬೋಸರಾಜು!

By Ravi Janekal  |  First Published Jan 4, 2025, 5:35 PM IST

ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೂ ಪ್ರಿಯಾಂಕ್ ಖರ್ಗೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಎನ್‌ಎಸ್ ಬೋಸರಾಜು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಸರ್ಕಾರದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.


ಕೊಪ್ಪಳ (ಜ.4): ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳಗೂ ಪ್ರಿಯಾಂಕ್ ಖರ್ಗೆ ಯಾವುದೇ ಸಂಬಂಧ ಇಲ್ಲ, ಸಂಪರ್ಕ ಇಲ್ಲ ಎಂದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಹೇಳಿದರು.

ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಅಧಿಕಾರವಿಲ್ಲದೆ ಅಭದ್ರತೆ ಕಾಡುತ್ತಿದೆ ಹೀಗಾಗಿ ಸರ್ಕಾರದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಕೊರೊನಾದಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಾಹಾರವಾಗಿದೆ, ಯಡಿಯೂರಪ್ಪ ವಿರುದ್ಧ ಪೋಕ್ಸೋ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಹಲವು ಕೇಸ್‌ಗಳಿವೆ. ಅವುಗಳನ್ನು ಸಿಬಿಐಗೆ ಯಾಕೆ ಕೊಡಲಿಲ್ಲ? ನಮ್ಮ ಸರ್ಕಾರದಲ್ಲಿ 6 ಕೇಸ್‌ಗಳನ್ನ ಸಿಬಿಐಗೆ ಕೊಟ್ಟಿದ್ದೆವು. ಆದರೆ ಇದುವರೆಗೆ ಒಂದೂ ತನಿಖೆ ಪೂರ್ಣಗೊಂಡಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನು ರಾಜ್ಯದ ಪೊಲೀಸರೇ ಪಾರದರ್ಶಕ ತನಿಖೆ ನಡೆಸಲಿದ್ದಾರೆ. ಈಗಾಗಲೇ ತಂಡ ಮಹಜರು ಪ್ರಕ್ರಿಯೆ ನಡೆಸಿದೆ, ಸಿಬಿಐ ಕೊಡುವ ಪ್ರಶ್ನೆ ಇಲ್ಲ ಎಂದರು.

Tap to resize

Latest Videos

ಇದನ್ನೂ ಓದಿ: ಬಿಜೆಪಿಯವ್ರು ಹೇಳಿದಂತೆ ಕುಣಿಯೋಕೆ ಆಗೋಲ್ಲ, ಗುತ್ತಿಗೆದಾರ ಕುಟುಂಬಸ್ಥರಿಗೆ ನ್ಯಾಯ ಕೊಡಿಸೋ ಜವಾಬ್ದಾರಿ ನಮ್ದು: ಪ್ರಿಯಾಂಕ್ ಖರ್ಗೆ

ಇನ್ನು ಕಾಂಗ್ರೆಸ್‌ನಿಂದ ಆಪರೇಷನ ಹಸ್ತ ನಡೆತಿದೆ ಎಂಬ ಕೇಂದ್ರ ಸಚಿವ ಹೆಚ್‌ಡಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಸಂಸ್ಕೃತಿ ತಂದವರೇ ಬಿಜೆಪಿಯವರು, ಈಗ ಜೆಡಿಎಸ್ ಬಿಜೆಪಿ ಒಂದಾಗಿದ್ದಾರೆ. ಅವರು ಒಂದಾಗಿರೋದಕ್ಕೆ ಇದೇ ಆಫರೇಷನ್ ಸಂಸ್ಕೃತಿ ಎಂದು ತಿರುಗೇಟು ನೀಡಿದರು.

ಜೆಡಿಎಸ್ ಸಂಪೂರ್ಣ ನೆಲಕಚ್ಚಿದೆ ಹೀಗಾಗಿ ಅವರು ಬಿಜೆಪಿಯೊಂದಿಗೆ ಸೇರಿಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್‌ನಲ್ಲೇ ಹಿರಿಯ ನಾಯಕರು, ಶಾಸಕರು ಅಸಮಾಧಾನಗೊಂಡಿದ್ದಾರೆ. ಯಾವಾಗ ಪಕ್ಷ ತೊರೆಯುತ್ತಾರೋ ಗೊತ್ತಿಲ್ಲ. ಅದ್ಯಾಗೂ ನಮಗೆ ಈಗ ಬೇರೆ ಪಕ್ಷದ ಅವಶ್ಯಕತೆ ಇಲ್ಲ ಎಂದರು. ಇದೇ ವೇಳೆ ಸಚಿವ ಸಂಪುಟದ ಪುನರಚನೆಯ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಅದರ ಬಗ್ಗೆ ಸಿಎಂ ಸ್ಪಷ್ಠಪಡಿಸಿದ್ದಾರೆ. ಸಚಿವ ಸಂಪುಟ ಪುನರಚನೆ ಮಾಡುವ ನಿರ್ಧಾರ ಸಿಎಂ ಅವರದ್ದು ಎಂದರು.

click me!