Karnataka Govt : ಶಾಸಕರ ನಿ​ಧಿ ಹಿಂಪಡೆಯದಂತೆ ಸರ್ಕಾರದ ಸೂಚನೆ

Kannadaprabha News   | Asianet News
Published : Dec 22, 2021, 09:57 AM IST
Karnataka Govt :   ಶಾಸಕರ ನಿ​ಧಿ ಹಿಂಪಡೆಯದಂತೆ ಸರ್ಕಾರದ ಸೂಚನೆ

ಸಾರಾಂಶ

ಶಾಸಕರ ನಿ​ಧಿ ಹಿಂಪಡೆಯದಂತೆ ಸರ್ಕಾರದ ಸೂಚನೆ  2017-18ನೇ ಸಾಲಿನ ಶಾಸಕರ ನಿ​ಧಿ ಹಿಂಪಡೆಯಲು ಸಜ್ಜಾಗಿದ್ದ ಇಲಾಖೆ  

 ವಿಧಾನಸಭೆ (ಡಿ.22):   ಕಳೆದ 2017-18ನೇ ಸಾಲಿನ ಶಾಸಕರ ನಿಧಿ​ (MLA Fund) ಬಳಕೆಯಾಗದಿದ್ದರೆ ಅದನ್ನು ಹಿಂಪಡೆಯಬೇಕು ಎನ್ನುವ ಆದೇಶ ವಾಪಸ್‌ ಪಡೆಯಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ಸ್ಪಷ್ಟಪಡಿಸಿದರು. ಮಂಗಳವಾರ ಶೂನ್ಯವೇಳೆಯಲ್ಲಿ ಹಲವು ಶಾಸಕರ (MLA ) ಪರವಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Kageri) ಮಾತನಾಡಿ, ಶಾಸಕರ ನಿ​ಧಿ ಬಳಕೆಯಾಗದಿದ್ದರೆ ಜಿಲ್ಲಾ​ಧಿಕಾರಿಗಳ (DC) ಖಾತೆಗೆ ಹಿಂಪಡೆಯಲು ಆದೇಶ ಹೊರಡಿಸಲಾಗಿತ್ತು. ಇದರಿಂದ ಹಲವು ಶಾಸಕರಿಗೆ (MLA) ಸಮಸ್ಯೆಯಾಗುತ್ತದೆ. ಆದ್ದರಿಂದ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದರು.

ಇದಕ್ಕೆ ಉತ್ತರಿಸಿದ ಮಾಧುಸ್ವಾಮಿ (Madhuswamy) ಅವರು, ಬಳಕೆಯಾಗದೇ ಇರುವ ಹಾಗೂ ಬಾಕಿ ಉಳಿದಿರುವ ಅನುದಾನವನ್ನು ಶಾಸಕರ ನಿ​ಧಿಗೆ ನೀಡಲಾಗುವುದು. ಇದರೊಂದಿಗೆ ಕೆಲ ಜಿಲ್ಲೆಗಳಲ್ಲಿ ಜಿಲ್ಲಾಧಿ​ಕಾರಿಗಳ (DC) ಖಾತೆಗೆ ಹೋಗಿರುವ ಅನುದಾನವನ್ನು ಪುನಃ ನೀಡಲು ಸೂಚನೆ ನೀಡಲಾಗಿದೆ. ಆದ್ದರಿಂದ ಯಾವ ಶಾಸಕರ (MLA) ಅನುದಾನದಲ್ಲಿಯೂ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶೀಘ್ರದಲ್ಲೇ ರೈತರ ಖಾತೆಗೆ ಹಣ, ಆದ್ರೆ ಇವರಿಗಿಲ್ಲ ಯೋಜನೆ ಫಲಾನುಭವಿಯಾಗೋ ಭಾಗ್ಯ

 ದೇಶದ ರೈತರಿಗೆ ಕೇಂದ್ರ ಸರ್ಕಾರ (Central government) ಶುಭ ಸುದ್ದಿ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ 10ನೇ ಕಂತಿನ ಹಣವು ಶೀಘ್ರದಲ್ಲೇ ರೈತರ(Farmers) ಬ್ಯಾಂಕ್ ಖಾತೆಗೆ (Bank Account) ಜಮೆಯಾಗಲಿದೆ. ಡಿಸೆಂಬರ್ 15 ಹಾಗೂ 25 ರ ನಡುವೆ ಯಾವ ದಿನ ಬೇಕಿದ್ದರೂ ಈ ಹಣ  ಖಾತೆಗೆ ಬರಬಹುದು ಎಂದು ಮೂಲಗಳು ತಿಳಿಸಿವೆ.  ಈ ಯೋಜನೆ ಮುಖಾಂತರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು  6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಈ ರೀತಿ ಇಲ್ಲಿಯ ತನಕ ಸರ್ಕಾರ 9n ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ತಿಂಗಳು ಹತ್ತನೇ ಕಂತಿನ ಹಣವನ್ನು ಜಮೆ ಮಾಡಬೇಕಿದೆ. ಒಂದು ವೇಳೆ ನೀವು ರೈತರಾಗಿದ್ದು, ಇನ್ನೂ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಸೇರ್ಪಡೆಗೊಂಡಿಲ್ಲ ಎಂದಾದ್ರೆ ಇಂದೇ ಹೆಸರು ನೋಂದಾಯಿಸಿ. 

10ನೇ ಕಂತಿನ ಫಲಾನುವಿ ಪಟ್ಟಿ ಪರಿಶೀಲಿಸೋದು ಹೇಗೆ?
-ಮೊದಲಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ https://pmkisan.gov.in/ ಭೇಟಿ ನೀಡಿ.
-ಈಗ ಮುಖಪುಟದಲ್ಲಿ 'Farmers Corner'ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
-ಇಲ್ಲಿ Beneficiary List ಮೇಲೆ ಕ್ಲಿಕ್ ಮಾಡಿದ್ರೆ ಹೊಸ ಪುಟ ತೆರೆದುಕೊಳ್ಳುತ್ತದೆ.
-ಈ ಪುಟದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದ ಮಾಹಿತಿ ಭರ್ತಿ ಮಾಡಿ.
-ಆ ಬಳಿಕ Get Report ಆಯ್ಕೆ ಮೇಲೆ ಕ್ಲಿಕಿಸಿ. ಈಗ ನಿಮಗೆ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಇದ್ರಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿ.

Tata Motors:ವಾಣಿಜ್ಯ ವಾಹನ ಉತ್ಪಾದನೆ ಉದ್ಯಮದಲ್ಲಿ 7,500ಕೋಟಿ ರೂ. ಹೂಡಿಕೆಗೆ ನಿರ್ಧಾರ?

 ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
-ಮುಖಪುಟದಲ್ಲಿ ಕಾಣಿಸೋ 'Farmers Corner'ಎಂಬ ಆಯ್ಕೆ ಮೇಲೆ ಕ್ಲಿಕಿಸಿ.
-ಈಗ 'New Farmer Registration'ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ. ಇದ್ರಲ್ಲಿ ಕೇಳಿರೋ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
-ಬಳಿಕ submit ಆಯ್ಕೆ ಮೇಲೆ ಕ್ಲಿಕ್ ಮಾಡಿ. 

UPI Payment Limit:ಐಪಿಒ, ಸರ್ಕಾರಿ ಬಾಂಡ್ ಹೂಡಿಕೆಗೆ ಯುಪಿಐ ವಹಿವಾಟು ಮಿತಿ 5ಲಕ್ಷ ರೂ.ಗೆ ಏರಿಕೆ

ಈ ರೈತರಿಗೆ ಪ್ರಯೋಜನ ಸಿಗಲ್ಲ
-ಒಂದು ಕುಟುಂಬದ ಯಾವುದೇ ಸದಸ್ಯ ಆದಾಯ ತೆರಿಗೆ ಪಾವತಿಸುತ್ತಿದ್ರೆ ಅಂಥ ಕುಟುಂಬದ ರೈತನಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾರ ಬಳಿ ಕೃಷಿಯೋಗ್ಯ ಭೂಮಿಯಿಲ್ಲವೋ ಅಂಥವರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
-ಒಂದು ವೇಳೆ ಕೃಷಿ ಭೂಮಿ ನಿಮ್ಮ ಹೆಸರಿನಲ್ಲಿ ಇಲ್ಲದಿದ್ರೆ ಅಂದ್ರೆ ನಿಮ್ಮ ತಾತಾ ಅಥವಾ ಅಪ್ಪನ ಹೆಸರಿನಲ್ಲಿದ್ರೆ ನೀವು ಈ ಯೋಜನೆ ವ್ಯಾಪ್ತಿಗೆ ಒಳಪಡೋದಿಲ್ಲ.
-ಒಂದು ವೇಳೆ ನೀವು ಕೃಷಿ ಭೂಮಿ ಹೊಂದಿದ್ದು, ಸರ್ಕಾರಿ ನೌಕರಿಯಲ್ಲಿದ್ರೆ ನಿಮಗೆ ಈ ಯೋಜನೆ ಲಾಭ ಸಿಗೋದಿಲ್ಲ.
-ನೋಂದಾಯಿತ ವೈದ್ಯ, ಇಂಜಿನಿಯರ್, ನ್ಯಾಯವಾದಿ ಹಾಗೂ ಸಿಎ ಅಂಥ ಹುದ್ದೆಯಲ್ಲಿರೋ ವ್ಯಕ್ತಿ ಹೆಸರಿನಲ್ಲಿ ಕೃಷಿ ಭೂಮಿ ಇದ್ದರೂ ಆತ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾವುದೇ ರೈತನಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ದೊರೆಯುತ್ತಿದ್ರೆ, ಅಂಥವರು ಕೂಡ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ