Karnataka Scheduled Tribe : ಕಾಡುಗೊಲ್ಲ ಸಮುದಾಯ ಎಸ್‌ಟಿ ಸೇರ್ಪಡೆಗೆ ಕ್ರಮ

By Kannadaprabha News  |  First Published Dec 22, 2021, 9:22 AM IST
  • ಕಾಡುಗೊಲ್ಲ ಸಮುದಾಯ ಎಸ್‌ಟಿ ಸೇರ್ಪಡೆಗೆ ಕ್ರಮ 
  • ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಮಾಹಿತಿ ರವಾನಿಸಿ ಸೇರ್ಪಡೆಗೆ ಕ್ರಮ
     

ವಿಧಾನಸಭೆ (ಡಿ.22): ಕಾಡುಗೊಲ್ಲ (Kadugolla) ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರ ಕೇಳಿರುವ ಎಲ್ಲ ಸ್ಪಷ್ಟನೆಗಳಿಗೆ ಸರಿಯಾದ ಮಾಹಿತಿ ಒದಗಿಸಿ ಮತ್ತೊಮ್ಮೆ ಶಿಫಾರಸು ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ (JC madhuswamy) ಭರವಸೆ ನೀಡಿದ್ದಾರೆ.  ಮಂಗಳವಾರ ಗೊಲ್ಲ ಸಮುದಾಯದ ಕಾಡುಗೊಲ್ಲ ಉಪ ಪಂಗಡಗಳನ್ನು ಎಸ್‌ಟಿ (ST) ಸಮುದಾಯಕ್ಕೆ ಸೇರಿಸುವ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ (ST) ಸಮುದಾಯಕ್ಕೆ ಸೇರಿಸಬೇಕೆಂದು ಪಕ್ಷಾತೀತವಾಗಿ ಪ್ರತಿಯೊಬ್ಬ ಸದಸ್ಯರು ಒತ್ತಾಯಿಸಿದ್ದಾರೆ. 2014ರಿಂದಲೂ ಎಸ್‌ಟಿಗೆ ಸೇರಿಸುವ ವಿಚಾರ ನೆನೆಗುದಿಗೆ ಬಿದ್ದಿದೆ. ಯಾವುದೇ ರಾಜಕೀಯ (Politics) ಮಾಡದೆ ಎಸ್‌ಟಿಗೆ ಸೇರಿಸುವ ಪ್ರಯತ್ನ ಎಲ್ಲ ಸರ್ಕಾರಗಳ ಅವಧಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರ (Govt Of India) ಮತ್ತೊಮ್ಮೆ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದು, ಸೂಕ್ತ ಮಾಹಿತಿಯೊಂದಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಮದುವೆ ಮತ್ತು ಪೂಜೆ ವಿಧಿವಿಧಾನಗಳು ಸೇರಿದಂತೆ ಇತರೆ ಅಂಶಗಳು ಹಿಂದೂ ಸಮಾಜದ ರೀತಿ - ರಿವಾಜುಗಳಿಗಿಂತ ವಿಭಿನ್ನವಾಗಿವೆ. ಹೀಗಾಗಿ ಎಸ್‌ಟಿ (ST) ಸೇರಿಸುವುದು ಕಷ್ಟಎಂದು ಕೇಂದ್ರ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಾಡುಗೊಲ್ಲ (Kadugolla) ಸಮುದಾಯದ ಅಭಿವೃದ್ಧಿಗೆ ರಚನೆ ಮಾಡಿರುವ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡುವ ವಿಚಾರದಲ್ಲಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದರು.

Latest Videos

undefined

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಾತನಾಡಿ, ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವ ಕುರಿತು ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಯಾವ ಕಾರಣಕ್ಕಾಗಿ ಇಷ್ಟುವರ್ಷಗಳ ಕಾಲ ಬಾಕಿ ಉಳಿಸಿಕೊಳ್ಳಲಾಗಿತ್ತು ಎಂಬುದು ಗೊತ್ತಿಲ್ಲ. ಮೈಸೂರು (Mysuru) ವಿಶ್ವವಿದ್ಯಾಲಯದ ಡಾ. ಅನ್ನಪೂರ್ಣ ಅವರು ಸಮುದಾಯದ ಕುಲಶಾಸ್ತ್ರದ ಬಗ್ಗೆ ಸಂಪೂರ್ಣ ವರದಿ ನೀಡಿದ್ದಾರೆ. ಎಸ್‌ಟಿಗೆ (ST) ಸೇರಿಸಲು ಸಮುದಾಯ ಎಲ್ಲಾ ಅರ್ಹತೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕಾಡುಗೊಲ್ಲ ಸಮುದಾಯ ಎಸ್‌ಟಿಗೆ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರದ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ (JDS) ಸದಸ್ಯ ಶಿವಲಿಂಗೇಗೌಡ, ಬಿಜೆಪಿ ಸದಸ್ಯೆ ಪೂರ್ಣಿಮಾ, ಕಾಂಗ್ರೆಸ್‌ (Congress) ಸದಸ್ಯ ಡಾ.ರಂಗನಾಥ್‌ ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

SC - ST ಮತಾಂತರ ಆದರೆ ಕ್ರೈಸ್ತರಾಗ್ತಾರಾ..? :  ಪರಿಶಿಷ್ಟಜಾತಿ (Scheduled Castes)ಯ ವ್ಯಕ್ತಿಯೇನಾದರೂ ಕ್ರಿಶ್ಚಿಯನ್‌ ಆಗಿ ಮತಾಂತರವಾದರೆ (Conversion to Christianity) ಆತ ಅಲ್ಪಸಂಖ್ಯಾತನಾಗುತ್ತಾನೆ. ಆತನ ಮೂಲ ಜಾತಿ ಪ್ರಮಾಣ ಪತ್ರವು (Caste Certificate) ತಿದ್ದುಪಡಿಗೊಳ್ಳಲಿರುವ ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಬದಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J. C. Madhu Swamy) ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅನ್ಯಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿಯ ಸೌಲಭ್ಯ ಪಡೆಯುವುದು ಇನ್ನು ಮುಂದೆ ಅಸಾಧ್ಯ ಎಂದು ತಿಳಿಸಿದರು.

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಪರಿಶಿಷ್ಟಜಾತಿಯವರು ಮತಾಂತರವಾದರೆ ಮಾತ್ರ ಅವರ ಪ್ರಮಾಣಪತ್ರ ಬದಲಾಗುತ್ತದೆ. ಆದರೆ, ಪರಿಶಿಷ್ಟಪಂಗಡ (Scheduled Tribes) ದವರು ಮತಾಂತರಗೊಂಡರೆ ಮೂಲ ಜಾತಿ ಪ್ರಮಾಣಪತ್ರದಲ್ಲೇ ಅಂದರೆ ಎಸ್ಟಿ ಪ್ರಮಾಣಪತ್ರದಲ್ಲೇ ಮುಂದುವರಿಯುತ್ತಾರೆ. ಎಸ್ಸಿ ಜಾತಿ ಸೂಚಕವಾದರೆ, ಎಸ್ಟಿಬುಡಕಟ್ಟು ಸೂಚಕ. ಹೀಗಾಗಿ ಪರಿಶಿಷ್ಟಪಂಗಡದವರು ಯಾವುದೇ ಧರ್ಮಕ್ಕೆ ಬದಲಾದರೂ ಅವರು ಎಸ್‌ಟಿಯಾಗಿಯೇ ಮುಂದುವರಿಯುತ್ತಾರೆ. ಈ ಅಂಶವನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

click me!